Home ಅಪರಾಧ ಎಂ.ಪಿ.ಪ್ರಕಾಶ್ ಪುತ್ರಿ ಮನೆ‌ ಕಳ್ಳತನ: ಆರೋಪಿಗಳ ಸೆರೆ
ಅಪರಾಧ

ಎಂ.ಪಿ.ಪ್ರಕಾಶ್ ಪುತ್ರಿ ಮನೆ‌ ಕಳ್ಳತನ: ಆರೋಪಿಗಳ ಸೆರೆ

Share
ಎಂ.ಪಿ.ಪ್ರಕಾಶ್‌ ಪುತ್ರಿ ಎಂ.ಪಿ.ಲತಾ ಅವರ ಮನೆ ಕಳ್ಳತನ ಆರೋಪಿಗಳ ಸೆರೆ
Share

ಶಾಸಕರ ಮನೆ ಕಳ್ಳತನ ಆರೋಪಿಗಳ ಸೆರೆ

ಹರಪನಹಳ್ಳಿ :  ಮಾಜಿಮುಖ್ಯಮುಂತ್ರಿ ದಿ.ಎಂ.ಪಿ.ಪ್ರಕಾಶ್ ಅವರ ಪುತ್ರಿ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರ  ಕಚೇರಿಯ ಬೀಗ ಮುರಿದು ಜುಲೈ 17ರಂದು ಆಭರಣ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿದ್ದು, ಅವರಿಂದ ಕಳುವಾದ ₹11.65 ಲಕ್ಷ ಮೌಲ್ಯದ ಎಲ್ಲಾ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಎಸ್‌.ಜಾಹ್ನವಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದ ಥಾರ್ ಜಿಲ್ಲೆಯ ಜಿಲ್ಯ ಅಲಿಯಾಸ್‌ ಜೀಲು (26) ಮತ್ತು ರಾಕೇಶ್ ಪವಾರ್‌ (22) ಎಂಬುವವರನ್ನು ಬಂಧಿಸಲಾಗಿದೆ, ಕದ್ದ ಎಲ್ಲ ಚಿನ್ನ, ಬೆಳ್ಳಿಯ ಆಭರಣ ಜಫ್ತಿ ಮಾಡಲಾಗಿದೆ.

ಹರಪನಹಳ್ಳಿ ನಗರದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರ ಕಚೇರಿ ಇದ್ದು, ಗೋದ್ರೇಜ್ ಬೀರುವಿನಲ್ಲಿ ಅವರು ಈ ಆಭರಣಗಳನ್ನು ಇಟ್ಟಿದ್ದರು. ಜುಲೈ 17ರಂದು ಮಧ್ಯರಾತ್ರಿ 1ರಿಂದ 4 ಗಂಟೆ ನಡುವೆ ಕಚೇರಿಯ ಬಾಗಿಲಿನ ಬೀಗ, ಬೀರುವಿನ ಬೀಗ ಮುರಿದು ಆಭರಣ ದೋಚಿದ್ದರು. ಕಳ್ಳರ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ ಮಧ್ಯಪ್ರದೇಶಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದೆ. ಅವರು ಆಭರಣಗಳನ್ನು ಮಾರಾಟ ಮಾಡಿರಲಿಲ್ಲ. ಒಂದೆಡೆ ಬಚ್ಚಿಟ್ಟಿದ್ದ ಆಭರಣಗಳನ್ನು ಹಾಗೆಯೇ ನೀಡಿದ್ದು, ಎಲ್ಲವೂ ಇದೀಗ ಶಾಸಕಿ ಅವರಿಗೆ ಮರಳಿ ಸಿಕ್ಕಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು. ಎಎಸ್‌ಪಿ ಜಿ.ಮಂಜುನಾಥ್‌, ಹರಪನಹಳ್ಳಿ ಇನ್‌ಸ್ಪೆಕ್ಟರ್‌ ಮಹಾಂತೇಶ ಜಿ.ಸಜ್ಜನ್‌, ಪಿಎಸ್‌ಐ ಶಂಭುಲಿಂಗ ಹಿರೇಮಠ, ಕಾರ್ಯಾಚರಣೆಯಲ್ಲಿ ಭಾಗಿಯಾಧ ಇತರ ಸಿಬ್ಬಂದಿ ಇದ್ದರು. ಎಲ್ಲರಿಗೂ ಬಹುಮಾನ ನೀಡುವುದಾಗಿ ಎಸ್‌ಪಿ ಅವರು ಘೋಷಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles
shri ganda
ಅಪರಾಧ

ಯರಬಾಳು : ಶ್ರೀಗಂಧದ ಮರ ಕಳವು

ಹರಪನಹಳ್ಳಿ: ತಾಲ್ಲೂಕಿನ ತೆಲಿಗಿ ಹೋಬಳಿಯ ಯರಬಾಳು ಗ್ರಾಮದ ರೈತರೊಬ್ಬರ ತೋಟದಲ್ಲಿ ಸುಮಾರು 20 ವರ್ಷಗಳಿಂದ ಬೆಳೆಸಲಾಗಿದ್ದ...

ravi
Homeಅಪರಾಧ

 ಶೃಂಗಾರತೋಟದಲ್ಲಿ ರೈತ ರವಿ ಆತ್ಮಹತ್ಯೆ  

ಹರಪನಹಳ್ಳಿ: ತಾಲ್ಲೂಕಿನ ಶೃಂಗಾರತೋಟ ನಿವಾಸಿಯಾಗಿದ್ದ ರೈತನೊಬ್ಬ ಸಾಲಬಾಧೆ ಹಾಗೂ ಬೆಳೆ ನಷ್ಟದಿಂದ ಮನನೊಂದು ತಮ್ಮ ಜಮೀನಿನಲ್ಲಿ...

crime harapanahalli
ಅಪರಾಧ

ಹರಪನಹಳ್ಳಿ : ಮನೆ ಬೀಗ ಮುರಿದು ಕಳ್ಳತನ

ಹರಪನಹಳ್ಳಿ : ನಗರದ ಕಾಶಿ ಸಂಗಮೇಶ್ವರ ಬಡಾವಣೆಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರ ನಿವಾಸದ...

ARSIKERE POLICE
ಅಪರಾಧ

ಅರಸೀಕೆರೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 16 ಬೈಕ್ ವಶ, ಮೂವರು ಕಳ್ಳರ ಬಂಧನ

ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಪೊಲೀಸರು ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಗ್ಯಾಂಗ್ ಅನ್ನು ಬೇಟೆಯಾಡಿದ್ದಾರೆ....

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.