ಹರಪನಹಳ್ಳಿ : ಇಲ್ಲಿಯ ವೀರಶೈವ ಪಂಚಮಸಾಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷ–ಉಪಾಧ್ಯಕ್ಷರ ಅವಿರೋಧ ಆಯ್ಕೆ ಮಾಡಲಾಯಿತು.
ನಗರದ ಗೊರವಿನ ತೋಟದಲ್ಲಿರುವ ವೀರಶೈವ ಪಂಚಮಸಾಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಆರ್. ಪ್ರಭಾಕರ, ಉಪಾಧ್ಯಕ್ಷರಾಗಿ ಪ್ರಭಾ ಅಜ್ಜಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಬಿ.ಎರ್ರಿಸ್ವಾಮಿ ಅವರು ಅಧಿಕೃತವಾಗಿ ಘೋಷಿಸಿದರು. ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಜಿ.ವಿಜಯಕುಮಾರ್, ಪೂಜಾರ್ ಚಂದ್ರಶೇಖರ್, ದೇವರಾಜ್ (ಹೂವಿನ ಅಂಗಡಿ), ಪೂಜಾರ್ ಮಂಜುನಾಥ, ರಾಜಶೇಖರ್ ಹಿರೇಮಗಳಿಗೆರಿ, ಪೂಜಾರ್ ಬಸರಾಜಪ್ಪ ತೆಲಿಗಿ, ಶ್ರೀಮತಿ ಕಾವ್ಯ ಕೊಟ್ರೇಶ್, ಪೂಜಾರ್ ವಾಗೀಶ್, ಎ.ಎಚ್. ನಾಗರಾಜ್ (ಅರಸೀಕೆರೆ), ಅವರು ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪೂಜಾರ ವೀರಮಲ್ಲಪ್ಪ, ಪೂಜಾರ ಶಶಿಧರ, ಡಾ. ಮಲ್ಕಪ್ಪ ಅಧಿಕಾರ, ಅಜ್ಜಣ್ಣ ಮತ್ತಿಹಳ್ಳಿ, ಆರ್. ಈಶ್ವರಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ರಾಜಕುಮಾರ ಅವರು ಆಯ್ಕೆ ಸಮಿತಿಯಲ್ಲಿ ಉಪಸ್ಥಿತರಿದ್ದರು.
‘ಸಂಘದ ಸಮಗ್ರ ಅಭಿವೃದ್ಧಿ, ಸದಸ್ಯರ ಹಿತಾಸಕ್ತಿ ರಕ್ಷಣೆ ಹಾಗೂ ಸೌಹಾರ್ದ ಚಳವಳಿಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ’.
ಬಿ.ಆರ್. ಪ್ರಭಾಕರ
ನೂತನ ಅಧ್ಯಕ್ಷ, ಪಂಚಮಸಾಲಿ ಸಂಘ. ಹರಪನಹಳ್ಳಿ
Leave a comment