Home ಮತದಾರರ ಋಣ‌‌ ತೀರಿಸುವೆ : ಎಂ.ಪಿ.ಲತಾ ಮಲ್ಲಿಕಾರ್ಜುನ
Homeಸುದ್ದಿಗಳು

ಮತದಾರರ ಋಣ‌‌ ತೀರಿಸುವೆ : ಎಂ.ಪಿ.ಲತಾ ಮಲ್ಲಿಕಾರ್ಜುನ

Share
ಮತದಾರರ ಋಣ‌‌ ತೀರಿಸುವೆ : ಎಂ.ಪಿ.ಲತಾ ಮಲ್ಲಿಕಾರ್ಜುನ
Share

ಹರಪನಹಳ್ಳಿ :   ಶಾಸಕಿಯಾಗಿ ಆಯ್ಕೆ ಮಾಡಿದ ಕ್ಷೇತ್ರದ‌ ಮತದಾರರ ಋಣ ತೀರಿಸಲು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.

ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಭಾನುವಾರ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿದರು.ಚಿಗಟೇರಿ ಹೋಬಳಿ ನಮ್ಮ ಕುಟುಂಬಕ್ಕೆ ತವರು ಮನೆ ಇದ್ದಂತಿದೆ.  ಈ ಭಾಗದ ಜನರ ಜೊತೆ 1975ರಿಂದ ಒಡನಾಟವಿದೆ ಎಂದು ಹೇಳಿದರು. ಹಡಗಲಿಯಿಂದ ನಮ್ಮ‌ತಂದೆ ಎಂ.ಪಿ.ಪ್ರಕಾಶ್ ಸ್ಪರ್ಧಿಸಿದಾಗ, ಚಿಗಟೇರಿ ಹೋಬಳಿ ಮತದಾರರು ಗೆಲ್ಲಿಸಿ ಕಳಿಸುತ್ತಿದ್ದರು. ಅಂದು ಅಪ್ಪಾಜಿ ಅವರ‌‌ ಮೇಲೆ ಜನರು ಇಟ್ಟಿದ್ದ ಪ್ರೀತಿ ವಿಶ್ಚಾಸವೇ ನನ್ನ ಗೆಲುವಿಗೆ ಶ್ರೀರಕ್ಷೆ ಆಗಿದೆ ಎಂದರು.

ನನ್ನ ಸಹೋದರ ಎಂ‌ಪಿ.ರವೀಂದ್ರ ಅಂದಾಜು 3 ಸಾವಿರ ಕೋಟಿ ತಂದು ಕೆಲಸ ಮಾಡಿದ್ದರು.‌ 371ಜೆ ಸೌಲಭ್ಯ ಕಲ್ಪಿಸಿದ ಪ್ರತಿಫಲವಾಗಿ ಇಂದು‌ ಹೆಚ್ಚಿನ ಅನುದಾನ‌ ಸಿಗುತ್ತಿದೆ‌ ಎಂದು ತಿಳಿಸಿದರು.

₹ 80 ಲಕ್ಷ ವೆಚ್ಚದಲ್ಲಿ ಕಂಚಿಕೇರಿ ಗ್ರಾಮದಿಂದ ಚೌಡಾಪುರ‌‌ ಕ್ರಾಸ್ ವರೆಗೆ ರಸ್ತೆ, ₹ 1.50 ಕೋಟಿ ವೆಚ್ಚದಲ್ಲಿ ಮತ್ತೂರು ಮಾರ್ಗದಿಂದ ಜಿಲ್ಲಾ ರಸ್ತೆಗೆ ಸಂಪರ್ಕ‌ ಕಲ್ಪಿಸುವ ರಸ್ತೆ, ₹ 3.50 ಕೋಟಿ ವೆಚ್ಚದಲ್ಲಿ ಮೈದೂರಿನಿಂದ ಗೌರಿಪುರಕ್ಕೆ ರಸ್ತೆ, ₹ 1.20 ಕೋಟಿ ವೆಚ್ಚದಲ್ಲಿ ಮೈದೂರಿನಿಂದ ತಾಲ್ಲೂಕು ಗಡಿವರೆಗಿನ ರಸ್ತೆ‌  ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದರು. ಎಇಇ ಕುಬೇಂದ್ರನಾಯ್ಕ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.