Home ಮನರಂಜನೆ ಹರಪನಹಳ್ಳಿಯಲ್ಲಿ  ನಾಟಕೋತ್ಸವ ಮೂರು ದಿನ
ಮನರಂಜನೆ

ಹರಪನಹಳ್ಳಿಯಲ್ಲಿ  ನಾಟಕೋತ್ಸವ ಮೂರು ದಿನ

Share
mpraveendra,sanehalli,natakotsava
Share

ಹರಪನಹಳ್ಳಿ : ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಅವರಂತೆ ರಂಗಭೂಮಿ, ಸಾಂಸ್ಕೃತಿಕ ಲೋಕದ ಕಲಾವಿದರನ್ನು ಪ್ರೋತ್ಸಾಹಿಸುವ ಕಾಳಜಿಯೊಂದಿಗೆ ತಂದೆಯ ದಾರಿಯಲ್ಲಿ ಸಾಗುತ್ತಿರುವ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರೀಗ ಹರಪನಹಳ್ಳಿ ಹಳೇ ಬಸ್ ನಿಲ್ದಾಣ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಕಾರ್ತಿಕ ಮಾಸದ ನಾಟಕೋತ್ಸವ ನ.22 ರಿಂದ ನ.24ರ ವರೆಗೆ ಮೂರು ದಿನ ಆಯೋಜಿಸಿದ್ದಾರೆ.

ಈ ಕುರಿತು ಎಂ.ಪಿ.ರವೀಂದ್ರ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಂ.ಗೌತಮ್  ಪ್ರಭು ಮಾತನಾಡಿ, ಸಾಣೆಹಳ್ಳಿ ಶಿವಸಂಚಾರ ರಂಗ ಕಲಾವಿದರಿಂದ ನಡೆಯುವ ನ.22ರ ಶನಿವಾರ ಸಂಜೆ 7 ಗಂಟೆಗೆ ಜಂಗಮದೆಡೆಗೆ, ನ.23ರ ಭಾನುವಾರ ಸಂಜೆ 7 ಗಂಟೆಗೆ ಕಳ್ಳರ ಸಂತೆ, ನ.24ರ ಸೋಮವಾರ ಸಂಜೆ 7 ಗಂಟೆಗೆ ಶಿವಯೋಗಿ ಸಿದ್ದರಾಮೇಶ್ವರ ನಾಟಕಗಳು ಎಂ.ಪಿ.ರವೀಂದ್ರ ರಂಗವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿವೆ.

ಸಾಣೆಹಳ್ಳಿ ಶಿವ ಸಂಚಾರ ರಂಗ ಕಲಾವಿದರ ಭಾವಾಭಿನಯ, ವಸ್ತ್ರ ವಿನ್ಯಾಸ, ಆಕರ್ಷಕ ರಂಗ ವೇದಿಕೆ, ಸುಂದರ ಪದ ಪ್ರಯೋಗ.. ಮನೋರಂಜನೆಯ ಜೊತೆಗೆ, ಸಾಮಾಜಿಕ ಸಂಬಂಧಗಳನ್ನು ಸೃಜನಶೀಲ ನೆಲಗಟ್ಟಿನ ಮೇಲೆ ಬೆಸೆಯುವಂತಹ, ಜಾತ್ಯಾತೀತತೆ, ಮನುಷ್ಯ ಪ್ರೀತಿ ಇಟ್ಟುಕೊಂಡ ನಾಟಕಗಳು ಇವಾಗಿವೆ. ತಾಲ್ಲೂಕಿನ ಜನತೆ ಸಮಯಕ್ಕೆ ಸರಿಯಾಗಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಂ.ಗೌತಮ್ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Share

Leave a comment

Leave a Reply

Your email address will not be published. Required fields are marked *

Related Articles
RAVICHANDRAN
Homeಕಲೆಮನರಂಜನೆ

 ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾ ರಾಯಭಾರಿ ವರ್ಣರಂಜಿತ, ವರ್ಣಾತಿತ ಕಲಾವಿದ

ದಾವಣಗೆರೆ: ಮನುಷ್ಯನಿಗೆ ನೆಮ್ಮದಿ ಕೊಡುವುದು ತಂದೆಯ ಹೆಗಲು, ನೆಮ್ಮದಿಯನ್ನು ಹೆಚ್ಚು ಮಾಡುವುದು ತಾಯಿಯ ಮಡಿಲು.  ರವಿಚಂದ್ರನ್...

chigateri-folk-artists-awareness-meeting
ಕಲೆಮನರಂಜನೆ

ಚಿಗಟೇರಿಯಲ್ಲಿ ಜಾನಪದ ಕಲಾವಿದರ ಜಾಗೃತಿ ಸಭೆ

ಹರಪನಹಳ್ಳಿ: ‘ಗ್ರಾಮೀಣ ಕಲಾವಿದರು ಎಂದರೆ ಹಳ್ಳಿಯ ನಾಡಿಮಿಡಿತವಿದ್ದಂತೆ. ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕಗಳು ಕೇವಲ...

ಹರಪನಹಳ್ಳಿ: ಅರಸೀಕೆರೆಯಲ್ಲಿ  'ಸಂಗ್ಯಾ ಬಾಳ್ಯ' ನಾಟಕ 
ಕಲೆಮನರಂಜನೆ

ಹರಪನಹಳ್ಳಿ: ಅರಸೀಕೆರೆಯಲ್ಲಿ  ‘ಸಂಗ್ಯಾ ಬಾಳ್ಯ’ ನಾಟಕ 

ಹರಪನಹಳ್ಳಿ: ಇತ್ತೀಚಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಗ್ರಾಮೀಣ ಭಾಗದ ನಾಟಕ...

ಕ್ರೀಡೆಮನರಂಜನೆಸುದ್ದಿಗಳು

ಕೆಂಪು ಮಣ್ಣಿನ ಕಣದಲ್ಲಿ ಪೈಲ್ವಾನರ ಜಿದ್ದಾಜಿದ್ದಿ

ವಿಜಯನಗರ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವಂತೆ, ಹಂಪಿಯ ಹೊಸಮಲಪನಗುಡಿಯ ವಿದ್ಯಾರಣ್ಯ ಪೀಠದ ಮೈದಾನದಲ್ಲಿ ಶನಿವಾರ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.