Home ಸರ್ಕಾರಿ ಕಾರ್ಯಕ್ರಮದಲ್ಲಿ ತೆಗ್ಗಿನಮಠ ಶ್ರೀ ಭಾಗಿ : ಆರೋಪ
Home

ಸರ್ಕಾರಿ ಕಾರ್ಯಕ್ರಮದಲ್ಲಿ ತೆಗ್ಗಿನಮಠ ಶ್ರೀ ಭಾಗಿ : ಆರೋಪ

Share
Share

ಫ್ಯಾಕ್ಟ್ ಚೆಕ್ ವರದಿ

ಹರಪನಹಳ್ಳಿ : ಡಿ. 29ರ ಸೋಮವಾರ ತಾಲ್ಲೂಕು ಆಡಳಿತ, ನಗರಸಭೆ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ವೇದಿಕೆ ಹಂಚಿಕೊಂಡಿರುವುದು  ವಿವಾದ ಸೃಷ್ಟಿಯಾಗಿದೆ, ಇದರ ಬಗ್ಗೆ ಫ್ಯಾಕ್ಟ್ ಚೆಕ್ ವರದಿ ಜನರ ವಿಶ್ವಾಸದ ಸಿರಿಸುದ್ದಿ.ಕಾಂ.ನಲ್ಲಿದೆ ಓದಿ.

INVITATION CARD GOVT PROGRAM

ಅಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ತಾಲ್ಲೂಕು ಆಡಳಿತ, ನಗರಸಭೆ ಸಹಯೋಗದಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ 43.36 ಕೋಟಿ ವೆಚ್ಚದಲ್ಲಿ ಸಗಟು ನೀರು ಸರಬರಾಜು ಯೋಜನೆ, ತಾಲ್ಲೂಕು ಆಡಳಿತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದಡಿ ಹರಪನಹಳ್ಳಿ ತಾಲ್ಲೂಕು ಈಶಾಪುರ, ತುಂಬಿಗೇರಿ, ನಂದ್ಯಾಲ ಕ್ಯಾಂಪ್, ಬೆಂಡಿಗೇರಿ, ಕಂಭಟ್ರಹಳ್ಳಿ ಹಾಗೂ ಕಂಚಿಕೇರಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯಿಂದ ಹರಪನಹಳ್ಳಿ ತಾಲ್ಲೂಕು ಚೆನ್ನಿಹಳ್ಳಿ ತಾಂಡದಲ್ಲಿ ರೂ.5 ಕೋಟಿ ವೆಚ್ಚದಲ್ಲಿ  ಜಿನುಗು ಕೆರೆ ನಿರ್ಮಾಣ ಯೋಜನೆಗೆ ಭೂಮಿ ಪೂಜೆ ನೆರವೇರಿಸುವ ಕಾರ್ಯಕ್ರಮಗಳನ್ನು ಹಳೇ ಬಸ್ ನಿಲ್ದಾಣ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಲ್ಲಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಅವರ ಸಾನ್ನಿಧ್ಯ ನಮೂದಿಸಿರಲಿಲ್ಲ, ಅವರ ಹೆಸರು ಹಾಕಿರಲಿಲ್ಲ.

ಅವರು ವೇದಿಕೆಬರುತ್ತಿದ್ದಂತೆಯೇ ಮಾಹಿತಿ ಕೊರತೆಯಿಂದ ನಿರೂಪಕರು ತೆಗ್ಗಿನಮಠದ ಶ್ರೀಗಳಿಗೆ ಆಹ್ವಾನ ನೀಡಿದರು. ಇದು ಮುಜುಗರಕ್ಕೆ ಒಳಗಾಯಿತು. ಯಾರೊಬ್ಬರು ವೇದಿಕೆ ಆಹ್ವಾನ ಪತ್ರಿಕೆಗಳನ್ನು ಸ್ವಾಮೀಜಿ ಅವರ ಗಮನಕ್ಕೆ ತಂದಿರಲಿಲ್ಲ. ಆದರೆ ಅಧ್ಯಕ್ಷೀಯ ಭಾಷಣ ಮಾಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಅವರು ಸರ್ಕಾರಿ ಕಾರ್ಯಕ್ರಮ ಆಗಿರುವ ತೆಗ್ಗಿನಮಠ ಶ್ರೀಗಳನ್ನು ಆಹ್ವಾನಿಸಿರಲಿಲ್ಲ, ಆದರೂ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ ಎಂದು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂದು ಗೋದಾಮು ಉದ್ಘಾಟನೆಗೆ ಆಹ್ವಾನವಿತ್ತು

B90 SOCIETY HARAPANAHALLI

ಹಳೇ ಬಸ್ ನಿಲ್ದಾಣ ಬಳಿಯಿರುವ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ (ಬಿ90) ಅವರು ನಿರ್ಮಿಸಿರುವ ರೂ.2.36 ಕೋಟಿ ವೆಚ್ಚದ ನೂತನ ಗೋದಾಮು ಮತ್ತು ವ್ಯಾಪಾರಿ ಮಳಿಗೆಗಳ ಸಂಕೀರ್ಣ ಉದ್ಘಾಟನೆಯಲ್ಲಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಅವರನ್ನು ಆಹ್ವಾನಿಸಿದ್ದರು. ಸಂಘದವರೂ ಮುದ್ರಿಸಿದ ಆಹ್ವಾನ ಪತ್ರಿಕೆಯಲ್ಲಿ ತೆಗ್ಗಿನಮಠ ಶ್ರೀ ಅವರು ಸಾನ್ನಿಧ್ಯವಹಿಸಿ, ವೇದಿಕೆ ಹಂಚಿಕೊಂಡಿದ್ದಾರೆ.

ಆ ಕಾರ್ಯಕ್ರಮ ಮುಗಿಸಿದ ಸಚಿವ ಬೈರತಿ ಸುರೇಶ, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು, ಅಲ್ಲಿಂದ ನೇರವಾಗಿ ಹಳೇ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಿದ್ದ ಸರ್ಕಾರಿ ವೇದಿಕೆಗೆ ತೆರಳಿದರು. ಅವರ ಹಿಂದೆಯೇ ಸಾಗಿದ ತೆಗ್ಗಿನಮಠ ಶ್ರೀಗಳು ವೇದಿಕೆ ಮೇಲೆ ಏರಿ ವಿರಾಜಮಾನ ಆಗಿಬಿಟ್ಟರು. ಅವರಿಗೆ ಸೂಕ್ಷ್ಮವಾಗಿ ಗಮನಕ್ಕೆ ತಂದಿದ್ದರೆ, ಅವರು ಅಲ್ಲಿಂದ ತೆರಳುವ ಮನಸ್ಸು ಮಾಡುತ್ತಿರಬಹುದು. ಆದರೆ ಯಾರೊಬ್ಬರು ಅವರ ಗಮನಕ್ಕೆ ತರಲಿಲ್ಲ, ನಿರೂಪಕರು ಸಹ ಅವರನ್ನು ಆಹ್ವಾನಿಸಿದರು, ಇವೆಲ್ಲವೂ ವೇದಿಕೆಗೆ ಮುಜುಗರ ತಂದಿದೆ.

ಆಹ್ವಾನ ಇಲ್ಲದಿದ್ದರೂ ವೇದಿಕೆ ಹಂಚಿಕೊಂಡ ಶ್ರೀಗಳು : ಆರೋಪ

H VENKATESH

ಮಠಾಧೀಶರಾದ  ವರಸದೋಜಾತ ಶ್ರೀಗಳು ಶಿಷ್ಟಾಚಾರವನ್ನು ಉಲ್ಲಂಘಿಸಿ ಕಾರ್ಯಕ್ರಮಕ್ಕೆ ಆಹ್ವಾನ ಇಲ್ಲದಿದ್ದರೂ ಸಹ ಸರ್ಕಾರಿ ವೇದಿಕೆಯಲ್ಲಿ ಬಂದು ಕುಳಿತು ಶ್ರೀಮಠಕ್ಕೆ ದ ಮತ್ತು ಪಂಚಪೀಠದ ಗೌರವಕ್ಕೆ ಅಗೌರವ ತಂದಿದ್ದಾರೆ ಎಂದು ಕರ್ನಾಟಕ ರೈತ ಮಿತ್ರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಚ್.ವೆಂಕಟೇಶ್ ಆರೋಪಿಸಿದ್ದಾರೆ. ಹರಪನಹಳ್ಳಿ ಇತಿಹಾಸದ ಆಧ್ಯಾತ್ಮಿಕ ಮೇರು ಪರ್ವತದಂತಿರುವ ತೆಗ್ಗಿನಮಠದ ಶ್ರೀಗಳ ಈ ನಡೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.  ಮಾರ್ಗದರ್ಶನ ನೀಡಬೇಕಾದ ಗುರುಗಳೇ ಕಾರ್ಯಕ್ರಮಕ್ಕೆ ಆಹ್ವಾನ ಇಲ್ಲದಿದ್ದರೂ  ಅದರಲ್ಲಿಯೂ ರಾಜಕೀಯ ಸಮಾರಂಭದಲ್ಲಿ ಭಾಗವಹಿಸಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಜಕಾರಣದ ಬಗ್ಗೆ ಸ್ವಾಮಿಗಳಿಗೆ ಆಸಕ್ತಿ ಇದೆಯೋ ಅಥವಾ ಕುತೂಹಲವೋ ಇಲ್ಲವೇ ಶಾಸಕರು ತಮ್ಮ ಸಮುದಾಯದವರು ಎನ್ನುವ ಸಲಿಗೆಯಿಂದ ವೇದಿಕೆಯನ್ನು ಅಲಂಕರಿಸಿದ್ದರೋ ಗೊತ್ತಿಲ್ಲ ಆದರೆ ನೆರೆದಿದ್ದ ಸಭೀಕರ ಮುಂದೆ ಶ್ರೀಗಳ ಗೌರವದ  ಜೊತೆಗೆ  ಶ್ರೀಮಠದ ಘನತೆ ಹಾಳು ಮಾಡುವಂತೆ ಕಾಣುತ್ತಿತ್ತು.

ವರಸದೋಜಾತ ಶ್ರೀಗಳು ವಯಸ್ಸಿನಲ್ಲಿ ತುಂಬಾ ಚಿಕ್ಕವರಿರಬಹುದು ಆದರೆ ಶ್ರೀಮಠದ ಹಿರಿಮೆ ಪರಂಪರೆ ತುಂಬಾ ದೊಡ್ಡದಾಗಿದೆ. ಶ್ರೀಗಳು ಇನ್ನೂ ಆಧ್ಯಾತ್ಮಿಕ ವಿಷಯದಲ್ಲಿ ಅನುಭವ  ಹೊಂದಬೇಕಿದೆ ಹಾಗೂ ರಾಜಕಾರಣದ ಸೂಕ್ಷ್ಮತೆಗಳನ್ನು ಅರಿತುಕೊಳ್ಳಬೇಕಿದೆ.  ಶ್ರೀಮಠದ ಆಡಳಿತಾಧಿಕಾರಿಗಳಾದ ಟಿ.ಎಂ.ಚಂದ್ರಶೇಖರಯ್ಯನವರು ವರಸದೋಜಾತ ಶ್ರೀಗಳಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಶ್ರೀಮಠದ ಘನತೆಗೆ ದಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Homeಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ತಾಲೂಕಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ...

Homeಸುದ್ದಿಗಳು

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ...

Homeಸುದ್ದಿಗಳು

ಲಾಕಪ್ ಡೆತ್ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

ಹರಪನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಯುವಕನ ಲಾಕಪ್ ಡೆತ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಸಿಪಿಐ(ಎಂಎಲ್) ಹಾಗೂ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಗಳ ಮುಖಂಡರು ಆಗ್ರಹಿಸಿದ್ದಾರೆ. ಚಿತ್ತಾರಗೇರಿಯಲ್ಲಿರುವ  ಮೃತ ಖಲೀಲ್‌ ಅವರ ಮನೆಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.