ಹರಪನಹಳ್ಳಿ : ಗ್ರಾಮೀಣ ಪ್ರದೇಶದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜೊತೆಗೆ ಸುಸಂಸ್ಕೃತರನ್ನಾಗಿ ಮಾಡಿ ಎಂದು ದಾವಣಗೆರೆ ನಗರಸಭೆ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್ ಸಲಹೆ ನೀಡಿದರು.ತಾಲ್ಲೂಕಿನ ಕಂಚಿಕೇರಿ ಗ್ರಾಮದಲ್ಲಿ ಸಮತಾ ವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಸಮತಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು. ಇದಕ್ಕೆ ದಾಸರಾದರೆ ತಮ್ಮ ಭವಿಷ್ಯವೇ ಹಾಳಾಗುತ್ತದೆ. ಅಂಕಗಳಿಕೆ ಮಾತ್ರ ಮಾನದಂಡ ಮಾಡಿಕೊಳ್ಳದೇ, ಆದರ್ಶ ಪ್ರಜೆಗಳಾಗಿ ಎಂದು ಹೇಳಿದರು.ಸಾನ್ನಿದ್ಯವಹಿಸಿದ್ದ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮಕ್ಕಳು ಉತ್ತಮ ಅಂಕಗಳಿಕೆ ಜೊತೆಗೆ, ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ಉತ್ತಮ ಪ್ರಜೆಗಳಾದರೆ, ಅದಕ್ಕಿಂತ ಹಿರಿಮೆ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟರು.ಧಾರವಾಡ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲ ಸಚಿವ ಜಿ.ಬಿ.ಪಾಟೀಲ್ ಅವರು, ಎಂ.ಜಿ.ತಿಪ್ಪೆಸ್ವಾಮಿ ನಾಗರತ್ನಮ್ಮ ರಂಗಮಂದಿರ ಹಾಗೂ ಶಾಲಾ ಕೊಠಡಿಗಳನ್ನು ಜಿ.ಸದಾಶಿವಪ್ಪ ಉದ್ಘಾಟಿಸಿದರು.
ಡಾ.ದಾನಮ್ಮನವರ ಕೊಟ್ರಪ್ಪ, ಸಮತಾ ವಿದ್ಯಾಲಯದ ಅಧ್ಯಕ್ಷ ಎಂ.ಟಿ.ಸುಭಾಷ ಚಂದ್ರ ಮಾತನಾಡಿದರು. ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಎಲ್.ಎಚ್.ಅರುಣ್ ಕುಮಾರ, ಎಂ.ಎಸ್.ನಾಗರಾಜಪ್ಪ, ಆರ್.ಎಂ.ಬಿ.ಬಾವರಾಜ, ಉತ್ತಮಚಂದ್ ಜೈನ್, ಆರ್.ಸಿ.ಪಾಟೀಲ್, ಯೋಗೇಶ್ವರಪ್ಪ, ಕುಮಾರ ಆನೆಕೊಂಡ, ಎನ್.ಎಸ್.ರಾಜು, ಸಂಸ್ಥೆಯ ನಿರ್ದೇಶಕಿ ವಸಂತ ಸುಭಾಷಚಂದ್ರ, ಮುಖ್ಯ ಶಿಕ್ಷಕಿ ಸಿಂಡ್ರೇಲ್ ಲೋಪಿಸ್ ಇದ್ದರು.ಇದೇ ವೇಳೆ ಭಾರತಿ ವಾಧ್ಯ ವೃಂದದವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
Leave a comment