Home ಶಿಕ್ಷಣ ಪುಸ್ತಕ ಪ್ರೀತಿಸಿ, ಉನ್ನತಗುರಿ ತಲುಪಿ : ಚಂದ್ರಶೇಖರ
ಶಿಕ್ಷಣ

ಪುಸ್ತಕ ಪ್ರೀತಿಸಿ, ಉನ್ನತಗುರಿ ತಲುಪಿ : ಚಂದ್ರಶೇಖರ

Share
YHCHANDRASHEKAR-TPEO-HARAPANAHALLI-LIBRARY
Share

 ಹರಪನಹಳ್ಳಿ : ಮೊಬೈಲ್ ಗೀಳು ಕೈಬಿಟ್ಟು ಪುಸ್ತಕ ಪ್ರೀತಿಸುವುದನ್ನು ಕಲಿತ ವಿದ್ಯಾರ್ಥಿಯು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ಗ್ರಂಥಾಲಯ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಂಥಾಲಯದಲ್ಲಿ ಕುಳಿತು ಅಧ್ಯಯನ ಮಾಡುವುದರಿಂದ, ನಿರ್ಧಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ. ಯೌವ್ವನದ ಸಮಯದಲ್ಲಿ ದುಡುಕಿನ ನಿರ್ಧಾರದಿಂದ ಭವಿಷ್ಯವೇ ಹಾಳಾಗುತ್ತದೆ, ಸದಾ ಜಾಗೃತರಾಗಿ ಓದಿನ ಕಡೆ ಗಮನಹರಿಸಿ. ಮನಸ್ಸು ಚಂಚಲವಾದರೆ ಯಶಸ್ವಿ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎಂದರು.

ಡಿವೈಎಸ್ಪಿ ಸಂತೋಷ್ ಚವ್ಹಾಣ್ ಮಾತನಾಡಿ, ಮೊಬೈಲ್ ಎಂಬುದು ವಿದ್ಯಾರ್ಥಿಗಳ ಜೀವನ ಹಾಳು ಮಾಡುತ್ತಿದೆ. ಈಗ ಸರ್ಕಾರ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಕೊಟ್ಟಿದೆ. ಅವುಗಳನ್ನು ಸದ್ಬಳಕೆ  ಮಾಡಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಶಾಖಾ ಗ್ರಾಂಥಾಲಯ ಅಧಿಕಾರಿ ಬೋವಿ ಮಂಜುನಾಥ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್ ಜಿ ಮನೋಹರ, ಪ್ರಾಚಾರ್ಯ ಸತೀಶ್ ಪಾಟೀಲ್, ಇಸ್ಮಾಯಿಲ್ ಎಲಿಗಾರ್ ಮಾತನಾಡಿದರು. ಪ್ರಾಚಾರ್ಯ ಸತೀಶ್ ಪಾಟೀಲ್, ಗಂಥಾಲುಯ ಮೇಲ್ವಿಚಾರಕರ ಸಂಘದ ಅಧ್ಯಕ್ಷ ಕುರಿ ಮಂಜುನಾಥ, ಸಿದ್ದಪ್ಪ, ಅಡವಿಹಳ್ಳಿ ಬಸವರಾಜ್, ನಾಗರಾಜ್, ಗೋಣೆಪ್ಪ, ರಹಮತ್, ಶಶಿಕುಮಾರ, ಧರ್ಮರಾಜ್ ಹಾಗೂ ಉಪನ್ಯಾಸಕರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಶಿಕ್ಷಣ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಥ: ರಾರಾಜಿಸಿದ ಜಾಗೃತಿ ಫಲಕಗಳು

ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು: ನ್ಯಾ.ಸಿದ್ದಲಿಂಗ ಪ್ರಭು ಬಳ್ಳಾರಿ : ಹೆಣ್ಣಾಗಲಿ ಅಥವಾ ಗಂಡಾಗಲಿ, ಪ್ರತಿಯೊಬ್ಬ...

Homeಶಿಕ್ಷಣ

ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ

ವಿಜಯನಗರ (ಹೊಸಪೇಟೆ) (ಕರ್ನಾಟಕ ವಾರ್ತೆ) ಜೂನ್.11: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ,...

Homeಶಿಕ್ಷಣ

ಹಲವಾಗಲು ಠಾಣೆಗೆ ವಿದ್ಯಾರ್ಥಿಗಳು ಭೇಟಿ :

ಹರಪನಹಳ್ಳಿ : ತಾಲ್ಲೂಕಿನ ಹಲುವಾಗಲು ಗ್ರಾಮದ ಮಾರುತಿ ಪಬ್ಲಿಕ್ ಶಾಲೆಯ ಮಕ್ಕಳು ಸಾರಿಗೆ ಬಸ್ ನಲ್ಲಿ...

Homeಶಿಕ್ಷಣ

ಹಾರಕನಾಳು ಶಾಲೆಯಲ್ಲಿ ಹಸಿರು ಸಂಭ್ರಮ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ!

ಹರಪನಹಳ್ಳಿ: "ಪರಿಸರ ಜಾಗೃತಿ ಎಂದರೆ ಕೇವಲ ಭಾಷಣ ಮಾಡುವುದಲ್ಲ; ಪ್ರಕೃತಿಯ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ನಮ್ಮ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.