Home ಮನರಂಜನೆ ಭಕ್ತಿ ಭಂಡಾರಿ ಬಸವಣ್ಣನ ಸಾಧನೆ ಪ್ರದರ್ಶನ
ಮನರಂಜನೆ

ಭಕ್ತಿ ಭಂಡಾರಿ ಬಸವಣ್ಣನ ಸಾಧನೆ ಪ್ರದರ್ಶನ

Share
vachanakar-basavanna-jangamadege-harapanahalli-sanehalli
Share

ಹರಪನಹಳ್ಳಿ : ಇಲ್ಲಿಯ ಹಳೆ ಬಸ್ ನಿಲ್ದಾಣದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಕಾರ್ತಿಕ ಮಾಸ ನಾಟಕೋತ್ಸವದಲ್ಲಿ ಸಾಣೆಹಳ್ಳಿ ಶಿವಸಂಚಾರ  ರಂಗ ಕಲಾವಿದರು ಜಂಗಮದೆಡೆಗೆ ನಾಟಕ ಪ್ರದರ್ಶಿಸಿದರು.

ನಾಟಕೋತ್ಸವಕ್ಕೆ ಚಾಲನೆ ನೀಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ರಂಗಭೂಮಿ ಕಲೆ ಮತ್ತು ಕಲಾವಿದರನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಭಕ್ತಿ ಭಂಡಾರಿ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಅಂತಹ ಮಹನೀಯರು ಹೋರಾಟದ ನೆನಪು ಮೆಲುಕು ಹಾಕುವ ಇಂತಹ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳಬೇಕು. ನಾಟಕ ನೋಡುಗರ ಸಂಖ್ಯೆಯು ಹೆಚ್ಚಾಗಬೇಕು ಎಂದರು.

ವಚನಕಾರ ಬಸವಣ್ಣನವರ ಸಮ ಸಮಾಜ ನಿರ್ಮಾಣದ ಕನಸ್ಸು, ಬಸವಾದಿ ಶರಣರು ರಚಿತ ವಚನಗಳ ಸುಶ್ರಾವ್ಯ ಗಾಯನದ ನಡುವೆ ಬಸವಣ್ಣನ ಹೋರಾಟವನ್ನು ಪಾತ್ರಧಾರಿಗಳು ಪ್ರದರ್ಶಿಸಿದರು. ಬಸವಣ್ಣ ಬಾಲ್ಯದಲ್ಲೇ ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಇಡುತ್ತಿರುವುದು ಆರಂಭದ ದೃಶ್ಯದಿಂದ ವ್ಯಕ್ತವಾಗುತ್ತದೆ. ಆತ ಸ್ಥಾವರವಾಗದೇ, ಜಂಗಮದೆಡಗೆ ನಡೆಯುವುದು ನಾಟಕದ ಸತ್ವಕ್ಕೆ ಸಾಕ್ಷಿಯಾಯಿತು. ಜಾತಿಯ ಭೂತದಿಂದ ಹೊರಬಂದ ವಿಶ್ವಪ್ರೇಮಿಯಾಗಿ ಹೊರಹೊಮ್ಮಿದ ಬಸವಣ್ಣ ಮಾನವೀಯತೆಯ ಸಾಕಾರಮೂರ್ತಿ, ವಿವೇಕಿ, ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ಧೈರ್ಯಶಾಲಿ ಎಂಬುದನ್ನು ನಾಟಕದ ತಿರುಳು.

ಕೊನೆಯ ದೃಶ್ಯದಲ್ಲಿ  ನಡೆ ನುಡಿ ಒಂದಾದರೆ ಏನೆಲ್ಲಾ ಸಾಧಿಸಬಹುದು, ಬೆಳಕು ಸೃಷ್ಟಿ ಮಾಡುವವರ ಜೊತೆಯಿಲ್ಲ, ಅದು ಎಲ್ಲ ಕಡೆಗೂ ಇದೆ, ಆ ಸಾಮರಸ್ಯದ ಬೆಳಕು ಪಡೆಯುವುದೇ ನಿಜ ಜಂಗಮ ಎಂಬುದನ್ನು ನಾಟಕದ ಮೂಲಕ ಶಿವಸಂಚಾರ ತಂಡದ ಕಲಾವಿದರು  ಪ್ರಸ್ತುತಪಡಿಸಿ, ಪ್ರೇಕ್ಷಕರ ಮೆಚ್ಚುಗೆ ಪಡೆದರು. ಬಸವಣ್ಣನ ಪಾತ್ರದಲ್ಲಿ ಸುನೀಲ ಕಲಬುರಗಿ, ಅಲ್ಲಮಪ್ರಭು –ಬಸವರಾಜ ತಮ್ಮಣ್ಣ ಪೂಜಾರಿ, ಮಾದರಸ- ವಿಶ್ವಾಸರೆಡ್ಡಿ, ಸವಿತಾ, ಶ್ರೀಶೈಲ, ಪ್ರವೀಣ ಕೊಪ್ಪಳ, ಉದಯಕುಮಾರ, ದೀನೇಶ, ವಿಶ್ವಜ್ಯೋತಿ, ಪ್ರಶಾಂತ್, ಜಿ.ಯಲ್ಲಪ್ಪ, ಸುಹಾಸ್, ರಾಜೇಶ್, ಜನಾರ್ಧನ್ ಅವರು ವಿವಿಧ ಪಾತ್ರಗಳಿಗೆ ಜೀವ ತುಂಬಿದರು.  ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಯಡಿಹಳ್ಳಿ ಉದಯಶಂಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ವಸಂತಪ್ಪ, ಮೈದೂರು ಒ.ರಾಮಪ್ಪ, ದ್ವಾರಕೀಶ ರೆಡ್ಡಿ, ಸಾಸ್ವಿಹಳ್ಳಿ ನಾಗರಾಜ್, ಮತ್ತೂರು ಬಸವರಾಜ್, ಮತ್ತಿಹಳ್ಳಿ ರಾಮಪ್ಪ, ಇತರರಿದ್ದರು.

 

 

 

Share

Leave a comment

Leave a Reply

Your email address will not be published. Required fields are marked *

Related Articles
RAVICHANDRAN
Homeಕಲೆಮನರಂಜನೆ

 ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಿನಿಮಾ ರಾಯಭಾರಿ ವರ್ಣರಂಜಿತ, ವರ್ಣಾತಿತ ಕಲಾವಿದ

ದಾವಣಗೆರೆ: ಮನುಷ್ಯನಿಗೆ ನೆಮ್ಮದಿ ಕೊಡುವುದು ತಂದೆಯ ಹೆಗಲು, ನೆಮ್ಮದಿಯನ್ನು ಹೆಚ್ಚು ಮಾಡುವುದು ತಾಯಿಯ ಮಡಿಲು.  ರವಿಚಂದ್ರನ್...

chigateri-folk-artists-awareness-meeting
ಕಲೆಮನರಂಜನೆ

ಚಿಗಟೇರಿಯಲ್ಲಿ ಜಾನಪದ ಕಲಾವಿದರ ಜಾಗೃತಿ ಸಭೆ

ಹರಪನಹಳ್ಳಿ: ‘ಗ್ರಾಮೀಣ ಕಲಾವಿದರು ಎಂದರೆ ಹಳ್ಳಿಯ ನಾಡಿಮಿಡಿತವಿದ್ದಂತೆ. ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕಗಳು ಕೇವಲ...

ಹರಪನಹಳ್ಳಿ: ಅರಸೀಕೆರೆಯಲ್ಲಿ  'ಸಂಗ್ಯಾ ಬಾಳ್ಯ' ನಾಟಕ 
ಕಲೆಮನರಂಜನೆ

ಹರಪನಹಳ್ಳಿ: ಅರಸೀಕೆರೆಯಲ್ಲಿ  ‘ಸಂಗ್ಯಾ ಬಾಳ್ಯ’ ನಾಟಕ 

ಹರಪನಹಳ್ಳಿ: ಇತ್ತೀಚಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಗ್ರಾಮೀಣ ಭಾಗದ ನಾಟಕ...

ಕ್ರೀಡೆಮನರಂಜನೆಸುದ್ದಿಗಳು

ಕೆಂಪು ಮಣ್ಣಿನ ಕಣದಲ್ಲಿ ಪೈಲ್ವಾನರ ಜಿದ್ದಾಜಿದ್ದಿ

ವಿಜಯನಗರ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವಂತೆ, ಹಂಪಿಯ ಹೊಸಮಲಪನಗುಡಿಯ ವಿದ್ಯಾರಣ್ಯ ಪೀಠದ ಮೈದಾನದಲ್ಲಿ ಶನಿವಾರ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.