Home ಬಂಜಾರ ಸಮುದಾಯದ ಸಾಮಾಜಿಕ ಜಾಗೃತಿ ಸಭೆ – ವರದಕ್ಷಿಣೆ ಮುಕ್ತ ತಾಂಡಾಗಳಿಗೆ ಮುಖಂಡರ ಶ್ರಮ
Homeಸುದ್ದಿಗಳು

ಬಂಜಾರ ಸಮುದಾಯದ ಸಾಮಾಜಿಕ ಜಾಗೃತಿ ಸಭೆ – ವರದಕ್ಷಿಣೆ ಮುಕ್ತ ತಾಂಡಾಗಳಿಗೆ ಮುಖಂಡರ ಶ್ರಮ

Share
Share

ಹರಪನಹಳ್ಳಿ: ತಾಲೂಕಿನ ಬಂಜಾರರು ವರದಕ್ಷಿಣೆ ಹಠಾವೋ-ತಾಂಡ ಬಚಾವೋ ಧ್ಯೇಯಗೆ ಒಗ್ಗೂಡಲು ಸಮುದಾಯದ ಮುಖಂಡರು ಕರೆ ನೀಡಿದರು. ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ಹಾಲಮ್ಮ ತೋಪಿನ ಆಂಜನೇಯ ದೇವಸ್ಥಾನ ಆವರಣದಲ್ಲಿ ಸೋಮವಾರ ಗೋರ್ ಸಿಕ್ವಾಡಿ ಸಮಿತಿ ಹಮ್ಮಿಕೊಂಡಿದ್ದ ಬಂಜಾರ ವರದಕ್ಷಿಣೆ ಹಾಗೂ ಸಾಮಾಜಿಕ ಸಮಸ್ಯೆಗಳ ಜಾಗೃತಿ ಸಭೆಯಲ್ಲಿ ಕರೆ ನೀಡಿದರು.

ಮುಖಂಡ ಡಿಳ್ಯಾನಾಯ್ಕ ಮಾತನಾಡಿ ಲಂಬಾಣಿ ಸಮುದಾಯ ಇಂದಿಗೂ ಆರ್ಥಿಕವಾಗಿ ಜರ್ಜರಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವರದಕ್ಷಿಣೆ ಪೀಡಿಗು ಅನೇಕ ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಪಿಡಗನ್ನು ಸಂಪೂರ್ಣ ನಿಷೇಧಿಸಲು ವರದಕ್ಷಿಣೆ ಕೊಡುವುದು ಮತ್ತು ಪಡೆಯುವುದು ನಿಲ್ಲಿಸಲು ಕಂಕಣಬದ್ಧರಾಗಬೇಕು ಎಂದರು.

ವರದಕ್ಷಿಣೆ ಪಿಡುಗು ಕೊನೆಗಾಣಿಸಲು ಅರಸೀಕೆರೆ, ಹಲುವಾಗಲು, ಚಿಗಟೇರಿ, ಕಸಬಾ ಹೋಬಳಿಯ ಎಲ್ಲಾ ತಾಂಡಗಳಿಗೆ ಭೇಟಿ ನೀಡಿ, ಜನ ಜಾಗೃತಿ ಸಭೆ ನಡೆಸಲಾಗಿದೆ. ಎಲ್ಲಾ ತಾಂಡದ ಹಿರಿಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವರದಕ್ಷಿಣೆ ಮುಕ್ತ ಬಂಜಾರರು ಎಂಬ ಹಿರಿಮೆಗೆ ಪಾತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಮಹಾಂತೇಶ್ ನಾಯ್ಕ ಮಾತನಾಡಿ, ‘ಸಮಾಜದ ಅಸ್ತಿತ್ವ ಉಳಿವಿಗೆ ಹೋರಾಟ ಅನಿವಾರ್ಯವಾಗಿದೆ. ಸರ್ಕಾರ ಕೈಗೊಂಡಿರುವ ಮೀಸಲಾತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ‘ ಸಮುದಾಯದ ಪ್ರತಿಯೊಬ್ಬರು ಪಕ್ಷಭೇದ ಮರೆತು, ಮೀಸಲಾತಿ ವಿರುದ್ಧ ಧ್ವನಿ ಎತ್ತಬೇಕು. ವರದಕ್ಷಿಣೆ ಬಂಜಾರ ಸಂಸ್ಕೃತಿ ಅಲ್ಲ. ಹಿಂದೆ ಸಮಾಜದಲ್ಲಿ ವರದಕ್ಷಿಣೆ ಇರಲಿಲ್ಲ. ಅನ್ಯ ಸಮಾಜದ ಪ್ರಭಾವದಿಂದ ಪಿಡುಗು ಸಮಾಜವನ್ನು ಬಾಧಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹನುಮಂತನಾಯ್ಕ, ನಂದಿಕಂಬ ಚಂದ್ರನಾಯ್ಕ, ಶಿವಾಜಿನಾಯ್ಕ್, ಯಶೋಧರ ನಾಯ್ಕ, ಶಂಕರ ನಾಯ್ಕ, ಕುಬೇರ ನಾಯ್ಕ, ಶೆಟ್ಟಿನಾಯ್ಕ, ವೆಂಕಟೇಶ್ ನಾಯ್ಕ, ಹನುಮಂತ ನಾಯ್ಕ, ಸಂತೋಷ ನಾಯ್ಕ, ಸುರೇಶ್, ಭೋಜ್ಯನಾಯ್ಕ, ದಿದ್ಗಿ ಚಂದ್ರನಾಯ್ಕ, ಸೇರಿದಂತೆ ಜಾಗೃತ ಪಂಚಾಯತಿಯಲ್ಲಿ ಅರಸೀಕೆರೆ ಹೋಬಳಿಯ ವಿವಿಧ ತಾಂಡಾಗಳಿಂದ ಬಂಜಾರ ಸಮಾಜದ ಜನರು ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ನ.6 ರಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಜಿಲ್ಲಾ ಪ್ರವಾಸ

ವಿಜಯನಗರ : ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ನವೆಂಬರ್ 6 ರಂದು ಮಧ್ಯಾಹ್ನ...

Homeಸುದ್ದಿಗಳು

36 ನೂತನ ಪೊಲೀಸ್ ವಸತಿ ಗೃಹಗಳ ಲೋಕಾರ್ಪಣೆ ಮಾಡಿದ ಸಚಿವ ಕೆ.ಎಸ್. ಬಸವಂತಪ್ಪ

ವಿಜಯನಗರ : ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಯ ವಸತಿ ಸಮಸ್ಯೆಗೆ ಮುಕ್ತಿ...

Homeಸುದ್ದಿಗಳು

ಸಚಿವ ಕೆ.ಎಸ್. ಬಸವಂತಪ್ಪ ಜಿಲ್ಲಾ ಪ್ರವಾಸ

ವಿಜಯನಗರ  : ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ...

Homeಸುದ್ದಿಗಳು

ಅ.31 ಸುರಕ್ಷಿತ ಬಚ್‌ಪನ್ ಅಭಿಯಾನ : 

ವಿಜಯನಗರ : ಜಿಲ್ಲಾಡಳಿತ, ಜಿಲ್ಲಾ ಪಮಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕರ, ವಕೀಲರ ಸಂಘ, ಜಿಲ್ಲಾ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.