Home ಹರಪನಹಳ್ಳಿ : ಶಾಲಾ‌ ಸಮಯದಲ್ಲಿ ತಿರುಗುವ ಸರ್ಕಾರಿ ಶಾಲೆ ಶಿಕ್ಷಕರು
Homeಶಿಕ್ಷಣ

ಹರಪನಹಳ್ಳಿ : ಶಾಲಾ‌ ಸಮಯದಲ್ಲಿ ತಿರುಗುವ ಸರ್ಕಾರಿ ಶಾಲೆ ಶಿಕ್ಷಕರು

Share
Share

ಹರಪನಹಳ್ಳಿ : ತಾಲ್ಲೂಕಿನ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಹಲವು ಬಾರಿ ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಶಾಲಾವಧಿಯಲ್ಲಿ ತಿರುಗಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ.

ಶಾಸಕರ‌‌ ಆದೇಶವನ್ನೆ ಉಲ್ಲಂಘಿಸುವ ಕೆಲವು ಶಿಕ್ಷಕರು ಶಿಕ್ಷಕರ ಸಮಾವೇಶ, ತಮ್ಮ ವ್ಯಾಪ್ತಿಗೆ ಬಾರದ ಆದಾಯ ಮತ್ತು ವರಮಾನ ಮಾಹಿತಿ ಅರ್ಜಿ ಭರ್ತಿಗಾಗಿ ಶಾಲಾ ಸಮಯದಲ್ಲಿಯೇ ತಿರುಗಾಡುತ್ತಿರುವ ಪೊಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಿಧ ಶಾಲೆಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಪಿಎಸ್ ಸಹಿತ ಪೊಟೊಗಳು ಸಿರಿಸುದ್ದಿ ವೆಬ್ ಪುಟಕ್ಕೆ ಲಭ್ಯವಾಗಿವೆ. ಈ ಬಗ್ಗೆ ದೂರುಗಳು ಬಂದಿದ್ದರೂ ಸಹ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ.

ಕಚೇರಿ ವಿಷಯ ನಿರ್ವಾಹಕರೆ ಆದಾಯ ತೆರಿಗೆ ಮಾಹಿತಿ ಭರ್ತಿಗೆ : ಒತ್ತಾಯ
ಸರ್ಕಾರಿ‌ ನೌಕರರ ಅದಾಯ ಮತ್ತು ವರಮಾನ ಮಾಹಿತಿ ಪ್ರತಿಯನ್ನು ಕಚೇರಿಯ ವಿಷಯ ನಿರ್ವಾಹಕರಿಂದಲೇ ನಮೂನೆ 16 ಪ್ರತಿ ಭರ್ತಿ ಮಾಡಿಸಬೇಕು ಎಂದು ಸಮಾನ ಮನಸ್ಕ ಕ್ರಿಯಾಶೀಲ ಶಿಕ್ಷಕರ ಒಕ್ಕೂಟ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದೆ‌.

ಪ್ರಾಥಮಿಕ ಶಾಲಾ ಶಿಕ್ಷಕರುಗಳು 2025-26ನೇ ಸಾಲಿನ ಆದಾಯ ತೆರಿಗೆ ಘೋಷಣೆ ಬಾಬು ಈಗ ಫಾರಂ 16 ಸಲ್ಲಿಸುವುದು ಅವಶ್ಯಕತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧಿಕಾರವಧಿ ಮುಗಿದಿರುವ ಕೆಲ ಪದಾಧಿಕಾರಿಗಳು ನಮೂನೆ 16 ಅರ್ಜಿ ಭರ್ತಿ ಮಾಡಿಸುವುದಾಗಿ ಹೇಳುತ್ತಾ, ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದರಿಂದ ಶಿಕ್ಷಕ ಗೌಪ್ಯ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಾರ್ವಜನಿಕ‌ ಮುಜುಗರಕ್ಕೆ ಒಳಗಾಗಬಹುದು. ಶಿಕ್ಷಕರ ಗುಪ್ತ ಮಾಹಿತಿಯು ಬಹಿರಂಗವಾದರೆ, ಅವರ ಆರ್ಥಿಕ ಶಿಸ್ತಿನ ಮಾನಹಾನಿ ಆಗುತ್ತದೆ. ಮಾಹಿತಿ ಪಡೆಯುವ ಕೆಲವು ಶಿಕ್ಷಕರು ಮಾಹಿತಿ ಪಡೆದು ದುರ್ಬಳಕೆ‌ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೂಡಲೇ ಇದಕ್ಕೆ‌ ಕಡಿವಾಣ ಹಾಕಿ, ಕಚೇರಿಯ ವಿಷಯ ನಿರ್ವಾಹಕ ಸಿಬ್ಬಂದಿಯಿಂದ ನಮೂನೆ 16 ಅರ್ಜಿ ಭರ್ತಿ ಮಾಡಿಸಬೇಕು ಎಂದು ಸಮಾನ ಮನಸ್ಕ ಕ್ರಿಯಾಶೀಲ ಶಿಕ್ಷಕರ ಒಕ್ಕೂಟದ ಪದಾಧಿಕಾರಿಗಳು ಸಲ್ಲಿಸಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಐಟಿ ರಿಟರ್ನ್ ಬಗ್ಗೆ ಹೈಕೋರ್ಟ್ ಏನು ಹೇಳುತ್ತದೆ ?

​​ತನ್ನ ಪತಿಯ ವೇತನದ ಪೇ-ಸ್ಲಿಪ್ ಕೋರಿ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದ ಪತ್ನಿಯ ಮನವಿಯನ್ನು ರಾಜಸ್ಥಾನ ಹೈಕೋರ್ಟ್ (ಜೋಧ್‌ಪುರ) ವಜಾಗೊಳಿಸಿದೆ. ಕಾಂತಾ ಕುಮಾವತ್ ಎಂಬುವವರು ತನ್ನ ಪತಿ ಓಂಪ್ರಕಾಶ್ 2024ರ ಜನವರಿಯಿಂದ ಮಾರ್ಚ್ ಅವಧಿಯ ವೇತನದ ವಿವರಗಳನ್ನು ಕೇಳಿ ರಿಟ್ ಅರ್ಜಿ (No. 7374/2025) ಸಲ್ಲಿಸಿದ್ದರು. ಆದರೆ ನ್ಯಾಯಮೂರ್ತಿ ಕುಲದೀಪ್ ಮಾಥುರ್ ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

​ಉದ್ಯೋಗಿಯ ವೇತನ ಮತ್ತು ಸೇವಾ ವಿವರಗಳು ಉದ್ಯೋಗಿ ಮತ್ತು ಉದ್ಯೋಗದಾತರ ನಡುವಿನ ವೈಯಕ್ತಿಕ ವಿಷಯ. ಇದನ್ನು ಆರ್‌ಟಿಐ ಅಡಿ ‘ಮೂರನೇ ವ್ಯಕ್ತಿಯ ಮಾಹಿತಿ’ ಎಂದು ಪರಿಗಣಿಸಲಾಗುತ್ತದೆ. ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪನ್ನು ಆಧರಿಸಿ, ಸಾರ್ವಜನಿಕ ಹಿತಾಸಕ್ತಿ ಇಲ್ಲದ ಹೊರತು ಇಂತಹ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಹೆಂಡತಿಗೂ ಸಹ ನೀಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಉದ್ಯೋಗಿಯ ಕಾರ್ಯಕ್ಷಮತೆ ಮತ್ತು ವೇತನದ ವಿವರಗಳು ಗೌಪ್ಯವಾಗಿದ್ದು, ಇವುಗಳನ್ನು ಬಹಿರಂಗಪಡಿಸುವುದು ಖಾಸಗಿತನದ ಉಲ್ಲಂಘನೆಯಾಗುತ್ತದೆ. ​ಈಗ ಭಾರತದಾದ್ಯಂತ ಸರಕಾರಿ ಇಲ್ಲವೇ ಖಾಸಗಿ ಉದ್ಯೋಗಿಗಳ ಸಂಬಳ, ಪ್ರಮೋಷನ್ ಮತ್ತು ಪೇ-ಸ್ಲಿಪ್ ವಿವರಗಳಿಗೆ ಬಲವಾದ ಕಾನೂನು ರಕ್ಷಣೆ ಸಿಕ್ಕಂತಾಗಿದೆ. ಕೇವಲ ನೆಂಟರು ಎಂಬ ಕಾರಣಕ್ಕೆ ಈ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ.‌ ಐಟಿ ರಿಟರ್ನ್ ವೈಯಕ್ತಿಕ‌ ಮಾಹಿತಿ ಆಗಿರುವ ಕಾರಣ ಪತ್ನಿಗೂ ಬಹಿರಂಗ‌ ಪಡಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಪಾದಿಸಿರುವ ಕರ್ನಾಟಕ ಹೈಕೋರ್ಟ್ ಮಾಹಿತಿ ಆಯೋಗದ ಆದೇಶವನ್ನು ರದ್ದುಗೊಳಿಸಿದೆ ಎಂದು ಕಾನೂನು ತಜ್ಞರ ತಿಳಿಸಿದ್ದಾರೆ.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ: ತಹಸೀಲ್ದಾರರಿಗೆ ಬಿಜೆಪಿ ವತಿಯಿಂದ ಮನವಿ ಸಲ್ಲಿಕೆ

 ಹರಪನಹಳ್ಳಿ : ಇಂದು ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ...

Homeಸುದ್ದಿಗಳು

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ತಾಲೂಕಿನ ವಿವಿಧ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ...

Homeಸುದ್ದಿಗಳು

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ...

Homeಸುದ್ದಿಗಳು

ಲಾಕಪ್ ಡೆತ್ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ

ಹರಪನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಯುವಕನ ಲಾಕಪ್ ಡೆತ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು  ಸಿಪಿಐ(ಎಂಎಲ್) ಹಾಗೂ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಗಳ ಮುಖಂಡರು ಆಗ್ರಹಿಸಿದ್ದಾರೆ. ಚಿತ್ತಾರಗೇರಿಯಲ್ಲಿರುವ  ಮೃತ ಖಲೀಲ್‌ ಅವರ ಮನೆಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.