Home ಸುದ್ದಿಗಳು ಶೃಂಗಾರತೋಟ : ವಸತಿ ಶಾಲೆ ಸಿಬ್ಬಂದಿ ವಸತಿ ಕಟ್ಟಡಕ್ಕೆ ಭೂಮಿಪೂಜೆ
ಸುದ್ದಿಗಳು

ಶೃಂಗಾರತೋಟ : ವಸತಿ ಶಾಲೆ ಸಿಬ್ಬಂದಿ ವಸತಿ ಕಟ್ಟಡಕ್ಕೆ ಭೂಮಿಪೂಜೆ

Share
ಶೃಂಗಾರತೋಟ : ವಸತಿ ಶಾಲೆ ಸಿಬ್ಬಂದಿ ವಸತಿ ಕಟ್ಟಡಕ್ಕೆ ಭೂಮಿಪೂಜೆ
Share

ಹರಪನಹಳ್ಳಿ: ‘ಕ್ಷೇತ್ರದಲ್ಲಿ ಹೆಚ್ಚು ಅಲ್ಪಸಂಖ್ಯಾತ ಸಮುದಾಯವಿದ್ದು, ಸಮಗ್ರ ಅನುದಾನ ಬಳಸಿ ಅಭಿವೃದ್ಧಿಗೆ ಶ್ರಮಿಸುವುದಾಗಿ’ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ ಹೇಳಿದರು.

ತಾಲ್ಲೂಕಿನ ಶೃಂಗಾರತೋಟದ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉನ್ನತಿಕರಿಸಿದ ಸಿಬ್ಬಂದಿ ವಸತಿ ನಿಲಯದ ಕಟ್ಟಡ ಶಂಕುಸ್ಥಾಪನೆ ಸಮಾರಂಭ ನೆರವೇರಿಸಿ ಮಾತನಾಡಿದರು. ₹6.33 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಲ್ಲಿನ ಮುರಾರ್ಜಿ ವಸತಿ ಶಾಲೆ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿದೆ. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ, ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಅಲ್ಪ ಸಂಖ್ಯಾತರ ಇಲಾಖೆಯ ಜಿಲ್ಲಾ  ಅಧಿಕಾರಿ ಜಾವೀದ್ ಕಾರಂಗಿ ಅವರಿಗೆ ಸೂಚನೆ ನೀಡಿದರು. ಹೆಚ್ಚುವರಿ ಅನುದಾನ ಅಗತ್ಯವಿದ್ದರೆ ಬಿಡುಗಡೆ ಮಾಡುವ ಭರವಸೆ ನೀಡಿದರು.

ಮೌಲಾನಾ ಅಜಾದ ವಸತಿ ಶಾಲೆಗೆ 4 ಎಕರೆ ಭೂಮಿ ಮಂಜೂರು ಆಗಿದೆ.  ಅದಷ್ಟು ಬೇಗನೆ  ಕಾರ್ಯ ಆರಂಭವಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದೊಳಗೆ ಸುಸಜ್ಜಿತ ಶಾಲಾ ಕಟ್ಟಡ ಲೋಕಾರ್ಪಣೆಗೆ ಶ್ರಮಿಸಲಾಗುವುದು. ಅಭಿವೃದ್ಧಿಗೆ ತಾವೆಲ್ಲರೂ ಸಹಕಾರ ನೀಡಬೇಕು ಎಂದರು.

ಅಲ್ಪ ಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೀದ್ ಕಾರಂಗಿ  ಮಾತನಾಡಿ, ‘ ಅಲ್ಪಸಂಖ್ಯಾತ ಇಲಾಖೆಯ ಅನುದಾನ ಸದ್ಬಳಿಕೆಯಲ್ಲಿ ಹರಪನಹಳ್ಳಿ ಮುಂಚೂಣಿಯಲ್ಲಿದೆ.

ಮುರಾರ್ಜಿ ವಸತಿ ಶಾಲೆಯಲ್ಲಿ ಎರಡು ಬ್ಲಾಕ್ ಕಟ್ಟಡ ಸಮುಚ್ಚಯ ನಿರ್ಮಿಸಲಾಗುವುದು. 6 ರಿಂದ 12 ನೇ ತರಗತಿ ವರೆಗೆ ಶಿಕ್ಷಣ ದೊರೆಯಲಿದೆ. ಶೇ. 75% ಅಲ್ಪಸಂಖ್ಯಾರಿಗೆ, ಹಾಗೂ ಉಳಿದ 25% ಇತರರಿಗೆ ಸೀಟು ಹಂಚಿಕೆ ಆಗಲಿದೆ. 18ಜನ ಶಿಕ್ಷಕರು ಸೇರಿದಂತೆ 24 ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ಅಂಜುಮನ್ ಮಾಜಿ ಅಧ್ಯಕ್ಷ ಸಿ.ಜಾಹೀದ್, ಮಹಬೂಬ್ ಸಾಹೇಬ್. ಮುಖಂಡರಾದ  ಪದ್ಮರಾಜ ಜೈನ್, ಎಚ್.ಪದ್ಮಾನಾಭ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಜೂ.18 ರಂದು ಪರಿಶಿಷ್ಟ ಜಾತಿ ಜನಾಂಗದವರ ಕುಂದು-ಕೊರತೆ ಆಲಿಕೆ ಸಭೆ

ಬಳ್ಳಾರಿ : ಜಿಲ್ಲೆಯ ಪರಿಶಿಷ್ಟ ಜಾತಿ ಜನಾಂಗದವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ...

ಹರಪನಹಳ್ಳಿ ಪೊಲೀಸ್‌
Homeಸುದ್ದಿಗಳು

ಹರಪನಹಳ್ಳಿಯಲ್ಲಿ ಪೊಲೀಸರ ‘ಕಾಲ್ನಡಿಗೆ ಗಸ್ತು’

ಹರಪನಹಳ್ಳಿ : ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕಲು ನಮ್ಮ ಪೊಲೀಸ್ ಇಲಾಖೆ ಒಂದು ಸೂಪರ್...

dc hosapete
Homeಸುದ್ದಿಗಳು

ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ – ಕವಿತಾ ಎಸ್. ಮನ್ನಿಕೇರಿ ಖಡಕ್ ಎಚ್ಚರಿಕೆ

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಕುಂಠಿತಗೊಂಡಿರುವ 7ನೇ ಸಣ್ಣ ನೀರಾವರಿ ಹಾಗೂ 2ನೇ ಜಲಮೂಲಗಳ ಗಣತಿಯನ್ನು ಸರ್ಕಾರದ...

harapanahallipdo
ಸುದ್ದಿಗಳು

ಪಂಚಾಯತ್ ಇಲಾಖೆ ನೌಕರರ ಸಂಘಕ್ಕೆ ಆಯ್ಕೆ

ಹರಪನಹಳ್ಳಿ :  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಇಲಾಖೆಯ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಹಲವಾಗಲು...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.