Home ಸುದ್ದಿಗಳು ದೀಪೋತ್ಸವದಿಂದ ಹೊಸ ಚೈತನ್ಯ ಮೂಡುತ್ತದೆ : ಮಂಜುನಾಥ ಇಜಂತಕರ್
ಸುದ್ದಿಗಳು

ದೀಪೋತ್ಸವದಿಂದ ಹೊಸ ಚೈತನ್ಯ ಮೂಡುತ್ತದೆ : ಮಂಜುನಾಥ ಇಜಂತಕರ್

Share
ಆದಿಬಸವೇಶ್ವರ ಬಡಾವಣೆಯ ಶ್ರೀ ವರಕೈ ಆಂಜನೇಯ ಸ್ವಾಮಿ
Share

ಹರಪನಹಳ್ಳಿ :  ಧಾರ್ಮಿಕ ಕಾರ್ಯಗಳು ಜನತೆಯಲ್ಲಿ ಹೊಸ ಸಂಸ್ಕೃತಿಯನ್ನು ಮೂಡಿಸಲು ಸಹಕಾರಿಯಾಗಿವೆಯಲ್ಲದೆ ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್ ಹೇಳಿದರು.

ನಗರದ ಹರಿಹರ ರಸ್ತೆಯ ಆದಿಬಸವೇಶ್ವರ ಬಡಾವಣೆಯಲ್ಲಿ   ಶ್ರೀ ವರಕೈ ಆಂಜನೇಯ ಸ್ವಾಮಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ  ಆಂಜನೇಯಸ್ವಾಮಿ ಕಾರ್ತಿಕೋತ್ಸವ ಹಾಗೂ  ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷ್ಯನ ಜೀವನ ಕ್ಷಣಿಕ, ಧಾನ, ಧರ್ಮಗಳನ್ನು ಮಾಡುವ ಮೂಲಕ ಮಾನವ ಜೀವನ ದಲ್ಲಿ ಸಾರ್ಥಕತೆ ಹೊಂದಬೇಕು. ಹಸಿದವರಿಗೆ ಅನ್ನ ಕೊಡುವುದು ಪುಣ್ಯದ ಕೆಲಸ, ಮತ್ತು ಅದೇ ಧರ್ಮ ಎನಿಸುತ್ತದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ  ಎಚ್.ಎಂ. ಅಶೋಕ ಹರಾಳು ಮಾತನಾಡಿ,  ಹೊಸ ಚೈತನ್ಯವನ್ನು ನೀಡುವುದಕ್ಕೆ ಕಾರ್ತಿಕ ಮಾಸದ ದೀಪೋತ್ಸವ ಸಾಕ್ಷಿಯಾಗಲಿದೆ. ಬಾಳಿನ ಉನ್ನತಿ ಮತ್ತು ಅವನತಿಗಳಿಗೆ ಮನುಷ್ಯನ ಮನಸ್ಸೇ ಕಾರಣವಾಗಿದೆ ಮನುಷ್ಯ ಬದುಕಿನಲ್ಲಿ ನೀತಿ ಸಂಹಿತೆ ಸದಾಚಾರ ಸಂಪನ್ನಮ ಧಾರ್ಮಿಕ ಗುಣಗಳನ್ನು ಅಳವಡಿಸಿಕೊಂಡು ಬಾಳಿದರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ ಆಗುತ್ತದೆ ಎಂದು ತಿಳಿಸಿದರು.

ವಕೀಲ ಕೋಡಿಹಳ್ಳಿ ಪ್ರಕಾಶ ಮಾತನಾಡಿ,  ಕಾರ್ತಿಕೋತ್ಸವ ಎಂದರೆ ಕತ್ತಲೆ ಹೋಗಲಾಡಿಸಿ ಬೆಳಕು ಚೆಲ್ಲುವ ಹಬ್ಬವಾಗಿದೆ. ದೀಪವು ತಾನು ಉರಿದು ಎಲ್ಲರಿಗೂ ಬೆಳಕು ನೀಡುತ್ತದೆ ಹಾಗೆ ಮನುಷ್ಯನು ತನ್ನ ಜೀವನದಲ್ಲಿ ದೀಪದಂತೆ ಎಲ್ಲರಿಗೂ ಒಳಿತನ್ನು ಬಯಸಿ ಬೆಳಕು ನೀಡಬೇಕು.

ಬೆಳಗುವ ಜ್ಯೋತಿಗೆ ಯಾವುದೇ ಜಾತಿಯಿಲ್ಲ. ಸಮಾಜದಲ್ಲಿಜಾತಿ, ಮತ, ಪಂಥವೆನ್ನದೆ ಎಲ್ಲರೂ ಸಮಾನವಾಗಿ ಬಾಳಬೇಕು. ಜೀವನದಲ್ಲಿ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ತನ್ನ ಜೀವನದಲ್ಲಿ ಒಳ್ಳೆಯ ಕಾರ್ಯ ಮಾಡಬೇಕು. ಕತ್ತಲೆ ಅಳೆದು ಜ್ಞಾನದ ದೀಪ ಬೆಳಗಲಿ ಎಂದರು. ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ  ಕೆ.ಉಚ್ಚೆಂಗೆಪ್ಪ,  ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ  ಜಿಟ್ಟಿನಕಟ್ಟಿ ಮಂಜುನಾಥ, ಶ್ರೀ ವರಕೈ ಆಂಜನೇಯ ಸ್ವಾಮಿ ಸೇವಾ ಸಮಿತಿಯ ಆಲೂರು ಶ್ರೀನಿವಾಸ, ಹಳೇಬ್ಯಾಡರ ಪರಸಪ್ಪ, ಎಂ.ಜಾಪರ್ ಸಾಹೇಬ್,ಕೆ.ಹಾಲಪ್ಪ, ಬೆಲ್ಲದ ಅಂಜಿನಪ್ಪ, ವೇಷಗಾರ ರಾಮಪ್ಪ, ದಾವಣಗೆರೆ  ಊರಪ್ಪ, ಅರ್ಚಕ ಕೆ.ತಿರುಮಲ, ಕೆ.ಸೋಮಶೇಖರ, ಇದ್ಲಿ ಮಂಜುನಾಥ, ದಾಸರ ಮಂಜಪ್ಪ, ಯಲ್ಲಜ್ಜಿ ಹನುಮಂತಪ್ಪ, ಶಿರಹಟ್ಟಿ ಸಣ್ಣ ದುರುಗಪ್ಪ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.