Home ಸುದ್ದಿಗಳು ಸದೃಢ ನಾಡು ಕಟ್ಟುವುದು ಧರ್ಮಪೀಠಗಳ ಗುರಿ : ರಂಭಾಪುರಿ ಶ್ರೀ
ಸುದ್ದಿಗಳು

ಸದೃಢ ನಾಡು ಕಟ್ಟುವುದು ಧರ್ಮಪೀಠಗಳ ಗುರಿ : ರಂಭಾಪುರಿ ಶ್ರೀ

Share
Share

ಹರಪನಹಳ್ಳಿ : ಸಮೃದ್ಧ ಸದೃಢ ನಾಡು ಕಟ್ಟುವುದೇ ಧರ್ಮ ಪೀಠಗಳ ಗುರಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ವಿಜಯನಗರ ಜಿಲ್ಲೆ ಹರಪನಹಳ್ಳಿ ನಗರದ ತೆಗ್ಗಿನಮಠದಲ್ಲಿ ಮಂಗಳವಾರ ಜರುಗಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಪದಗ್ರಹಣ, ಲಾಂಛನ, ಮತ್ತು ವೆಬ್ ಸೈಟ್ ಬಿಡುಗಡೆ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸಂವೇದನಾಶೀಲ ಜೀವನಕ್ಕೆ ವೀರಶೈವ ಧರ್ಮ ಕೊಟ್ಟ ಕೊಡುಗೆ ಅಪಾರ. ಬದುಕಿನ ಉನ್ನತಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅಡಿಪಾಯ. ಸತ್ಕಾರ್ಯಗಳ ಸಾಧನೆಗೆ ಸಾಮರಸ್ಯ ಮತ್ತು ಸಂಘಟನೆ ಅಗತ್ಯ ಎಂದು ತಿಳಿಸಿದರು.
ಖಜಾಂಚಿ ತೆಗ್ಗಿನಮಠ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಸ್ವಾಮೀಜಿ ಕೇವಲ ಮಠದ‌ ಕಾವಲು ನಾಯಿಯಲ್ಲ. ಅವರೋ ನಾಡಿನ‌‌ ಕಲ್ಯಾಣ ಮಾಡುವ ಶಕ್ತಿ ಹೊಂದಿರುವ ದೊಡ್ಡ ಶಕ್ತಿ. ಶಿವಾಚಾರ್ಯರು ಸಂಘಟಿತ ಆಗಿರುವುದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಶಿವಗಂಗೆ ಮಲಯಶಾಂತಮುನಿ ಸ್ವಾಮೀಜಿ, ಪಂಚಪೀಠಗಳು ವೀರಶೈವ ಧರ್ಮ ವಿಶ್ವವ್ಯಾಪಿ ಎಂಬುದನ್ನು ಸಾಭೀತುಪಡಿಸಿವೆ ಎಂದರು.
ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅವರು, ಸಂಸ್ಥೆಯ ರಚನೆ‌ ಮತ್ತು ಉದ್ದೇಶಗಳನ್ನು ವಿವರಿಸಿದರು.
ಗೌರವ ಅಧ್ಯಕ್ಷ ಎಡೆಯೂರು ರೇಣುಕಾ ಶಿವಾಚಾರ್ಯ ಸ್ವಾಮೀಜಿ, ನಿಕಟಪೂರ್ವ ಅಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಶಿವಗಂಗೆ ಮಲಯಶಾಂತಮುನಿ ಸ್ವಾಮೀಜಿ ಮಾತನಾಡಿದರು.
ಬೆಳಗಾವಿ, ಧಾರವಾಡ, ಮಂಡ್ಯ , ಮೈಸೂರು, ಚಾಮರಾಜನಗರ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಕೊಡಗು, ಹಾಸನ, ವಿಜಯನಗರ, ಬಳ್ಳಾರಿ, ಕಾರವಾರ, ಹಾವೇರಿ, ಗದಗ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಸ್ವಾಮೀಜಿಗಳು ಪ್ರಮಾಣ‌ ವಚನ ಸ್ಚೀಕರಿಸುವ ಮೂಲಕ ಸಮಾನ ಮನಸ್ಕ ವೀರಶೈವ ಮಠಗಳು ಒಟ್ಟಾಗಿರುವ ಸಂದೇಶ ನೀಡಿದರು.
ಉಪಾಧ್ಯಕ್ಷರಾದ ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ,ಮಹಾರಾಷ್ಟ್ರ ನಾಗಣಸೂರು ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ತೆಲಂಗಾಣ ಬಿಚಗುಂದದ ಸೋಮಲಿಂಗ ಸ್ವಾಮೀಜಿ, ವಕ್ತಾರರಾದ ಎಮ್ಮಿಗನೂರು ವಾಮದೇವ ಮಹಾಂತ ಸ್ವಾಮೀಜಿ, ಬೆಂಗಳೂರು ಮಹಾಂತಲಿಂಗ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಸ್ವಾಮೀಜಿ ಅವರುಗಳು ಸಂಸ್ಥೆಯ ವಿವಿಧ ಹುದ್ದೆ ಅಲಂಕರಿಸಿದರು. ತೆಗ್ಗಿನಮಠದ ಆಡಳಿತಾಧಿಕಾರಿ ಟಿ.ಎಂ‌‌.ಚಂದ್ರಶೇಖರಯ್ಯ, ವೀರಶೈವ ಮಹಾಸಭಾ‌ ತಾಲ್ಲೂಕು ಅಧ್ಯಕ್ಷ ಎಂ‌.ರಾಜಶೇಖರ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.