ಹರಪನಹಳ್ಳಿ : ಮುಸ್ಲೀಂ ಧರ್ಮಿಯರ ಮೊದಲ ಶಿಕ್ಷಕಿ ಫಾತೀಮಾ ಶೇಕ್ ಅವರ ಜನ್ಮ ದಿನವನ್ನು ಹರಪನಹಳ್ಳಿ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಆಚರಿಸಲಾಯಿತು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹರಪನಹಳ್ಳಿ ಅವರ ಸಹಯೋಗದಲ್ಲಿ ಆಚರಿಸಿದ ಫಾತೀಮಾ ಶೇಕ್ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರ್ಕಾರಿ ಮುಸ್ಲೀಂ ನೌಕರರ ಕ್ಷೇಮಾಭಿವೃದ್ದಿ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಮಕರಬ್ಬಿ ಶರೀಫ್ ಮಾತನಾಡಿ, ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕಿ, ಸಾವಿತ್ರಿಬಾಯಿ ಫುಲೆ ಅವರೊಂದಿಗೆ 1848ರಲ್ಲಿ ದೇಶದ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು. ಶಿಕ್ಷಣದ ಮೂಲಕ ಜಾತಿ ಮತ್ತು ಲಿಂಗ ತಾರತಮ್ಯ ನಿವಾರಣೆಗೆ ಶ್ರಮಿಸಿದ್ದಾರೆ. ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಶಿಕ್ಷಣ ಒದಗಿಸಿ ಭಾರತದಲ್ಲಿ ಮಹಿಳಾ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟರು. ಅವರ ಕೊಡುಗೆಗಳು ಭಾರತದ ಮಹಿಳಾ ಮತ್ತು ಶಿಕ್ಷಣ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಜಿ. ಮನೋಹರ ಮಾತನಾಡಿ, ಜಾತಿ ಮತ್ತು ಸಾಮಾಜಿಕ ಅಸಮಾನತೆ ವಿರುದ್ದ ಹೋರಾಡಿದರು. ಸಮಾಜದ ಹಿಂದುಳಿದ ವರ್ಗದ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣದ ಒದಗಿಸಲು ಶ್ರಮಿಸಿದರು. ವಿಧವಾ ವಿವಾಹ, ಸತಿ ಸಹಗಮನ ಪದ್ಧತಿ ವಿರೋಧ ಮತ್ತು ಮಹಿಳಾ ಸಬಲೀಕರಣದಂತಹ ವಿಷಯಗಳ ಬಗ್ಗೆ ಧ್ವನಿ ಎತ್ತಿದರು. ದಲಿತ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸಮಾನತೆಯ ಸಂಬಂಧಗಳನ್ನು ಬೆಳೆಸುವ ಮೂಲಕ ಜಾತ್ಯತೀತ ತತ್ವಗಳ ಜಾರಿಗೆ ಶ್ರಮಿಸಿದವರು ಫಾತೀಮಾ ಎಂದು ಸ್ಮರಿಸಿದರು.
ಮುಖ್ಯಶಿಕ್ಷಕ ಎಚ್.ಹುಸೇನ್ ಪೀರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಗುರುಮೂರ್ತಿ, ಸಹ ಕಾರ್ಯದರ್ಶಿ ವೀರಪ್ಪ, ಮಕ್ಬುಲ್ ಭಾಷ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಟಿಎಚ್ಎಂ ಲತಾ, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಅಂಜಿನಪ್ಪ, ಸಹ ಕಾರ್ಯದರ್ಶಿ ಎಂ.ಮರಿಯಪ್ಪ, ಬಡ್ತಿ ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಪಿ.ಸುಬ್ಬಣ್ಣ, ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಎಂ.ಆಂಜನೇಯ, ಶೋಭಾಕುಮಾರಿ, ಜಮಾಲುದ್ದಿನ್, ಹುಸೇನ್ ಭಾಷ, ಎಂ.ಯಾಹ್ಯಾ, ಎನ್.ಇಸ್ಮಾಯಿಲ್ ಸಾಹೇಬ್, ರಿಜ್ವಾನ್ ಸಾಹೇಬ್, ಪೀರ್ ಸಾಹೇಬ್, ಜಿ.ಕರಿಬಸಪ್ಪ, ರಾಹತ್, ಮುಮ್ತಾಜ್ ಬೇಗಂ, ಅಸ್ಮಾ, ಸಾಹೇರಾ, ಸಿರಿನ್, ಟಿ.ಎಚ್.ಎಂ.ಉಮಾ ಹಾಗೂ ಇತರರಿದ್ದರು.
Leave a comment