ಹರಪನಹಳ್ಳಿ : ನಗರದ ಹೊಸಪೇಟೆ ರಸ್ತೆ ಬಾಬು ಜಗಜೀವನ್ ರಾಮ್ ಭವನದಲ್ಲಿ ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ ಅವರ 69ನೇ ಪರಿನಿರ್ವಾಣ ದಿನ ಆಚರಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹುಲಿಕಟ್ಟೆ ಚಂದ್ರಪ್ಪ ಮಾತನಾಡಿ, ಶೋಷಣೆ ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ ಅವರು ಶೋಷಿತ ಸಮುದಾಯಗಳಿಗೆ, ಮಹಿಳೆಯರಿಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಸರ್ವರಿಗೂ ಸಮಬಾಳು, ಸಮಪಾಲು ಕಲ್ಪಿಸಿದ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ ಎಂದರು.
ಅಂಬೇಡ್ಕರ ಸಂಘದ ತಾಲ್ಲೂಕು ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಪ್ರಧಾನ ಕಾರ್ಯದರ್ಶಿ ಒ ಮಹಾಂತೇಶ, ಬಾಗಳಿ ಚನ್ನಬಸಪ್ಪ, ಸುಭಾಷ್ ಚಂದ್ರ, ಕೆಂಚಪ್ಪ ಇದ್ದರು.
Leave a comment