Home ಸೋಗಿಯಲ್ಲಿ ವಿಜೃಂಭಿಸಿದ ಜಾನಪದ ಸೊಬಗು
Homeಕಲೆಸುದ್ದಿಗಳು

ಸೋಗಿಯಲ್ಲಿ ವಿಜೃಂಭಿಸಿದ ಜಾನಪದ ಸೊಬಗು

Share
SOGI
Share

ಹೂವಿನಹಡಗಲಿ : ತಾಲ್ಲೂಕಿನ ಸೋಗಿ ಗ್ರಾಮದಲ್ಲಿ  ವಿಜಯನಗರ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಅನುದಾನದಡಿ, ಶ್ರೀ ದುರ್ಗಾದೇವಿ ಪರಿಶಿಷ್ಟ ಜಾತಿ ಮಹಿಳಾ ಸಾಂಸ್ಕೃತಿಕ ಜಾನಪದ ಕಲಾ ಟ್ರಸ್ಟ್ ವತಿಯಿಂದ ಭಾನುವಾರ ಶ್ರೀ ಬಾಲಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಾನಪದ ಸಾಂಸ್ಕೃತಿಕ ಪ್ರಾಯೋಜಿತ ಕಾರ್ಯಕ್ರಮ ಅತ್ಯಂತ ಸಡಗರದಿಂದ ಜರುಗಿತು.

ಗ್ರಾಮೀಣ ಕಲೆಗಳ ಜೀವತುಂಬುವ ಈ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ತಮ್ಮ ಕಲಾ ಪ್ರದರ್ಶನದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಉದ್ಘಾಟಿಸಿದ ಬೈಲಾಟ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಟ್ರಪ್ಪ ಹೊಳಿಯಾಚಿ ಅವರು,  ಜಾನಪದ ಕಲೆಗಳು, ಬಯಲಾಟಗಳು ಗ್ರಾಮೀಣ ಜನರ ಜೀವನಾಡಿಗಳಾಗಿವೆ. ಅವುಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಾಹಿತಿ ಹೆಚ್.ಡಿ. ಹೊನ್ನೇಶ್, ಜಾನಪದ ಕಲೆ, ವಾದ್ಯಗಳು ಹಾಗೂ ಪರಿಕರಗಳ ಮಹತ್ವ ಕುರಿತು ಮಾತನಾಡಿ,  ನಾಡಿನ ಸಂಸ್ಕೃತಿಯನ್ನು ಸಾರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ತಿಳಿಸಿದರು. ಶ್ರೀ ದುರ್ಗಾದೇವಿ ಮಹಿಳಾ ಸಂಘ ಹಾಗೂ ಸರಸ್ವತಿ ಮಹಿಳಾ ಸಂಘ ಕಲಾವಿದರು ಮಧುರವಾದ ಜಾನಪದ ಸೋಬಾನ ಪದಗಳು ಹಾಗೂ ಭಕ್ತಿಗೀತೆಗಳನ್ನು ಹಾಡಿ ಗಮನ ಸೆಳೆದರು. ವಾದಕ ಸಿ. ಮಲ್ಲಪ್ಪ ಅವರ ಶಹನಾಯ್ ವಾದನ ಸಭಿಕರನ್ನು ರಂಜಿಸಿತು. ಹಿರೇಕೊಳಚಿ ಗ್ರಾಮದ ಜಾನಪದ ಕಲಾವಿದ , ಕೋಗಳಿ ಗ್ರಾಮದ ಕೆ. ರುದ್ರಪ್ಪ, ದೊಡ್ಡಾಟದ ಭಾಗವತ ಅಂಜಿನಪ್ಪ, ಬಸವರಾಜಪ್ಪ ಹಾಗೂ ಹಿನ್ನೆಲೆ ಗಾಯಕ ಭೀಮಪ್ಪ, ನಿಂಗಪ್ಪ ನವರು ಪ್ರಸ್ತುತಪಡಿಸಿದ ದೊಡ್ಡಾಟದ ರಂಗ ಗೀತೆಗಳು ಜನರ ಮನಸೂರೆಗೊಂಡವು.

ಸೋಗಿ ಗ್ರಾಮದ ಯುವ ಕಲಾವಿದರಾದ ಕೆ. ಮಲ್ಲಿನಾಥ್, ಹೆಚ್. ಗುರುಬಸವರಾಜ, ಹೆಚ್.ಬಿ. ಕೊಟ್ರೇಶ, ಬಿ. ಮೌನೇಶ, ಉಜ್ಜಯಿನಿ ಬಸವರಾಜ, ಡಿ. ಕೊಟ್ರೇಶಿ, ಸಿ. ನಾಗಭೂಷಣ್ ಸೇರಿದಂತೆ ಬೆಟ್ಟದ ಮಲ್ಲೇಶ್ವರ ಭಜನಾ ಮಂಡಳಿಯವರು ಪುರಂದರದಾಸರ ಕೀರ್ತನೆಗಳು ಹಾಗೂ ಶರೀಫರ ತತ್ವಪದಗಳನ್ನು ಹಾಡಿದರು. ವಿವಿಧ ಗ್ರಾಮಗಳಿಂದ ಬಂದ ಕಲಾವಿದರು ಗೀಗಿ ಪದಗಳು, ಹಲಗಿ ವಾದನ ಹಾಗೂ ಭಜನಾ ಪದಗಳ ಮೂಲಕ ತಮ್ಮ ಪ್ರತಿಭೆ ಮೆರದರು. ಶ್ರೀ ಬಾಲಬಸವೇಶ್ವರ ಪರಿಶಿಷ್ಟ ಜಾತಿ ಜಾನಪದ ಸಾಂಸ್ಕೃತಿಕ ಕಲಾವಿದರಾದ ಹಾರ್ಮೋನಿಯಂ ಮಾಸ್ತರ್ ಎನ್. ಚಂದ್ರಪ್ಪ, ಭಜನಾ ಪದ ಗಾಯಕರಾದ ಟಿ. ಮುದ್ದುರ್ಗಪ್ಪ, ಪಿ. ಪರಮೇಶ್, ಬಿ. ಲೋಕಪ್ಪ, ಎನ್. ಮೈಲಪ್ಪ ಹಾಗೂ ಕಲಾ ಟ್ರಸ್ಟ್‌ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕೆ. ಮೌನೇಶ್ ಸೋಗಿ ಅತ್ಯಂತ ಸುಂದರವಾಗಿ ನಿರೂಪಿಸಿದರು. ಗ್ರಾಮದ ಗುರುಹಿರಿಯರು ಹಾಗೂ ನೂರಾರು ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಕೆ.ಬಿ. ಹೇಮಾಕ್ಷಿ ಕುಬೇರಪ್ಪ, ಟ್ರಸ್ಟ್‌ನ ಅಧ್ಯಕ್ಷೆ  ಶ್ರೀಮತಿ ದೊಡ್ಡ ಮೈಲವ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಡಿ. ಕಾಳವ್ವ, ಪಿ. ದೊಡ್ಡಮೈಲವ್ವ, ಪಿ. ಗಂಗವ್ವ, ಎಸ್. ಗಂಗವ್ವ, ಐ. ಗಂಗಮಾಳವ್ವ, ಬಿ. ದೇವಕ್ಕ, ಎಸ್. ದಂಡೆವ್ವ ಉಪಸ್ಥಿತರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

“ಶ್ರಮಿಕನಿಂದ ಧ್ವಜಾರೋಹಣ”

ಹರಪನಹಳ್ಳಿ : ಪಟ್ಟಣದ ಹೊರ ಹೊಲದಲ್ಲಿರುವ ಪ್ರಕೃತಿ ವಿದ್ಯಾ ಸಂಸ್ಥೆಯ ಪರ್ಲ್ ಪಬ್ಲಿಕ್ ಶಾಲೆಯಲ್ಲಿ 80ನೇ...

Homeಸುದ್ದಿಗಳು

ವ್ಯಕ್ತಿ ಕಾಣೆ ಪತ್ತೆಗೆ ಮನವಿ

ವಿಜಯನಗರ : ತಾಲೂಕಿನ ಚಿತ್ರಕೇರಿ 34ನೇ ವಾರ್ಡ್ ನಿವಾಸಿ ಎಸ್. ಉಮೇಶ ತಂದೆ ಲೇಟ್ ಸೋಮಣ್ಣ...

Homeಸುದ್ದಿಗಳು

ಶಿಕ್ಷಕನಿಗೆ ನಿಂದನೆ: ಶಾಲಾ ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಆಗ್ರಹ

ಹರಪನಹಳ್ಳಿ: ತಾಲ್ಲೂಕಿನ ಗುಂಡಗತ್ತಿ ಗ್ರಾಮದ ಶ್ರೀ ವೆಂಕಟೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿ ಅವರು ಶಾಲೆಯ ದೈಹಿಕ...

Homeಸುದ್ದಿಗಳು

ಹರಪನಹಳ್ಳಿಯಲ್ಲಿ ಬಿಜೆಪಿ ವತಿಯಿಂದ ವಿಜೃಂಭಣೆಯ ‘ಹರ್ ಘರ್ ತಿರಂಗ’ ಬೈಕ್ ರ್ಯಾಲಿ

ಹರಪನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ನಗರದಲ್ಲಿ ಶುಕ್ರವಾರ ಭಾರತೀಯ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.