ಹರಪನಹಳ್ಳಿ : ವಾಹನ ಚಾಲನಾ ಸಮಯದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದನ್ನಿ ನಿರ್ಲಕ್ಷ್ಯ ಮಾಡಬೇಡಿ ಎಂದು ಇಲ್ ಡಿ.ವೈ.ಎಸ್.ಪಿ ಸಂತೋಷ್ ಚೌವ್ಹಾಣ್ ಹೇಳಿದರು.
ನಗರದ ಹರಪನಹಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ 39ನೇ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ರಸ್ತೆ ಸುರಕ್ಷಿತ ಜಾಗೃತಿ, ಹಾಗೂ ಹೆಲ್ಮೆಟ್ ಧರಿಸುವ ಅರಿವು ಮೂಡಿಸುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹೆಲ್ಮೆಟ್ ಜೀವರಕ್ಷಕ, ಅದನ್ನು ಧರಿಸಲು ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು. ಸಿಪಿಐ ಮಹಾಂತೇಶ್ ಜಿ.ಸಜ್ಜನ್ ಮಾತನಾಡಿ, ಕುಡಿದು ವಾಹನ ಚಲಿಸುವುದು ಅಪರಾಧ. ವಾಹನ ಚಲಾಯಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಸ್ಥಳೀಯ ಠಾಣೆ ಪೋಲಿಸರು ಹೆಲ್ಮೆಟ್ ಧರಿಸಿಕೊಂಡು ಠಾಣೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ , ಹಳೇ ಬಸ್ ನಿಲ್ದಾಣ, ಇಜಾರಿ ಶಿರಸಪ್ಪ ವೃತ್ತ, ಹರಿಹರ ಸರ್ಕಲ್, ಬಸ್ ನಿಲ್ದಾಣ, ನಗರಸಭೆ ಹಾದು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೆಲ್ಮೆಟ್ ಜಾಗೃತಿ ಮೂಡಿಸಿದರು. ಪಿಎಸ್ಐಗಳಾದ ಶಂಭುಲಿಂಗ ಸಿ.ಹೀರೆಮಠ್, ಕಿರಣ್ ಕುಮಾರ್, ವಿಜಯ ಕೃಷ್ಣ, ನಾಗರತ್ನ, ಮೀನಾಕ್ಷಿ ಹಾಗೂ ಸಿಬ್ಬಂದಿ ಇದ್ದರು.
Leave a comment