Home “ಶ್ರಮಿಕನಿಂದ ಧ್ವಜಾರೋಹಣ”
Homeಸುದ್ದಿಗಳು

“ಶ್ರಮಿಕನಿಂದ ಧ್ವಜಾರೋಹಣ”

Share
Share

ಹರಪನಹಳ್ಳಿ : ಪಟ್ಟಣದ ಹೊರ ಹೊಲದಲ್ಲಿರುವ ಪ್ರಕೃತಿ ವಿದ್ಯಾ ಸಂಸ್ಥೆಯ ಪರ್ಲ್ ಪಬ್ಲಿಕ್ ಶಾಲೆಯಲ್ಲಿ 80ನೇ ಸ್ವತಂತ್ರೋತ್ಸವದ ಧ್ವಜಾರೋಹಣ ಮಾಡಲಾಯಿತು. ಧ್ವಜಾರೋಹಣಕ್ಕೆ ಅತಿಥಿಯಾಗಿ ಅದೇ ಶಾಲೆಯಲ್ಲಿ ಕೆಲಸ ಮಾಡುವಂತಹ ಒಬ್ಬ ಸಾಮಾನ್ಯ ಕೆಲಸಗಾರನಾದ ಅರಬಿ ಕೆಂಚಪ್ಪ ನಿಂದ ಧ್ವಜಾರೋಹಣ ಮಾಡಿಸಲಾಯಿತು.

ಭಾರತೀಯ ಪ್ರತಿಯೊಬ್ಬ ಪ್ರಜೆಗೂ ಸಹ ಧ್ವಜಾರೋಹಣ ಮಾಡುವ ಅವಕಾಶ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಕೃತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ಸುಮ ಉಪ್ಪಿನ ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರಬಿ ಕೆಂಚಪ್ಪ ಅವರು ಮಾತನಾಡಿ ನನ್ನಂತಹ ಒಬ್ಬ ಸಾಮಾನ್ಯ ಕೆಲಸಗಾರರಿಗೂ ಸಹ ಧ್ವಜಾರೋಹಣ ಮಾಡುವ ಅವಕಾಶ ಸಿಗುವುದೆಂದು ನಾನು ಅಂದುಕೊಂಡಿರಲಿಲ್ಲ ಈ ಸುವರ್ಣ ಅವಕಾಶವನ್ನು ಕಲ್ಪಿಸಿಕೊಟ್ಟ ನನ್ನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೂ ನಾನು ಆಭಾರಿಯಾಗಿರುತ್ತೇನೆ ಎಂದು ಹೇಳಿದರು.

ಮುಂದುವರಿದು ಮಾತನಾಡುತ್ತಾ ನನಗೆ ಭಾಷಣ ಮಾಡಲು ಬರುವುದಿಲ್ಲ ನಾನು ಕೆಲಸಗಾರನಷ್ಟೇ ಆದರೂ ನನಗೆ ತಿಳಿದ ಮಟ್ಟಿಗೆ ದೇಶ ಎಂದರೆ ನಿಷ್ಠೆ ವಿದ್ಯಾರ್ಥಿಗಳಾದ ನೀವು ದೇಶದ ಬಗ್ಗೆ ಪ್ರೇಮ ಮತ್ತು ಪ್ರಾಮಾಣಿಕತೆಯನ್ನು ಹೊಂದಬೇಕು ಎಂದು ತಿಳಿಸಿದರು. ಪ್ರಕೃತಿ ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಚೆನ್ನೇಶ್ ಬಣಕಾರ್ ಮಾತನಾಡಿ ಬರಿ ಗಣ್ಯ ವ್ಯಕ್ತಿಗಳಿಂದ ಮಾತ್ರ ಧ್ವಜಾರೋಹಣ ಮಾಡಿಸುವುದು ದೇಶಭಕ್ತಿಯಲ್ಲ ಭಾರತದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಸಹ ಧ್ವಜಾರೋಹಣಕ್ಕೆ ಅರ್ಹರು.

ಹಾಗಾಗಿ 15 ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕೆಂಚಪ್ಪ ಇವರನ್ನು ಧ್ವಜಾರೋಹಣಕ್ಕೆ ನಮ್ಮ ಆಡಳಿತ ಮಂಡಳಿಯವರು ಮುಕ್ತ ಮನಸ್ಸಿನಿಂದ ಆಹ್ವಾನಿಸಿದ್ದೇವೆ ಎಂದರು ಮತ್ತು ಅವರಿಗೆ ಸಿಗಬೇಕಾದ ಗೌರವ ಎನ್ ಸಿ ಸಿ ಸ್ಕೌಟ್ ಅಂಡ್ ಗೈಡ್ಸ್ ಮತ್ತು ಹೌಸ್ ಮಕ್ಕಳಿಂದ ಧ್ವಜ ಗೌರವವನ್ನು ನೀಡಲಾಯಿತು ಎಂದರು .ಇದೇ ಸಂದರ್ಭದಲ್ಲಿ ಮಕ್ಕಳಿಂದ ಹಾಗೂ ಶಿಕ್ಷಕರಿಂದ ಭಾಷಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಪ್ರಕೃತಿ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷರಾದ ಶಶಿಧರ್.ಕಾರ್ಯಕ್ರಮದಲ್ಲಿ ಪ್ರಕೃತಿ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷರಾದ ಶಶಿಧರ್ ಪೂಜಾರ , ಅಧ್ಯಕ್ಷರಾದ ನಾಗೇಶ್ ಉಪ್ಪಿನ್ ಉಪಾಧ್ಯಕ್ಷರಾದ ವಿರೂಪಾಕ್ಷಪ್ಪ ಕಾರ್ಯದರ್ಶಿಗಳಾದ ಬಸವರಾಜ್ ಹುಲ್ಲತ್ತಿ ನಿರ್ದೇಶಕರಾದ ಮಂಜುನಾಥ್ ಪೂಜಾರ್ ಪರ್ಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸುಮನ್ ನಾಗೇಶ್ ಉಪ್ಪಿನ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
SOGI
Homeಕಲೆಸುದ್ದಿಗಳು

ಸೋಗಿಯಲ್ಲಿ ವಿಜೃಂಭಿಸಿದ ಜಾನಪದ ಸೊಬಗು

ಹೂವಿನಹಡಗಲಿ : ತಾಲ್ಲೂಕಿನ ಸೋಗಿ ಗ್ರಾಮದಲ್ಲಿ  ವಿಜಯನಗರ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಅನುದಾನದಡಿ,...

Homeಸುದ್ದಿಗಳು

ವ್ಯಕ್ತಿ ಕಾಣೆ ಪತ್ತೆಗೆ ಮನವಿ

ವಿಜಯನಗರ : ತಾಲೂಕಿನ ಚಿತ್ರಕೇರಿ 34ನೇ ವಾರ್ಡ್ ನಿವಾಸಿ ಎಸ್. ಉಮೇಶ ತಂದೆ ಲೇಟ್ ಸೋಮಣ್ಣ...

Homeಸುದ್ದಿಗಳು

ಶಿಕ್ಷಕನಿಗೆ ನಿಂದನೆ: ಶಾಲಾ ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಆಗ್ರಹ

ಹರಪನಹಳ್ಳಿ: ತಾಲ್ಲೂಕಿನ ಗುಂಡಗತ್ತಿ ಗ್ರಾಮದ ಶ್ರೀ ವೆಂಕಟೇಶ್ವರ ಪ್ರೌಢಶಾಲೆಯ ಆಡಳಿತ ಮಂಡಳಿ ಅವರು ಶಾಲೆಯ ದೈಹಿಕ...

Homeಸುದ್ದಿಗಳು

ಹರಪನಹಳ್ಳಿಯಲ್ಲಿ ಬಿಜೆಪಿ ವತಿಯಿಂದ ವಿಜೃಂಭಣೆಯ ‘ಹರ್ ಘರ್ ತಿರಂಗ’ ಬೈಕ್ ರ್ಯಾಲಿ

ಹರಪನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ನಗರದಲ್ಲಿ ಶುಕ್ರವಾರ ಭಾರತೀಯ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.