ಹರಪನಹಳ್ಳಿ : ಪತ್ರಿಕೋದ್ಯಮದಲ್ಲಿ ನಿಷ್ಠೆ, ಧೈರ್ಯ ಮತ್ತು ಪ್ರಾಮಾಣಿಕತೆ ಇದ್ದರೆ ಸಮಾಜದ ದಿಕ್ಕು ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ಪ್ರಗತಿಪರ ಮುಖಂಡ ಕೋಡಿಹಳ್ಳಿ ಭೀಮಪ್ಪ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ವಿಜಯ ವಿಕ್ರಮ ಪತ್ರಿಕೆ ಬಳಗ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕೆ ಬಿಡುಗಡೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಪ್ರಶ್ನಿಸುವ ಗುಣ ಮತ್ತು ಸಮಸ್ಯೆ ಎದುರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಹೆಚ್ಚು ಅಧ್ಯಯನ ಶೀಲರಾದರೆ ಮಾತ್ರ ದೇಶದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ಸಾಧ್ಯವಾಗುತ್ತದೆ. ಇಂತಹ ಜನಪರವಾಗಿ ಕೆಲಸ ಮಾಡುವ ಪತ್ರಿಕೆ, ಸಂಘಟನೆಗಳನ್ನು ಪ್ರತಿಯೊಬ್ಬರು ಬೆಂಬಲಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ದೇಶದ ಕಾನೂನಿನ ಮೇಲೆ ಜನ ಅಪಾರ ನಂಬಿಕೆಯಿಟ್ಟಿದ್ದಾರೆ. ಕಾನೂನು ಪಾಲಕರು ತಾರತಮ್ಯ ಎಸಗಿದಾಗ ಅದನ್ನು ಪ್ರಶ್ನಿಸುವ ಎದೆಗಾರಿಕೆ ಪತ್ರಕರ್ತರಿಗೆ ಮಾತ್ರ ಇರುತ್ತದೆ. ಅವರಂತೆ ಜನಸಾಮಾನ್ಯರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಾವುದೇ ಸಂಬಳ ಇರುವುದಿಲ್ಲ, ಸಮಾಜದಲ್ಲಿ ಅನ್ಯಾಯದ ವಿರುದ್ದ ಹೋರಾಡುವ ಕೆಲಸವನ್ನು ಮಾಧ್ಯಮದವರು ಮಾಡಬೇಕು ಎಂದರು.
ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ ಸ್ವಾಮೀಜಿ, ಬೆಣ್ಣಿಹಳ್ಳಿ ಹಿರಮೇಠದ ಪಂಚಾಕ್ಷರ ಸ್ವಾಮೀಜಿ, ಮುತ್ತಿಗಿ ಶಿವಯೋಗಿ ಅಜ್ಜಯ್ಯ ಹಾಲಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್ , ಪುರಸಭೆ ಮಾಜಿ ಅಧ್ಯಕ್ಷ ಡಿ.ಅಬ್ದುಲ್ ರೆಹಮಾನ್, ವಿಜಯ ವಿಕ್ರಮ ಪತ್ರಿಕೆ ಸಂಪಾದಕ ಹೆಚ್.ರಮೇಶನಾಯ್ಕ ಮಾತನಾಡಿದರು. ಮುಖಂಡರಾದ ಪಟೇಲ್ ಬೆಟ್ಟನಗೌಡ, ಶಶಿಧರ ಪೂಜಾರ, ಹೊಸಳ್ಳಿ ಮಲ್ಲೇಶ, ಇಸ್ಮಾಯಿಲ್ ಎಲಿಗಾರ, ರುದ್ರಪ್ಪ ಕಾನಹಳ್ಳಿ. ತಿಮ್ಮನಾಯ್ಕ, ಮಂಜುನಾಥ್ ಕಣವಿಹಳ್ಳಿ, ಕೆ. ಕೆಂಚಪ್ಪ, ನೂರುದ್ದಿನ್, ಹಲಗಿ ಸುರೇಶ, ಎಲ್.ಪ್ರಕಾಶನಾಯ್ಕ, ತಿಮ್ಮನಾಯ್ಕ, ವೆಂಕಟೇಶ, ಕೆ.ಉಚ್ಚೆಂಗೆಪ್ಪಮ ಹೆಚ್.ವಸಂತಪ್ಪ ಇತರರಿದ್ದರು.
Leave a comment