Home ಕೂಲಹಳ್ಳಿ ಗೋಣಿಬಸವೇಶ್ವರ ಜಾತ್ರೆ ಶುಭಾರಂಭ
Homeಸುದ್ದಿಗಳು

ಕೂಲಹಳ್ಳಿ ಗೋಣಿಬಸವೇಶ್ವರ ಜಾತ್ರೆ ಶುಭಾರಂಭ

Share
Share

ಹರಪನಹಳ್ಳಿ: ಪಂಚಗಣಾಧೀಶ್ವರ ಸುಕ್ಷೇತ್ರ‌ ತಾಲ್ಲೂಕಿನ ಕೂಲಹಳ್ಳಿಯಲ್ಲಿ ಗುರುವಾರದಿಂದ ಬಸವ ಉತ್ಸವದೊಂದಿಗೆ ಜಾತ್ರೆ ಆರಂಭಗೊಂಡಿದೆ.

ಪಂಚಗಣಾಧೀಶ್ವರರ ಪೈಕಿ ಒಬ್ಬರಾಗಿರುವ ಮದ್ದಾನೇಶ್ವರರ ಪುತ್ರ ಗೋಣಿ ಬಸವೇಶ್ವರ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕೂಲಹಳ್ಳಿಯಲ್ಲಿ ನೆಲೆಸಿ, ನಾಡಿನ ಉದ್ದಗಲಕ್ಕೂ ಭಕ್ತರ ಜನಮಾನಸದಲ್ಲಿ ದೈವತ್ವಕ್ಕೇರಿದ ಪವಾಡ ಪುರುಷರಾಗಿದ್ದಾರೆ.

ಅವರ ಹೆಸರಿನ ಜಾತ್ರೆಯು ಕೂಲಹಳ್ಳಿಯಲ್ಲಿ ಫೆ. 26 ರಿಂದ ಫೆ.28ರ ವರೆಗೆ ಜರುಗಲಿದ್ದು, ಎಲ್ಲ ಸಮುದಾಯಗಳ ಜನರು, ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮದಾಯ ದತ್ತಿ ಇಲಾಖೆ ಜೊತೆ ಕೈಜೋಡಿಸಿ ಜಾತ್ರೆಯನ್ನು ಯಶಸ್ವಿಗೊಳಿಸುತ್ತಾರೆ.

ದೇವಸ್ಥಾನಕ್ಕೆ ಸುಣ್ಣ ಬಣ್ಣ, ರಥದ ಸಿದ್ಧತೆ, ಹಗ್ಗ ತಯಾರಿಸುವುದು, ಮಡಿಕೆ ಸಿದ್ಧತೆ, ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿಸಲು ಆಯಾ ಗ್ರಾಮಗಳಿಂದ ಬಂದ ಭಕ್ತರ ತಂಡ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.

ಫೆ.26ರ ಗುರುವಾರ ಬೆಳಿಗ್ಗೆ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಫೆ. 27ರ ಶುಕ್ರವಾರ ಸಂಜೆ 4.30ಕ್ಕೆ ರಥೋತ್ಸವ ಹಾಗೂ ಶನಿವಾರ ಬೆಳಿಗ್ಗೆ ಓಕುಳಿ ಉತ್ಸವ ಜರುಗಲಿವೆ. ಜಾತ್ರೆಗೆ ಬರುವ ವ್ಯಾಪಾರಸ್ಥರಿಗೆ ರಥಬೀದಿಯಲ್ಲಿ ಅಂಗಡಿಗಳ ಸ್ಥಾಪನೆಗೆ ಅವಕಾಶ, ಬಾಗಳಿ, ಬಂಡ್ರಿಕ್ರಾಸ್ ಮೂಲಕ ಬರುವ ವಾಹನಗಳಿಗೆ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ, ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮ ಪಂಚಾಯ್ತಿ ನೇತೃತ್ವವಹಿಸಿದೆ.

ರಥವೇರುವುದು ಗುರುಬಸವೇಶ್ವರ ಮೂರ್ತಿ

ವಿಜಯನಗರ ಜಿಲ್ಲೆ ಕೊಟ್ಟೂರಿನ ಗುರುಬಸವೇಶ್ವರ, ಹರಪನಹಳ್ಳಿ ಕೆಂಪೇಶ್ವರ, ಅರಸೀಕೆರೆ ಕೋಲಶಾಂತೇಶ್ವರ, ಕೂಲಹಳ್ಳಿಯ ಮದ್ದಾನೇಶ್ವರ, ಹಾಗೂ ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ತಿಪ್ಪೆರುದ್ರೇಶ್ವರ ಈ ಐದು ಜನರು ಪಂಚಗಾಧೀಶ್ವರರು.

ಗೋಣಿಬಸವೇಶ್ವರ ಹೆಸರಿನಲ್ಲಿ ಜಾತ್ರೆ ಆಚರಿಸುತ್ತಾರೆ, ಆದರೆ ರಥದಲ್ಲಿ ಕೊಟ್ಟೂರಿನ ಗುರುಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಯಾವುದೇ ಕಷ್ಟದ ಸಂದರ್ಭದಲ್ಲೂ ನನ್ನನ್ನು ಸ್ಮರಿಸುವಂತೆ ಮದ್ದಾನೇಶ್ವರರಿಗೆ ಅವರ ಹಿರಿಯ ಸಹೋದರ ಗುರುಬಸವೇಶ್ವರ ಮಾತು ಕೊಟ್ಟಿದ್ದರಂತೆ. ಅದರ ನೆನಪಿಗಾಗಿ ಪ್ರತಿ ವರ್ಷ ಗುರುಬಸವೇಶ್ವರನೇ ರಥವೇರುವುದು ವಾಡಿಕೆಯಾಗಿದೆ.
ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆ ನೀಡಲು ಬಯಸುವ ಭಕ್ತರು, ದೇವಸ್ಥಾನದ ಕಚೇರಿಯ ಸಿಬ್ಬಂದಿ ಸಂಪರ್ಕಿಸಿ, ದೇಣಿಗೆ ಕೊಟ್ಟು ರಸೀದಿ ಪಡೆಯಿರಿ ಅಥವಾ ದೇವಸ್ಥಾನದ ಕೆನೆರಾ ಬ್ಯಾಂಕ್‌ ಖಾತೆ ಸಂಖ್ಯೆ 4242101002906ಕ್ಕೆ ಸಂದಾಯ ಮಾಡಬಹುದು ಎಂದು ಆಡಳಿತಾಧಿಕಾರಿ ಪುಷ್ಪಾವತಿ ಭರಡಿ ಮನವಿ ಮಾಡಿದ್ದಾರೆ.

ಗೋಣಿ ಬಸವೇಶ್ವರರ ಪವಾಡಗಳಿವು

ಚಿಕ್ಕವನಿದ್ದಾಗ ಚಿಕ್ಕಹಳ್ಳಿಯ ಹೊಲದಲ್ಲಿ ಜೋಡಿ ಹುಲಿ ಮತ್ತು ಹಾವು ಕಟ್ಟಿ ಬೇಸಾಯ ಮಾಡಿದ್ದು, ಬಂಜೆ ಆಕಳು ಜನ್ಮ ನೀಡಿದ್ದು, ಹುಲಿಯ ಮೇಲೆ ಸವಾರಿ ಮಾಡಿದ್ದು, ಅಳಿಲು ಚರ್ಮದಿಂದ ತೆಪ್ಪ ಮಾಡಿ ತುಂಗಭದ್ರಾ ನದಿ ದಾಟಿದ್ದು, ಜಮೀನ್ದಾರರ ಕುತಂತ್ರದಿಂದ ಪಾರಾಗಿ ಪ್ರತ್ಯಕ್ಷನಾದದ್ದು, ಹೀಗೆ ಬಗೆಬಗೆಯ ಪವಾಡಗಳನ್ನು ಮಾಡುತ್ತಾ, ರಾಜ್ಯದ ವಿವಿಧೆಡೆ ಸಂಚರಿಸಿ 777 ಕಡೆಗೆ ಮಠ ಸ್ಥಾಪಿಸಿದ್ದಾರೆ. ಹೊರ ರಾಜ್ಯದಲ್ಲೂ ಅವರ ಸಂಚಾರದ ಕುರುಹು ಕಂಡುಬಂದಿವೆ. ಜಾನಪದ, ಲಾವಣಿ, ಭಜನೆ, ಪೌರಾಣಿಕ ಕಥೆಗಳಲ್ಲಿ ಸ್ವಾಮಿಯ ಚರಿತ್ರೆ ದಾಖಲಾಗಿವೆ ಎನ್ನುತ್ತಾರೆ ಸಂಸ್ಥಾನದ ಪಟ್ಟದ ಚಿನ್ಮಯಿ ಸ್ವಾಮೀಜಿ.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Homeಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ತಾಲೂಕಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ...

Homeಸುದ್ದಿಗಳು

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ...

Homeಸುದ್ದಿಗಳು

ಲಾಕಪ್ ಡೆತ್ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

ಹರಪನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಯುವಕನ ಲಾಕಪ್ ಡೆತ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಸಿಪಿಐ(ಎಂಎಲ್) ಹಾಗೂ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಗಳ ಮುಖಂಡರು ಆಗ್ರಹಿಸಿದ್ದಾರೆ. ಚಿತ್ತಾರಗೇರಿಯಲ್ಲಿರುವ  ಮೃತ ಖಲೀಲ್‌ ಅವರ ಮನೆಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.