Home ಎಡಿಬಿ ಕಾಲೇಜು  ಸುವರ್ಣ-ರಜತ ಸಂಭ್ರಮಕ್ಕೆ ಸಹಕಾರ ಅಗತ್ಯ
Homeಸುದ್ದಿಗಳು

ಎಡಿಬಿ ಕಾಲೇಜು  ಸುವರ್ಣ-ರಜತ ಸಂಭ್ರಮಕ್ಕೆ ಸಹಕಾರ ಅಗತ್ಯ

Share
ADB COLLEGE HARAPANAHALLI
Share

ಹರಪನಹಳ್ಳಿ: “ಕಾಲೇಜಿನ ಸುವರ್ಣ ಮತ್ತು ರಜತ ಮಹೋತ್ಸವದ ಯಶಸ್ಸು ಕೇವಲ ಸಿಬ್ಬಂದಿಗೆ ಸೀಮಿತವಲ್ಲ. ಇದು ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಯ ಸಹಕಾರ ಮತ್ತು ಒಗ್ಗಟ್ಟು ತೀರಾ ಅಗತ್ಯ,” ಎಂದು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟ್ಟೂರೇಶ್ವರ ತಿಳಿಸಿದರು.

ನಗರದ ಅಂಬ್ಲಿ ದೊಡ್ಡಭರಮಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹಳೇ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ವೀ.ವಿ. ಸಂಘದ ಅಜೀವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಶತಮಾನದ ಶೈಕ್ಷಣಿಕ ಇತಿಹಾಸವಿರುವ ಬಳ್ಳಾರಿಯ ವೀ.ವಿ. ಸಂಘದಡಿ 1972ರಲ್ಲಿ ಎ.ಡಿ.ಬಿ. ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಿ 50 ವರ್ಷ ಪೂರೈಸಿದ ಸುವರ್ಣ ಸಂಭ್ರಮ ಹಾಗೂ 1999ರಲ್ಲಿ ಆರಂಭವಾಗಿರುವ ಎಸ್.ಎಸ್.ಎಚ್. ಜೈನ್ ಪಿಯು ಕಾಲೇಜು   25 ವರ್ಷ ಪೂರೈಸಿದ ರಜತ ಮಹೋತ್ಸವ ಜಂಟಿಯಾಗಿ ಆಚರಿಸಲಾಗುತ್ತಿದೆ. ಸರ್ವರ ಸಹಕಾರ ಅಗತ್ಯವೆಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಮಾತನಾಡಿ, ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಹಳೇ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕಾಗಿ ನಿಷ್ಪಕ್ಷಪಾತವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

 ಕನ್ನಡ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, “ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಮಹಿಳಾ ಸ್ವಾವಲಂಬನೆ, ಆರೋಗ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ವಿಚಾರಗೋಷ್ಠಿಗಳನ್ನು ನಡೆಸಬೇಕು. ಜೊತೆಗೆ ತಾಲೂಕಿನ ಐತಿಹಾಸಿಕ ತಾಣಗಳಾದ ಬಾಗಳಿ, ನೀಲಗುಂದ, ಉಚ್ಚಂಗಿದುರ್ಗ ಹಾಗೂ ಹರಪನಹಳ್ಳಿ ಪಾಳೆಯಗಾರರ ಇತಿಹಾಸ ಬಿಂಬಿಸುವ ಸ್ತಬ್ಧಚಿತ್ರಗಳು ಮತ್ತು ಕೃಷಿ, ಸ್ವಯಂ ಉದ್ಯೋಗದ ಮಳಿಗೆಗಳಿಗೆ ಅವಕಾಶ ನೀಡಬೇಕು,” ಎಂದು ಸಲಹೆ ನೀಡಿದರು.

ಸಭೆಯಲ್ಲಿ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ್ರು, ಸದಸ್ಯರಾದ ಆರುಂಡಿ ನಾಗರಾಜ, ದೊಡ್ಡಬಸಪ್ಪ, ಅಮೃತ, ಅಂಬ್ಲಿ ಯೋಗೇಶ್, ಪಾಟೀಲ್ ಜಗದೀಶಗೌಡ, ಹಳೇ ವಿದ್ಯಾರ್ಥಿಗಳಾದ ಅರಸಿಕೆರೆ ಎ.ಎಚ್. ಕೊಟ್ರೇಶ್, ಸಾಹಿತಿ ಬಾಗಳಿ ಬಣಕಾರ್ ರಾಜಶೇಖರ, ಶಿಕ್ಷಕ ಸುಭಾಷ್‌ಚಂದ್ರ, ನಿವೃತ್ತ ಮುಖ್ಯಶಿಕ್ಷಕ ಎ.ಒ. ಉಮಾಪತಿ, ಕೊಟ್ರೇಶ್ ಮಾತನಾಡಿದರು.

ಐಕ್ಯೂಎಸಿ ಸಂಚಾಲಕ ಗೋವರ್ಧನ, ಹಳೇ ವಿದ್ಯಾರ್ಥಿ ಸಂಘದ ಸಂಚಾಲಕ ನವಾಜ್‌ ಬಾಷಾ, ಪ್ರಾಂಶುಪಾಲರಾದ ಡಾ. ಎಸ್.ಎಂ. ಸಿದ್ದಲಿಂಗಮೂರ್ತಿ, ಮಹೇಶ ಉಪ್ಪೀನ, ಉಪನ್ಯಾಸಕರಾದ ಡಾ. ರಾಜಶೇಖರ, ಆರುಂಡಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರೋಗನಿರೋಧಕ ಶಕ್ತಿ ಹೆಚ್ಚಿಸಲು ತಾಯಿಯ ಎದೆಹಾಲು ಅತ್ಯಗತ್ಯ: ಡಿಹೆಚ್‌ಒ ಡಾ.ಟಿ.ಲಿಂಗರಾಜು

ವಿಜಯನಗರ (ಹೊಸಪೇಟೆ) : ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಬಹುಮುಖ್ಯವಾಗಿದೆ....

Homeಸುದ್ದಿಗಳು

ಸಂಪುಟ ವಿಸ್ತರಣೆ ಕೌತುಕಕ್ಕೆ ಇಂದು ತೆರೆ: ಸಂಜೆ ರಾಜಭವನದಲ್ಲಿ 20 ನೂತನ ಸಚಿವರ ಪದಗ್ರಹಣ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ...

Homeಶಿಕ್ಷಣ

ಬಿ.ಐ.ಇ.ಟಿ. ಯಲ್ಲಿ ನೈಲಿಟ್‌ನ 90 ಗಂಟೆಗಳ ‘ಚಿಪ್‌ಕ್ರಾಫ್ಟ್’ ಸೆಮಿಕಂಡಕ್ಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ದಾವಣಗೆರೆ : ಬಾಪೂಜಿ ಇಂಜಿನಿಯರಿಂಗ್  ಮತ್ತು ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್...

Homeಸುದ್ದಿಗಳು

ನರೇಗಾ ಮಾದರಿ ಕಾಮಗಾರಿ ಮರುಸ್ಥಾಪನೆಗೆ ಆಗ್ರಹ

ಹರಪನಹಳ್ಳಿ : ಹೊಸದಾಗಿ ಜಾರಿಗೆ ತಂದಿರುವ ವಿಬಿಜಿ ರಾಮ್‍ಜಿ ಕಾಯ್ದೆಯಡಿ ಹಳೆಯ ನರೇಗಾ ಮಾದರಿ ಕಾಮಗಾರಿಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.