Home ಸುದ್ದಿಗಳು ಹರಪನಹಳ್ಳಿ ವೀರಭದ್ರೇಶ್ವರ ರಥೋತ್ಸವ
ಸುದ್ದಿಗಳು

ಹರಪನಹಳ್ಳಿ ವೀರಭದ್ರೇಶ್ವರ ರಥೋತ್ಸವ

Share
harapanahalli-veerabadreshwara
harapanahalli-veerabadreshwara
Share

ಹರಪನಹಳ್ಳಿ : ನಗರದ ಹಳೇ ಬಸ್ ನಿಲ್ದಾಣದಲ್ಲಿ ಸಾರಿಬಯಲು ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಗೌರಿ ಹುಣ್ಣಿಮೆ ದಿನ ಬುಧವಾರ ಸಂಜೆ 6.23ಕ್ಕೆ ಸಡಗರ, ಸಂಭ್ರಮದಿಂದ ನೆರವೇರಿತು.

ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಬ್ರಹ್ಮ ರಥೋತ್ಸವ ಜರುಗಿತು. ಸಂಜೆ ಮೇಗಳಪೇಟೆ ವೀರಭದ್ರ ದೇವಸ್ಥಾನದಲ್ಲಿರುವ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆ ಮೂಲಕ ಹಳೇ ಬಸ್ ನಿಲ್ದಾಣದಲ್ಲಿರುವ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಸಕಲ ಪುಷ್ಪಗಳಿಂದ ಅಲಂಕರಿಸಿದ ರಥದ ಬಳಿ ಆಗಮಿಸಿ ಭಕ್ತಿ ಭಾವದಿಂದ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಸಮ್ಮಾಳ, ನಂದಿಕೋಲು ಬಾಜ ಭಜಂತ್ರಿಗಳು ಮೆರವಣಿಗೆಗೆ ಮೆರುಗು ನೀಡಿದವು.

ಸಮ್ಮಾಳ ಕಲಾವಿದರು ವೀರಭದ್ರ ದೇವರ ಕುರಿತಾದ ಒಡಪು ಪ್ರದರ್ಶಿಸಿ ರಥೋತ್ಸವದ ದಿನ ಆಕರ್ಷಿಸಿದರು. ಭಕ್ತರಾದ ಗುರುಬಸವರಾಜ್ ಅವರು ವೀರಭದ್ರ ಸ್ವಾಮಿ ಧ್ವಜವನ್ನು ₹.1.10 ಲಕ್ಷಕ್ಕೆ ಹರಾಜಿನಲ್ಲಿ ಪಡೆದರು. ಬಳಿಕ ರಥಕ್ಕೆ ಚಾಲನೆ ನೀಡಲಾಯಿತು. ಧರ್ಮಕರ್ತ ಪಾಟೀಲ್ ಪ್ರವೀಣ್ ಕುಮಾರ, ಅರ್ಚಕರು, ಪುರವಂತರು, ಸಮ್ಮಾಳ ಕಲಾವಿದರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.