ಹರಪನಹಳ್ಳಿ : ಎಡೆನಾಡು ರಾಯಚೂರು ಜಿಲ್ಲಾ ಉತ್ಸವ ಪ್ರಯುಕ್ತ ಜರುಗಿದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಬೆಳ್ಳಿಗದೆ ಭಾಜನಾಗಿರುವ ತಾಲ್ಲೂಕಿನ ಅರಸೀಕೆರೆ ಗ್ರಾಮದ ಪೈಲ್ವಾನ್ ಗುಂಡಗತ್ತಿ ಮಾರುತಿ ಅವರನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಅವರು ಸನ್ಮಾನಿಸಿದರು.
ವೈಡಿ ಅಣ್ಣಪ್ಪ ಪದವಿ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿರುವ ಮಾರುತಿ ಅವರ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋಲಶಾಂತೇಶ್ವರ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ, ಬಿಜೆಪಿ ಮುಖಂಡ ಪ್ರಶಾಂತ ಪಾಟೀಲ್, ಪ್ರಾಚಾರ್ಯ ಸುರೇಶ್, ಪರಸಪ್ಪ, ದುರುಗಪ್ಪ, ನಿಂಗಪ್ಪ ಇದ್ದರು.
Leave a comment