ಹರಪನಹಳ್ಳಿ : ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಎತ್ತು ಇರಿದು ಗಾಯಗೊಂಡ ರೈತನೊಬ್ಬ ಆಸ್ವತ್ರೆಯಲ್ಲಿ ಸಾವನ್ನಪಿದ ಘಟನೆ ಗುರುವಾರ ಜರುಗಿದೆ.ತಾಲ್ಲೂಕಿನ ಆಲದಹಳ್ಳಿ ಗ್ರಾಮದ ಬಿ.ಪಂಚಪ್ಪ (65) ಮೃತಪಟ್ಟ ವ್ಯಕ್ತಿ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಪಕ್ಕೆಗೆ ಎತ್ತು ಕೊಂಬಿನಿಂದ ಇರಿದು ಗಾಯಗೊಳಿಸಿತ್ತು.

ಮತ್ತಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಗರ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ದಾಖಲಿಸಿದಾಗ ಉಸಿರು ನಿಲ್ಲಿಸಿದ್ದಾರೆ ಎಂದು ಮೃತ ರೈತನ ಪುತ್ರ ಬಿ.ಕೊಟ್ರೇಶ್ ಅವರು ಪೊಲೀಸರಿಗೆ ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ. ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment