Home ಸುದ್ದಿಗಳು ಕಲೆ ಸ್ಮಾರಕಗಳಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಪ್ರತಿಧ್ವನಿ
ಕಲೆಸುದ್ದಿಗಳು

ಸ್ಮಾರಕಗಳಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಪ್ರತಿಧ್ವನಿ

Share
Share

ವಿಜಯನಗರ (ಹಂಪಿ) : ಹಂಪಿಯ ಆನೆ ಲಾಯ ಅಥವಾ ಕಮಲ್ ಮಹಲ್‌ನಂತಹ ಬೃಹತ್ ಸ್ಮಾರಕಗಳ ಮೇಲೆ ಬೀಳುವ ಬೆಳಕಿನ ಆಟ ಮತ್ತು ಹಿನ್ನೆಲೆಯಲ್ಲಿ ಕೇಳಿಬರುವ ಗಂಭೀರ ಧ್ವನಿ ಕೇಳುಗರ ನೋಡುಗರ ಮೈ ಪುಳಕಿಸುವಂತಿತ್ತು.
ಹAಪಿ ಉತ್ಸವದಲ್ಲಿ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಕೇಂದ್ರ ಸಂವಹನ ಇಲಾಖೆ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಕ್ಕಬುಕ್ಕ ವೇದಿಕೆಯಲ್ಲಿ ‘ಧ್ವನಿ ಮತ್ತು ಬೆಳಕು’ ಆಯೋಜಿಸಲಾಗಿತ್ತು.
ಹಂಪಿಯ ಅವಶೇಷ, ಆನೆ ಸಾಲು ಸಮುಚ್ಚಯ ಸೇರಿದಂತೆ 10 ಕ್ಕೂ ಅಧಿಕ ರಂಗ ವೇದಿಕೆಗಳಲ್ಲಿ ಅನಾವರಣಗೊಂಡಿತು. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಕರ್ಷಕ ನೃತ್ಯ, ರೋಮಾಂಚನಕಾರಿ ಯುದ್ಧ ಸನ್ನಿವೇಶಗಳು ಇಂಪಾದ ಸಂಗೀತ, ಬಗೆ ಬಗೆಯ ಬಣ್ಣದ ಉಡುಗೆ ತೊಡುಗೆ, ಇಂಪಾದ ಸಾಹಿತ್ಯ ಕಣ್ಣು ಕೋರೈಸುವ ಬೆಳಕು ಹೀಗೆ ಅನೇಕ ವಿಶೇಷತೆಗಳಿಂದ ಮೂಡಿದ ಈ ಕಾರ್ಯಕ್ರಮ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿತು.

   

ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ 110 ಜನ ಸ್ಥಳೀಯ ಕಲಾವಿದರು ಹಾಗೂ ಬೆಂಗಳೂರು, ದೆಹಲಿ, ಪುಣೆ ಸೇರಿದಂತೆ ಹಲವು ತಂಡಗಳಿAದ ವಿಜಯನಗರ ಗತವೈಭವ ಮರು ಸೃಷ್ಟಿಸಿದರು. ಭಾರತೀಯ ಶಾಸ್ತ್ರೀಯ ಭರತ ನಾಟ್ಯ ಪ್ರಮುಖ ಆಕರ್ಷಣೀಯವಾಗಿತ್ತು. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇದುಕೇವಲ ಒಂದು ಮನೋರಂಜನಾ ಪ್ರದರ್ಶನವಲ್ಲ, ಶತಮಾನಗಳ ಹಿಂದೆ ವೈಭವದಿಂದ ಆಡಳಿತ ನಡೆಸಿದ ವಿಜಯನಗರ ಸಾಮ್ರಾಜ್ಯದ ಅರಸರ ಶೌರ್ಯ ಪರಾಕ್ರಮ, ವಿಜಯನಗರ ಸಾಮ್ರಾಜ್ಯದ ಏಳು-ಬೀಳುಗಳನ್ನು ಜನಸಾಮಾನ್ಯರಿಗೆ ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸುವುದು ಕಾರ್ಯಕ್ರಮದ ಉದ್ದೇಶ.
ಈ ಧ್ವನಿ ಮತ್ತು ಬೆಳಕಿನ ಕಾರ್ಯಕ್ರದಲ್ಲಿ ನಿರ್ಜೀವವಾಗಿ ನಿಂತಿರುವ ಕಲ್ಲಿನ ಸ್ಮಾರಕಗಳಿಗೆ ಅತ್ಯಾಧುನಿಕ ಬೆಳಕಿನ ವಿನ್ಯಾಸ ಮತ್ತು ಧ್ವನಿ ಮುದ್ರಿಕೆಗಳನ್ನು ಅಳವಡಿಸುವ ಮೂಲಕ ಜೀವಂತಿಕೆಯನ್ನು ಸ್ಮಾರಕಗಳಿಗೆ ಜೀವ ತುಂಬಿದ್ದು ನೋಡುಗರ ಮೈ ನವಿರೇಳಿಸುವಂತಿತ್ತು. ಇದರಿಂದ ಯುವ ಪೀಳಿಗೆಗೆ ನಮ್ಮ ನಾಡಿನ ವೀರ ಪರಂಪರೆ, ಕಲೆ, ಮತ್ತು ವಾಸ್ತುಶಿಲ್ಪದ ಬಗೆಗಿನ ಗೌರವ ಹಿರಿಮೆ ಹೆಚ್ಚಿಸುವುದರ ಜತೆಗೆ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಸ್ಮಾರಕಗಳ ಪ್ರಾಮುಖ್ಯತೆಯನ್ನು ಸಾರುತ್ತದೆ. ಜನರು ಈ ಐತಿಹಾಸಿಕ ತಾಣಗಳನ್ನು ಗೌರವಿಸಲು ಮತ್ತು ಸಂರಕ್ಷಿಸಲು ಪ್ರೇರಿತರಾಗಳು ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಸಾಕ್ಷಿಯಾಯಿತು .
ವಿಜಯನಗರ ಸಾಮ್ರಾಜ್ಯದ ಆಡಳಿತ ಗತ ವೈಭವವನ್ನು ಪುಸ್ತಕಗಳಲ್ಲಿ ಓದಿ ತಿಳಿದುಕೊಳ್ಳುವ ಇತಿಹಾಸಕ್ಕಿಂತ, ಕಣ್ಣೆದುರು ದೃಶ್ಯ ರೂಪದಲ್ಲಿ ಕಾಣುವ ಇತಿಹಾಸ ವಿದ್ಯಾರ್ಥಿಗಳ, ಸಾರ್ವಜನಿಕರು ವಿಜಯನಗರ ಸಾಮ್ರಾಜ್ಯದ ವೈಭವ, ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ. ಹಂಪಿಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಿ, ದೇಶ-ವಿದೇಶದ ಪ್ರವಾಸಿಗರನ್ನು ರಾತ್ರಿಯ ಸಮಯದಲ್ಲೂ ಹಂಪಿಯ ಸೌಂದರ್ಯ ಸವಿಯುವಂತೆ ಮಾಡಿದ್ದು , ವರ್ಣನೆಗೆ ನಿಲುಕದಾಗಿದೆ. ಈ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಫೆಬ್ರವರಿ 19ವರೆಗೆ ಹಂಪಿಯ ಗಜಶಾಲೆ ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ.
ಮೈಸೂರಿನ ನೃತ್ಯ ಸಂಯೋಜಕಿ ಡಾ.ಶೀಲಾ ಶ್ರೀಧರ, ನವದೆಹಲಿ ಸಿ.ಬಿ.ಸಿ. ಉಪನಿರ್ದೇಶಕಿ, ಡಾ. ಸಂತೋಷ ಆಶಿಶ್, ಕೊಪ್ಪಳದ ಡಯಟ್ನ ಹಿರಿಯ ಉಪನ್ಯಾಸಕ ಎಲ್. ಡಿ.ಜೋಷಿ, ಬೆಂಗಳೂರಿನ ಸಿಬಿಸಿಯ ನಿರ್ದೇಶಕ ಜಿ.ಜಯಕುಮಾರ, ಸಹಾಯಕ ವಿ.ಗಂಗಾಧರ ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಉಪ್ಪಾರ ನೌಕರರಿಂದ ಪ್ರತಿಭಾ ಪುರಸ್ಕಾರ

ಹರಪನಹಳ್ಳಿ: ಹಬ್ಬ ಹರಿದಿನಗಳ ಆಚರಣೆಯಲ್ಲಿ ಮೇಲ್ವರ್ಗದ ಸಮುದಾಯಗಳಿಗಿಂತ ಶೋಷಿತ ವರ್ಗದವರೇ ಹೆಚ್ಚು ದುಂದುವೆಚ್ಚ ಮಾಡುತ್ತಿರುವುದು ಕಳವಳಕಾರಿ...

Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.