Home ಶಿಕ್ಷಣ ಪೊಲೀಸರಿಂದ ಆಂಜನೇಯ ಸ್ವಾಮಿ ಕಾರ್ತಿಕ
ಶಿಕ್ಷಣ

ಪೊಲೀಸರಿಂದ ಆಂಜನೇಯ ಸ್ವಾಮಿ ಕಾರ್ತಿಕ

Share
ಪೊಲೀಸರಿಂದ ಆಂಜನೇಯ ಸ್ವಾಮಿ ಕಾರ್ತಿಕ
Share

ಹರಪನಹಳ್ಳಿ : ತಾಲ್ಲೂಕಿನ ಅರಸೀಕೆರೆ ಗ್ರಾಮದ ಪೊಲೀಸ್ ಠಾಣೆ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ತಿಕೋತ್ಸವವನ್ನು ಠಾಣೆ ಪೊಲೀಸರು ಶನಿವಾರ ಅದ್ದೂರಿಯಾಗಿ ಆಚರಿಸಿದ್ದಾರೆ.ಆಂಜನೇಯ ದೇವಸ್ಥಾನಕ್ಕೆ ವಿವಿಧ ವಿದ್ಯುತ್ ದೀಪಾಲಂಕಾರ, ಪುಷ್ಪಾರ್ಚನೆ, ಬಾಳೆಕಂಬ, ಮಾವಿನತೋರಣ, ತೆಂಗಿನಗರಿಗಳ ಅಲಂಕಾರ, ರಂಗೋಲಿ,ಆಂಜನೇಯ ಸ್ವಾಮಿಗೆ ವಿವಿಧ ಬಣ್ಣಗಳಿಂದ ಅಲಂಕಾರ, ನೈವೇದ್ಯ ಸಲ್ಲಿಸಿದರು.    ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ ದೀಪ ಹಚ್ಚುವುದರ ಮೂಲಕ ಅದ್ದೂರಿಯಾಗಿ ಆಂಜನೇಯ ಸ್ವಾಮಿಯ ಕಾರ್ತೀಕೋತ್ಸವ ನೆರವೇರಿಸಿದರು. ಪೂಜೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಠಾಣೆಯ ಪಿಎಸ್‍ಐ ವಿಜಯ್ ಕೃಷ್ಣ, ಪೊಲೀಸ್ ಸಿಬ್ಬಂದಿಗಳಾದ ಕೂಲಹಳ್ಳಿ ಕೊಟ್ರೇಶ್, ರವಿನಾಯ್ಕ್, ಗೂರ್ಯ ನಾಯ್ಕ್, ದೇವೇಂದ್ರ ನಾಯ್ಕ್, ಹನುಮಂತ, ವೀರಮ್ಮ, ಮುಖಂಡರಾದ ಎ.ಹೆಚ್.ಕೊಟ್ರೇಶ್, ಮಹೇಶ್,ಯೋಗೀಶ್, ಗಣೇಶ್,ಆಕಾಶ್, ನಿಂಗಪ್ಪ, ಗ್ರಾಮಸ್ಥರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಶಿಕ್ಷಣ

ಬಿ.ಐ.ಇ.ಟಿ. ಯಲ್ಲಿ ನೈಲಿಟ್‌ನ 90 ಗಂಟೆಗಳ ‘ಚಿಪ್‌ಕ್ರಾಫ್ಟ್’ ಸೆಮಿಕಂಡಕ್ಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

ದಾವಣಗೆರೆ : ಬಾಪೂಜಿ ಇಂಜಿನಿಯರಿಂಗ್  ಮತ್ತು ತಾಂತ್ರಿಕ ಮಹಾವಿದ್ಯಾಲಯ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್...

Homeಶಿಕ್ಷಣ

ವಿದ್ಯಾರ್ಥಿ ದೆಸೆಯಲ್ಲೇ ದೊಡ್ಡಮಟ್ಟದ ಸಾಧನೆಯ ಗುರಿ ಇರಲಿ

ಹರಪನಹಳ್ಳಿ: ಶಿಕ್ಷಣ ಪಡೆಯುವಾಗಲೇ ವಿದ್ಯಾರ್ಥಿಗಳು ದೊಡ್ಡಮಟ್ಟದ ಸಾಧನೆಯ ಗುರಿ ಇಟ್ಟುಕೊಳ್ಳಬೇಕು ಎಂದು ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಪಿ. ಮಹಾಬಲೇಶ್ವರಗೌಡ್ರು ಕಿವಿಮಾತು ಹೇಳಿದರು. ನಗರದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಎಚ್.ಪಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2026 -27ನೇ...

Homeಶಿಕ್ಷಣ

ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026-27 ನೇ ಸಾಲಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ದೂರ ಶಿಕ್ಷಣ ಮಾದರಿ...

Homeಶಿಕ್ಷಣ

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ :

ದಾವಣಗೆರೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ (ಸಾಮಾನ್ಯ ಪದವಿ ಮಟ್ಟದ ಕೋರ್ಸಿನವಿದ್ಯಾರ್ಥಿಗಳಿಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.