Home ಸುದ್ದಿಗಳು ದೇವರ ತಿಮ್ಲಾಪುರ : ಮಹಿಳಾ ವಿಚಾರ ಗೋಷ್ಠಿ
ಸುದ್ದಿಗಳು

ದೇವರ ತಿಮ್ಲಾಪುರ : ಮಹಿಳಾ ವಿಚಾರ ಗೋಷ್ಠಿ

Share
ದೇವರ ತಿಮ್ಲಾಪುರ : ಮಹಿಳಾ ವಿಚಾರ ಗೋಷ್ಠಿ
Share

ಹರಪನಹಳ್ಳಿ : ಕುಟುಂಬಗಳು ಆರ್ಥಿಕ ಸಬಲೀಕರಣ ಹೊಂದುವಲ್ಲಿ ಮಹಿಳೆಯರು ಪಾತ್ರ ದೊಡ್ಡದು ಎಂದು ಚಿಗಟೇರಿ ಠಾಣೆ ಎಸ್‍ಐ ಕೆ.ನಾಗರತ್ನ ತಿಳಿಸಿದರು.

ಹರಪನಹಳ್ಳಿ ನಗರಕ್ಕೆ ಸಮೀಪದ ದೇವರ ತಿಮಲಾಪುರ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಶನಿವಾರ ನಡೆದ ತಾಲೂಕು ಮಟ್ಟದ ಮಹಿಳಾ ಜ್ಞಾನ ವಿಕಾಸ ಮತ್ತು ವಿಚಾರ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಕಾಳಜಿವಹಿಸಬೇಕು. ಹೊರಗಡೆ ಸಭೆ ಸಮಾರಂಭಗಳಿಗೆ ಹೋಗುವಾಗ ದೇಹದ ಮೇಲೆ ಹಾಕಿಕೊಂಡಿರುವ ಆಭರಣಗಳ ಬಗ್ಗೆ ಜಾಗೃತಿ ಇರಬೇಕು. ಮಹಿಳೆಯರ ರಕ್ಷಣೆಗಾಗಿ ಪೊಲೀಸ್ ಇಲಾಖೆ ವಿಜಯ ಪೊಲೀಸ್ ಪಡೆ ರಚಿಸಲಾಗಿದ್ದು, ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು.

ಚಿತ್ರದುರ್ಗ ಧರ್ಮಸ್ಥಳ ಸಂಘದ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ. ಮಹಿಳೆಯರು ಮೊಬೈಲ್, ಟಿವಿ, ಧಾರವಾಹಿಗಳಿಗೆ ಗಮನ ಕೊಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎನ್ ಎಸ್ ಮಮತಾ, ಕುಸುಮಾ ಜಗದೀಶ್, ಕ್ಷೇತ್ರ ಯೋಜನಾಧಿಕಾರಿ ಬಾಬು, ಗೀತಾ, ಅನಿತಾ ಮತ್ತು ಉಪನ್ಯಾಸಕಿ ಸುವರ್ಣ ಆರುಂಡಿ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮೇಲ್ವಿಚಾರಕಿಯರು ಹಾಗೂ ಸೇವಾ ಪ್ರತಿನಿಧಿಗಳಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು : ಎಚ್.ಎಂ.ಅಶೋಕ

ಹರಪನಹಳ್ಳಿ : ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಬಹುದೊಡ್ಡದು ಎಂದು ಪುರಸಭೆ ಮಾಜಿ...

Homeಸುದ್ದಿಗಳು

ಜುಲೈ 29 ರಂದು ಶಿವಶರಣ ಹಡಪದ ಅಪ್ಪಣ್ಣನವರ ಜಯಂತೋತ್ಸವ

ವಿಜಯನಗರ(ಹೊಸಪೇಟೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಜುಲೈ...

Homeಸುದ್ದಿಗಳು

‘ಬೇಡ ಬ್ರೋ’ ಜಾಗೃತಿ ಅಭಿಯಾನ: ದುಶ್ಚಟಕ್ಕೆ ಧೈರ್ಯವಾಗಿ ‘ನೋ’ ಎನ್ನಿ ಎಂದ ವಿಜಯನಗರ ಎಸ್ಪಿ ಜಾಹ್ನವಿ

ಹರಪನಹಳ್ಳಿ: ಇಂದಿನ ಯುವಜನತೆ ಪ್ರೀತಿ-ಪ್ರಣಯ ಹಾಗೂ ವಿರಹದ ಬೇಗುದಿಗೆ ಸಿಲುಕಿ ಮಾದಕ ದ್ರವ್ಯಗಳ (ಡ್ರಗ್ಸ್) ದಾಸರಾಗುತ್ತಿರುವುದು...

Homeಸುದ್ದಿಗಳು

ಸ್ವಾತಂತ್ರ್ಯ  ದಿನಾಚರಣೆಯ ಪೂರ್ವಸಿದ್ದತಾ ಸಭೆ

ದಾವಣಗೆರೆ : ಜಿಲ್ಲಾಡಳಿತ ವತಿಯಿಂದ ಆಚರಿಸಲಿರುವ ಸ್ವಾತಂತ್ರ್ಯ  ದಿನಾಚರಣೆ ಅಂಗವಾಗಿ ಪೂರ್ವ ಸಿದ್ದತೆ ಹಾಗೂ ಕಾರ್ಯಕ್ರಮಗಳ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.