ಹರಪನಹಳ್ಳಿ : ಅಪಘಾತ, ಬೆಂಕಿ ಅನಾಹುತದಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಮೂಲಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು, ವಾಲ್ಮೀಕಿ ಸಮಾಜದ ಅಧ್ಯಕ್ಷರೂ ಆಗಿರುವ ವೈ.ಡಿ.ಅಣ್ಣಪ್ಪ ಅವರು ಮಾನವೀಯತೆ ಮೆರೆದಿದ್ದಾರೆ.
ಅಪಘಾತದಲ್ಲಿ ಮೃಪಟ್ಟಿದ್ದ ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಮೃತಪಟ್ಟಿದ್ದ ಕುರುಬರ ಉದ್ದಿ ಹುಚ್ಚಪ್ಪ, ಹೃದಯಾಘಾತದಿಂದ ಸಾವನ್ನಪ್ಪಿದ್ದ ಕರೆ ಪತ್ರೆಪ್ಪರ ಕೊಟ್ರೇಶ್, ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಬಣಕಾರ ಬಸವರಾಜ್, ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದ ಬಾರಿಕರ ಜಾತಪ್ಪ ಅವರ ಮನೆಗಳಿಗೆ ವೈ.ಡಿ.ಅಣ್ಣಪ್ಪ ಅವರು ದನಸಹಾಯ ಮಾಡಿದರು. ಈ ವೇಳೆ ನೆರವು ಸ್ವೀಕರಿಸಿದ ಸಂತ್ರಸ್ತ ಕುಟುಂಬಗಳು, ವೈ.ಡಿ. ಅಣ್ಣಪ್ಪ ಅವರ ಸಹಾಯವನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.
Leave a comment