ದಾವಣಗೆರೆ : ಯುವಕರು ಯಾವುದೇ ದುಶ್ಚಟ ಒಳಗಾಗದೆ ಇಂತಹ ಕಾರ್ಯಕ್ರಮಕ್ಕೆ ಕೈಜೋಡಿಸಿದರೆ ಪ್ರತಿ ಗ್ರಾಮವನ್ನು ಸಹ ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಧರ್ ಮೂರ್ತಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಪಂಚಾಯತ್, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಗ್ರಾಮ ಪಂಚಾಯತ್ ಬಾಡ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಒಂಟಿಹಾಳ ಗ್ರಾಮವನ್ನ ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಿ ಅವರು ಮಾತನಾಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ತಂಬಾಕು ಮುಕ್ತ ಹಳ್ಳಿ ಮಾರ್ಗಸೂಚಿ ಅನ್ವಯ ಒಂಟಿಹಾಳ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮನೆಯಲ್ಲಿ ಎಲ್ಲಾ ತಾಯಂದಿರು ಅವರವರ ಕುಟುಂಬದಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಛಾಪು ಮೂಡಿಸಿ ಪ್ರತಿ ಮನೆಯನ್ನು ತಂಬಾಕು ಮುಕ್ತ ಮಾಡಿದ್ದೆ ಆದಲ್ಲಿ ತಂಬಾಕು ಮುಕ್ತ ಗ್ರಾಮ, ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಬಹುದು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಭಾಗಿಯ ಸಂಯೋಜಕರು ಮಹಾಂತೇಶ್ ಉಳ್ಳಾಗಡ್ಡಿ ಇವರು ಮಾತನಾಡಿ ತಂಬಾಕು ಸೇವನೆಯಿಂದ ನಾನಾ ತರದ ಮಾರಣಾಂತಿಕ ಕಾಯಿಲೆಗಳು ಬರುತ್ತಿದ್ದು ಅದರಲ್ಲಿ ಪ್ರಮುಖವಾಗಿ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಇನ್ನೂ ಮುಂತಾದ ಕ್ಯಾನ್ಸರ್ ಗಳು, ಹೃದಯಘಾತ, ಪಾರ್ಶ್ವವಾಯು ಆಗುತ್ತಿದ್ದು ಇಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಯಲಿಕ್ಕೆ ತಂಬಾಕು ಮುಕ್ತ ಗ್ರಾಮ ಎಂಬ ಶೀರ್ಷಿಕೆ ಪ್ರಮುಖ ಪಾತ್ರ ವಹಿಸುತ್ತವೆ.
ಹಾಗಾಗಿ ನಾವೆಲ್ಲರೂ ಸೇರಿ ತಂಬಾಕನ್ನು ಬಳಸದಂತೆ ಕ್ರಮವಹಿಸೋಣ ಮತ್ತು ಗ್ರಾಮದಲ್ಲಿ ತುಂಬಾಕು ನಿಯಂತ್ರಣ ಕಾಯ್ದೆಯನ್ನು ಅನುಷ್ಠಾನ ಮಾಡೋಣ ಎಂದು ಹೇಳಿದರು. ಬಾಡ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರು ರಾಜಪ್ಪ, ಗ್ರಾಮದ ತಂಬಾಕು ನಿಯಂತ್ರಣ ರಾಯಬಾರಿ ಶಾಂತಮ್ಮ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ, ಪ್ರಭು, ಸಾಮಾಜಿಕ ಕಾರ್ಯಕರ್ತೆ ಶೈಲಾ ಶಾಮನೂರು, ಸಮುದಾಯ ಆರೋಗ್ಯ ಅಧಿಕಾರಿ ರುದ್ರೇಶ್, ಸ್ನಾತಕೋತ್ತರ ವಿದ್ಯಾರ್ಥಿನಿ ಪಲ್ಲವಿ, ಶಾಲೆಯ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಹಾಗೂ ಊರಿನ ಪ್ರಮುಖರು, ಶಾಲಾ ಮಕ್ಕಳು ಹಾಜರಿದ್ದರು.
Leave a comment