Home ಸುದ್ದಿಗಳು  ಕೂಡ್ಲಿಗಿ :ಊರಮ್ಮದೇವಿಗೆ 25 ಲಕ್ಷ ರೂಪಾಯಿ ಕಿರೀಟ  
ಸುದ್ದಿಗಳು

 ಕೂಡ್ಲಿಗಿ :ಊರಮ್ಮದೇವಿಗೆ 25 ಲಕ್ಷ ರೂಪಾಯಿ ಕಿರೀಟ  

Share
KUDLIGI URAMAM DEVI
Share

ಕೂಡ್ಲಿಗಿ : ‘ಕ್ಷೇತ್ರದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸುಧಾರಣೆಯ ಜತೆಗೆ ಧಾರ್ಮಿಕ ಕೇಂದ್ರಗಳ ಪುನರುಜ್ಜೀವನಕ್ಕೂ ಒತ್ತು ನೀಡಲಾಗುತ್ತಿದೆ’ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿಗೆ ಭಕ್ತರ ದೇಣಿಗೆಯಿಂದ ಮಾಡಿಸಲಾದ ಸುಮಾರು 25 ಲಕ್ಷ ರೂ. ಮೌಲ್ಯದ ನೂತನ ಬಂಗಾರದ ಮುಖ ಹಾಗೂ ಕಿರೀಟವನ್ನು ಮಂಗಳವಾರ ಭಕ್ತಿಭಾವದಿಂದ ಅರ್ಪಿಸಿದ ಬಳಿಕ ಅವರು ಮಾತನಾಡಿದರು.

ಕಳೆದ ವರ್ಷ ಸುಮಾರು ರೂ 3 ಕೋಟಿ ಗೂ ಅಧಿಕ ವೆಚ್ಚದಲ್ಲಿ ಊರಮ್ಮ ದೇವಿಯ ಭವ್ಯ ದೇವಸ್ಥಾನ ನಿರ್ಮಿಸಲಾಗಿತ್ತು. ಈಗ ಭಕ್ತರು ನೀಡಿದ ದೇಣಿಗೆಯಲ್ಲಿ ದೇವಿಗೆ ಸ್ವರ್ಣ ಮುಖ ಮತ್ತು ಕಿರೀಟ ಮಾಡಿಸುವ ಮೂಲಕ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ದೇವಸ್ಥಾನ ನಿರ್ಮಾಣದಲ್ಲಿ ಆಡಳಿತ ಮಂಡಳಿ ಹಾಗೂ ಭಕ್ತರ ಕಾರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಶಾಸಕನಾಗಿ ಗ್ರಾಮದೇವತೆ ದೇವಸ್ಥಾನಕ್ಕೆ ಸಹಕಾರ ನೀಡುವುದರೊಂದಿಗೆ, ಮುಂಬರುವ ದಿನಗಳಲ್ಲಿ ಕ್ಷೇತ್ರದ ಎಲ್ಲ ದೇವಸ್ಥಾನಗಳಿಗೂ ಅಗತ್ಯ ಮೂಲಸೌಕರ್ಯ ಹಾಗೂ ಅನುದಾನ ನೀಡಿ ಅಭಿವೃದ್ಧಿಪಡಿಸುವೆ’ ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ದೇವಿಯ ನೂತನ ಚೌಕಿ ಮನೆಗೆ ಗಂಗೆ ತರುವ ಮೂಲಕ ಲೋಕಾರ್ಪಣೆ ಮಾಡಲಾಯಿತು.

ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್.ವೀರನಗೌಡ, ಹಿ.ಮ.ಚಿದಾನಂದ ಸ್ವಾಮಿ, ಮುಖಂಡರಾದ ಉದಯ ಜನ್ನು, ಎಸ್.ಸುರೇಶ್, ಸಿ.ಬಿ.ಜಯರಾಂ ನಾಯಕ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಶೆಟ್ರು ಬಸವರಾಜ, ಬಣಕಾರ ಮಂಜುನಾಥ, ಢಾಣಿ ರಾಘವೇಂದ್ರ, ಢಾಣಿ ಚೌಡಮ್ಮ, ಶೆಟ್ರು ಬಸವರಾಜ, ಅರ್ಚಕ ನಾಗರಾಜ, ಈರಣ್ಣ, ಕೆ.ಈಶಪ್ಪ, ಬಿ.ಕೆ.ರಾಘವೇಂದ್ರ, ಕಡ್ಡಿ ಮಂಜುನಾಥ ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.