ಹರಪನಹಳ್ಳಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಇಲಾಖೆಯ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಹಲವಾಗಲು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎ.ಎಂ. ಶಂಭುಲಿಂಗಯ್ಯ ಹಾಗೂ ಗೌರವಧ್ಯಕ್ಷರಾಗಿ ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಳಿಗನೂರು ಚಂದ್ರಪ್ಪ ಅವರು ಆಯ್ಕೆಯಾಗಿದ್ದಾರೆ.
ನಗರದ ತಾಲ್ಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ತಾಲ್ಲೂಕು ಸಮಿತಿ ಪುನರ್ ರಚಿಸಲಾಯಿತು. ಆರ್.ಡಿ.ಪಿ.ಆರ್ ಇಲಾಖೆಯ ನೌಕರರ ಸಂಘದ ಖಜಾಂಚಿಯಾಗಿ ಲಿಂಗರಾಜ್ ನೀಲಗುಂದ ಮತ್ತು ಇಲಾಖೆಯ ಎಲ್ಲಾ ವೃಂದದಿಂದ ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಸದಸ್ಯರನ್ನಾಗಿ ಒಟ್ಟು 25 ನೌಕರರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Leave a comment