Home ಸುದ್ದಿಗಳು ಹರಪನಹಳ್ಳಿಗೆ ಸೋಮವಾರ ಮೂವರು ಸಚಿವರು ಬರ್ತಾರೆ
ಸುದ್ದಿಗಳು

ಹರಪನಹಳ್ಳಿಗೆ ಸೋಮವಾರ ಮೂವರು ಸಚಿವರು ಬರ್ತಾರೆ

Share
ಹರಪನಹಳ್ಳಿಗೆ ಸೋಮವಾರ ಮೂವರು ಸಚಿವರು ಬರ್ತಾರೆ
Share

ಹರಪನಹಳ್ಳಿ : ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭ ನಗರದ ಹಳೆ ಬಸ್‌ ನಿಲ್ದಾಣದಲ್ಲಿ ನೆರವೇರಲಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಭಾನುವಾರ ವೇದಿಕೆಯ ಸಿದ್ದತೆಗಳನ್ನು ಪರಿಶೀಲಿಸಿದ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಸಚಿವರಾದ ಬೈರತಿ ಸುರೇಶ್, ಬಿ.ಜೆಡ್. ಝಮೀರ್ ಅಹ್ಮದ್ ಖಾನ್, ಪ್ರಿಯಾಂಕ ಖರ್ಗೆ,  ರಹಿಂಖಾನ್, ಬೋಸರಾಜು, ಮನೋಹರ್ ಲಾಲ್ ಖಟ್ಟರ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ 900 ಜನ ಕಾರ್ಮಿಕರಿಗೆ ಕಿಟ್‌ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕಾರ್ಮಿಕರು, ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಆಗಮಿಸುವ ಕಾರ್ಮಿಕರು, ಕಾರ್ಯಕರ್ತರು ಶಾಂತರೀತಿಯಿಂದ ಸಮಾರಂಭ ಮುಗಿಯುವ ತನಕ ಇದ್ದು, ಯಶಸ್ವಿ ಮಾಡಿಕೊಡಬೇಕು. ಮದ್ಯಾಹ್ನ  ಸರ್ಕಾರಿ ಜ್ಯೂನಿಯರ್‌ ಕಾಲೇಜು ಆವರಣದಲ್ಲಿ ಸಾರ್ವಜನಿಕ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷದ ಮುಖಂಡರಾದ ಎಚ್.ಎಂ.ಮಲ್ಲಿಕಾರ್ಜುನ, ಎಂ.ವಿ.ಅಂಜಿನಪ್ಪ, ಮತ್ತೂರು ಬಸವರಾಜ್‌, ತಿಮ್ಮನಾಯ್ಕ ಇತರರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು : ಎಚ್.ಎಂ.ಅಶೋಕ

ಹರಪನಹಳ್ಳಿ : ಸದೃಢ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ ಬಹುದೊಡ್ಡದು ಎಂದು ಪುರಸಭೆ ಮಾಜಿ...

Homeಸುದ್ದಿಗಳು

ಜುಲೈ 29 ರಂದು ಶಿವಶರಣ ಹಡಪದ ಅಪ್ಪಣ್ಣನವರ ಜಯಂತೋತ್ಸವ

ವಿಜಯನಗರ(ಹೊಸಪೇಟೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಜುಲೈ...

Homeಸುದ್ದಿಗಳು

‘ಬೇಡ ಬ್ರೋ’ ಜಾಗೃತಿ ಅಭಿಯಾನ: ದುಶ್ಚಟಕ್ಕೆ ಧೈರ್ಯವಾಗಿ ‘ನೋ’ ಎನ್ನಿ ಎಂದ ವಿಜಯನಗರ ಎಸ್ಪಿ ಜಾಹ್ನವಿ

ಹರಪನಹಳ್ಳಿ: ಇಂದಿನ ಯುವಜನತೆ ಪ್ರೀತಿ-ಪ್ರಣಯ ಹಾಗೂ ವಿರಹದ ಬೇಗುದಿಗೆ ಸಿಲುಕಿ ಮಾದಕ ದ್ರವ್ಯಗಳ (ಡ್ರಗ್ಸ್) ದಾಸರಾಗುತ್ತಿರುವುದು...

Homeಸುದ್ದಿಗಳು

ಸ್ವಾತಂತ್ರ್ಯ  ದಿನಾಚರಣೆಯ ಪೂರ್ವಸಿದ್ದತಾ ಸಭೆ

ದಾವಣಗೆರೆ : ಜಿಲ್ಲಾಡಳಿತ ವತಿಯಿಂದ ಆಚರಿಸಲಿರುವ ಸ್ವಾತಂತ್ರ್ಯ  ದಿನಾಚರಣೆ ಅಂಗವಾಗಿ ಪೂರ್ವ ಸಿದ್ದತೆ ಹಾಗೂ ಕಾರ್ಯಕ್ರಮಗಳ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.