Home ಜೂ.18 ರಂದು ಪರಿಶಿಷ್ಟ ಜಾತಿ ಜನಾಂಗದವರ ಕುಂದು-ಕೊರತೆ ಆಲಿಕೆ ಸಭೆ
Homeಸುದ್ದಿಗಳು

ಜೂ.18 ರಂದು ಪರಿಶಿಷ್ಟ ಜಾತಿ ಜನಾಂಗದವರ ಕುಂದು-ಕೊರತೆ ಆಲಿಕೆ ಸಭೆ

Share
Share

ಬಳ್ಳಾರಿ : ಜಿಲ್ಲೆಯ ಪರಿಶಿಷ್ಟ ಜಾತಿ ಜನಾಂಗದವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರ ಅಧ್ಯಕ್ಷತೆಯಲ್ಲಿ ಜೂ.18 ರಂದು ಬೆಳಿಗ್ಗೆ 11 ಗಂಟೆಗೆ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕುಂದು-ಕೊರತೆ ಆಲಿಕೆ ಸಭೆ ಆಯೋಜಿಸಲಾಗಿದೆ.ಸಮಸ್ಯೆಗಳಿರುವ ಪರಿಶಿಷ್ಟ ಜಾತಿಯ ವಿವಿಧ ಸಂಘ- ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು, ದಲಿತ ಮುಖಂಡರು ಹಾಗೂಸಮುದಾಯದ ಜನರು ಅಂದು ನಡೆಯುವ ಕುಂದು-ಕೊರತೆ ಆಲಿಕೆ ಸಭೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಳ್ಳಾರಿ : ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ :  

ಬಳ್ಳಾರಿ : ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013 ರ ಸೆಕ್ಷನ್ 24 ರನ್ವಯ ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ’ ರಚಿಸಲಾಗುತ್ತಿದೆ. ಈ ಸಮಿತಿಗೆ ನಾಮನಿರ್ದೇಶನ ಮಾಡಲು ಅರ್ಹ ವ್ಯಕ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ  ಪುನರ್ವಸತಿಗಾಗಿ ಶ್ರಮಿಸುತ್ತಿರುವ ಸಮಾಜ ಸೇವಕರು ಮತ್ತು ಮ್ಯಾನ್ಯುಯಲ್ ಸ್ಕಾö್ಯವೆಂಜರ್ ಸಮುದಾಯವನ್ನು ಪ್ರತಿನಿಧಿಸುವ ಅಥವಾ ಆ ಸಂಘಟನೆಗಳಿಗೆ ಸೇರಿದ ಆಸಕ್ತಿಯುಳ್ಳ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಮಿತಿಗೆ ಒಟ್ಟು 04 ಸದಸ್ಯರನ್ನು (02 ಪುರುಷರು ಮತ್ತು 02 ಮಹಿಳೆಯರು) ನಾಮನಿರ್ದೇಶನ ಮಾಡಲಾಗುತ್ತದೆ.

ಸಲ್ಲಿಸಬೇಕಾದ ಅಗತ್ಯ ದಾಖಲೆಗಳು : ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ ಬಗ್ಗೆ ದಾಖಲಾತಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ (2). ಜೂನ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ವಿವರ ಹಾಗೂ ಅರ್ಜಿ ಸಲ್ಲಿಕೆಗಾಗಿ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೋಟೆ ಪ್ರದೇಶ, ಬಳ್ಳಾರಿ ಅಥವಾ ಮೊ.9480843023, ದೂ.08392-267932 ಗೆ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ : ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ :  ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಮತ್ತು ವಸತಿ ರಹಿತರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ) 2.0 ಅಡಿ ವಸತಿ ಸೌಲಭ್ಯ ಒದಗಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಆಸಕ್ತರು ಆನ್ ಲೈನ್ ವೆಬ್‌ಸೈಟ್ https://pmay-urban.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಜೂ.30 ಅರ್ಜಿ ಸಲ್ಲಿಸಲು ಕೊನೆಯ ದಿನ.

ಬೇಕಾದ ದಾಖಲೆಗಳು :  ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ವಸತಿ ರಹಿತರಾಗಿದ್ದಲ್ಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು(ಹಕ್ಕುಪತ್ರ, ಕ್ರಯಪತ್ರ, ದಾನಪತ್ರ, ಉಡುಗೊರೆ, ಖಾತಾ), ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರ, ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ, ಪಾನ್ ಕಾರ್ಡ್(ಲಭ್ಯವಿದ್ದಲ್ಲಿ), ನಿಗಧಿತ ನಮೂನೆ (ಅನೆಕ್ಷರ್-2ಎ, 2ಬಿ, 2ಸಿ) ಯಲ್ಲಿ ಸೆಲ್ಪ್ ಅಂಡರ್‌ಟೆಕಿAಗ್ ಹೊಂದಿರಬೇಕು. ಈ ಮೇಲಿನ ದಾಖಲೆಗಳ ಜೊತೆಗೆ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯನ್ನೂ ಸಲ್ಲಿಸಬೇಕು.

ಈ ಹಿಂದೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದವರು ಕಡ್ಡಾಯವಾಗಿ ಮಹಾನಗರ ಪಾಲಿಕೆಯ ವಲಯ ಕಚೇರಿ-2 ರ ಆಶ್ರಯ ಶಾಖೆಗೆ ಜೂ.30 ರೊಳಗಾಗಿ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.  ಹೊಸದಾಗಿ ಅರ್ಜಿ ಸಲ್ಲಿಸಲು ಸಾಮಾನ್ಯ ಸೇವಾ ಕೇಂದ್ರ ಸೆಂಟರ್ ಗೆ ಭೇಟಿ ನೀಡಬಹುದು.ಹೆಚ್ಚಿನ ಮಾಹಿತಿಗಾಗಿ ನಗರದ ಗಡಗಿ ಚೆನ್ನಪ್ಪ ವೃತ್ತ (ರಾಯಲ್ ಸರ್ಕಲ್) ಹತ್ತಿರದ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಅಥವಾ ದೂ.08392-273479/278168 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರೋಗನಿರೋಧಕ ಶಕ್ತಿ ಹೆಚ್ಚಿಸಲು ತಾಯಿಯ ಎದೆಹಾಲು ಅತ್ಯಗತ್ಯ: ಡಿಹೆಚ್‌ಒ ಡಾ.ಟಿ.ಲಿಂಗರಾಜು

ವಿಜಯನಗರ (ಹೊಸಪೇಟೆ) : ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಬಹುಮುಖ್ಯವಾಗಿದೆ....

Homeಸುದ್ದಿಗಳು

ಸಂಪುಟ ವಿಸ್ತರಣೆ ಕೌತುಕಕ್ಕೆ ಇಂದು ತೆರೆ: ಸಂಜೆ ರಾಜಭವನದಲ್ಲಿ 20 ನೂತನ ಸಚಿವರ ಪದಗ್ರಹಣ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ...

Homeಶಿಕ್ಷಣ

ಬಿ.ಐ.ಇ.ಟಿ. ಯಲ್ಲಿ ನೈಲಿಟ್‌ನ 90 ಗಂಟೆಗಳ ‘ಚಿಪ್‌ಕ್ರಾಫ್ಟ್’ ಸೆಮಿಕಂಡಕ್ಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ದಾವಣಗೆರೆ : ಬಾಪೂಜಿ ಇಂಜಿನಿಯರಿಂಗ್  ಮತ್ತು ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್...

Homeಸುದ್ದಿಗಳು

ನರೇಗಾ ಮಾದರಿ ಕಾಮಗಾರಿ ಮರುಸ್ಥಾಪನೆಗೆ ಆಗ್ರಹ

ಹರಪನಹಳ್ಳಿ : ಹೊಸದಾಗಿ ಜಾರಿಗೆ ತಂದಿರುವ ವಿಬಿಜಿ ರಾಮ್‍ಜಿ ಕಾಯ್ದೆಯಡಿ ಹಳೆಯ ನರೇಗಾ ಮಾದರಿ ಕಾಮಗಾರಿಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.