Home ಅಧಿವೇಶನದಲ್ಲಿ ಸಿಎಂ, ಸಭಾಪತಿ, ವಿರೋಧ ಪಕ್ಷದಿಂದ ಸಂತಾಪ
Home

ಅಧಿವೇಶನದಲ್ಲಿ ಸಿಎಂ, ಸಭಾಪತಿ, ವಿರೋಧ ಪಕ್ಷದಿಂದ ಸಂತಾಪ

Share
Condolences from CM, Speaker, Opposition parties during the session
Share

ಬೆಳಗಾವಿ : ದಾವಣಗೆರೆ ರಾಜ್ಯದ, ದೇಶದ ಗಮನ ಸೆಳೆದಿದೆ ಎಂದರೆ ಅದಕ್ಕೆ ಶಾಮನೂರು ಶಿವಶಂಕರಪ್ಪ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ಸಂತಾಪ ಸೂಚಿಸಿ ಅವರು ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಹಿಂದೆ ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಸಚಿವರಾಗಿದ್ದರು, ಈಗಿನ ಸರ್ಕಾರದಲ್ಲಿ ಅವರೇ ಸ್ವತಃ ತಮ್ಮ ಮಗ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ಕೊಡಿಸಿದರು.

ನಾನು ದಾವಣಗೆರೆ ಹೊರಟರೇ, ಅವರೇ ನನಗೆ ಕರೆ ಮಾಡಿ ಮನೆಗೆ ಊಟಕ್ಕೆ ಕರೆಯುತ್ತಿದ್ದರು. ನನ್ನ ಹುಟ್ಟಿದ ಹಬ್ಬದ ಆಚರಣೆ ಮಾಡಿದಾಗ ಅವರ ದಾವಣಗೆರೆ ಅವರ ಒಡೆತನದ ಜಾಗದಲ್ಲಿ ಆಚರಿಸಿದ್ದರು. ನನಗೆ ನನ್ನ ಜನ್ಮ ದಿನಾಂಕ ಗೊತ್ತಿಲ್ಲ, ನಮ್ಮ ಮೇಷ್ಟ್ರು ಬರೆದಿದ್ದ ದಿನಾಂಕ ಅದು. ಶಿವಶಂಕರಪ್ಪ ಅವರು ಸಹಾಯ ಹಸ್ತ ಗುಣ ಬಹಳ ಇತ್ತು. ಕೊವಿಡ್‌ ಸಂದರ್ಭದಲ್ಲಿ 6 ಕೋಟಿ ಹಣ ಸ್ವಂತ ಖರ್ಚು ಮಾಡಿ, ನೆರವಿಗೆ ಧಾವಿಸಿದ್ದರು. ಅವರು ಅಗಲಿರುವುದು ನಮಗೆ ತುಂಬಾ ನೋವು ತಂದಿದೆ.

ಸಭಾಪತಿ ಯು.ಟಿ.ಖಾದರ್‌ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಸದನದ ಸದಸ್ಯರಾಗಿದ್ದರು. ಅವರು ದಾವಣಗೆರೆಯ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರೊರ್ವ ಕೊಡುಗೈ ದಾನಿಯಾಗಿದ್ದರು, ಅವರೂ ತಮ್ಮ ತಂದೆಯ ಜೊತೆಗಿನ ಒಡನಾಟವನ್ನು ಸಭಾಪತಿ ಅವರು ಸ್ಮರಿಸಿದರು. ವಿರೋಧ ಪಕ್ಷದ ನಾಯಕ ಆರ್.ಲೋಕೇಶ ಮಾತನಾಡಿ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುತ್ತಾ, ಶಾಸಕರು, ಸಂಸದರು, ಸಚಿವರಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರ, ಸಮಾಜದ ಕೆಲಸ ಮಾಡುವಾಗ, ವೀರಶೈವ ಮಹಾಸಭಾದ ಬಗ್ಗೆ ನಿಷ್ಠುರವಾಗಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗೆ ಯಾರೂ ಪ್ರತಿರೋಧ ಮಾಡುತ್ತಿರಲಿಲ್ಲ ಎಂದು ಅವರ ಒಡನಾಟವನ್ನು ಸ್ಮರಿಸಿದರು. ಸಚಿವರಾದ ಮುನಿಯಪ್ಪ, ಶಾಸಕ ಸುರೇಶ ಕುಮಾರ, ಬಾಲಕೃಷ್ಣ, ಯು.ಬಿ.ಬಣಕಾರ   ಸೇರಿದಂತೆ ಅನೇಕ ಸಚಿವರು, ಶಾಸಕರು ಶಿವಶಂಕರಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.