ಹರಪನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ನಗರದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬೈಕ್ ರ್ಯಾಲಿ ನಡೆಸಿತು. ನಗರದ ಹರಿಹರ ರಸ್ತೆ ಹಿರೆಕೆರೆ ವೃತ್ತದಿಂದ ಆರಂಭವಾದ ಈ ಬೈಕ್ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ ವೃತ್ತ ತಲುಪಿತು. ಕಾರ್ಯಕರ್ತರು ಬೈಕ್‌ಗಳಿಗೆ ತ್ರಿವರ್ಣ ಧ್ವಜ ಕಟ್ಟಿ, ದೇಶಭಕ್ತಿ ಘೋಷಣೆಗಳೊಂದಿಗೆ ಸಂಚರಿಸಿ ನಗರದ ಜನತೆಯ ಗಮನ ಸೆಳೆದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ. ಶೇಖರಪ್ಪ, ಮುಖಂಡರಾದ ಕೊಟ್ರೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಎನ್.ಜಿ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಉದಯಕುಮಾರ್, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಆರ್. ಮಂಜುನಾಥ್ ನಾಯ್ಕ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ದ್ಯಾಮಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ. ಸಂಗಮೇಶ , ಪ್ರಧಾನ ಕಾರ್ಯದರ್ಶಿ ಪಂಪಾನಾಯ್ಕ ಮಾತನಾಡಿದರು.
ಉಪಾಧ್ಯಕ್ಷ ಕಲ್ಲನಗೌಡ, ಗಂಗಾನಾಯ್ಕ, ಬಿಎಲ್‍ಎ ಸೂರ್ಯನಾಯ್ಕ, ಕಾರ್ಯದರ್ಶಿ ಪ್ರಸನ್ನ, ಎಂ.ಮಲ್ಲೇಶ್, ಮಹಾಂತೇಶ, ಮಾರುತಿ, ಟಿ.ಮನೋಜ್, ಕೊಟ್ರಯ್ಯ, ಪ್ರಕಾಶ್, ಮಂಜುನಾಥ ಹುಣಸಿಹಳ್ಳಿ, ಲಿಂಗರಾಜ್, ಕಿರಣ್ ಶ್ಯಾನಬೋಗ್, ತರಕಾರಿ ಹನುಮಂತಪ್ಪ, ಜಾವಿದ್, ವಿನಯ್, ರವಿ ಸೇರಿದಂತೆ ಅನೇಕರಿದ್ದರು. ಬಿಜೆಪಿ ಮಂಡಲ ಪದಾಧಿಕಾರಿಗಳು ಶುಕ್ರವಾರ ಬೈಕ್ ರ್ಯಾಲಿ ನಡೆಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ. ಶೇಖರಪ್ಪ, ಮುಖಂಡರಾದ ಕೊಟ್ರೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಎನ್.ಜಿ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಉದಯಕುಮಾರ್, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಆರ್. ಮಂಜುನಾಥ್ ನಾಯ್ಕ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ದ್ಯಾಮಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ. ಸಂಗಮೇಶ , ಪ್ರಧಾನ ಕಾರ್ಯದರ್ಶಿ ಪಂಪಾನಾಯ್ಕ ಇದ್ದರು.
Leave a comment