ದಾವಣಗೆರೆ : ಮನೆ ಮನೆ ಭೇಟಿ ಸಂದರ್ಭದಲ್ಲಿ ಜುಲೈ 16 ರ ವರೆಗೆ ಜಿಲ್ಲೆಯಾದ್ಯಂತ ಒಟ್ಟು 29,291 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 442 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 11,610 ಶಾಶ್ವತ ವಲಸೆ, 11,832 ಮರಣ ಪ್ರಕರಣ, 5284 ದ್ವಿಪ್ರತಿ ನಮೂನೆಗಳು ಹಾಗೂ 123 ಇತರೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಕ್ಷೇತ್ರವಾರು ವಿವರ :
ಜಗಳೂರು ಕ್ಷೇತ್ರದಲ್ಲಿ ಒಟ್ಟು 3211 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 96 ಸಂಗ್ರಹವಾಗದ, 1491 ಶಾಶ್ವತ ವಲಸೆ, 934 ಮರಣ, 670 ದ್ವಿಪ್ರತಿ ಹಾಗೂ 20 ಇತರೆ ಪ್ರಕರಣಗಳಿವೆ.
ಹರಿಹರ ಕ್ಷೇತ್ರದಲ್ಲಿ ಒಟ್ಟು 4274 ಪ್ರಕರಣಗಳು ಪತ್ತೆಯಾಗಿದ್ದು, 37 ಸಂಗ್ರಹವಾಗದ, 1241 ಶಾಶ್ವತ ವಲಸೆ, 1952 ಮರಣ, 1030 ದ್ವಿಪ್ರತಿ ಮತ್ತು 14 ಇತರೆ ಪ್ರಕರಣಗಳಿವೆ.
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಒಟ್ಟು 3277 ಪ್ರಕರಣಗಳಿದ್ದು, 29 ಸಂಗ್ರಹವಾಗದ, 1045 ಶಾಶ್ವತ ವಲಸೆ, 1676 ಮರಣ, 508 ದ್ವಿಪ್ರತಿ ಹಾಗೂ 19 ಇತರೆ ಪ್ರಕರಣಗಳಿವೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2824 ಪ್ರಕರಣಗಳಿದ್ದು, 78 ಸಂಗ್ರಹವಾಗದ, 731 ಶಾಶ್ವತ ವಲಸೆ, 1100 ಮರಣ, 896 ದ್ವಿಪ್ರತಿ ಹಾಗೂ 19 ಇತರೆ ಪ್ರಕರಣಗಳಿವೆ.
ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು 6977 ಪ್ರಕರಣಗಳಿದ್ದು, 110 ಸಂಗ್ರಹವಾಗದ, 2854 ಶಾಶ್ವತ ವಲಸೆ, 2958 ಮರಣ, 1032 ದ್ವಿಪ್ರತಿ ಹಾಗೂ 23 ಇತರೆ ಪ್ರಕರಣಗಳಿವೆ.
ಚನ್ನಗಿರಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ 3895 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 55 ಸಂಗ್ರಹವಾಗದ, 1850 ಶಾಶ್ವತ ವಲಸೆ, 1299 ಮರಣ, 671 ದ್ವಿಪ್ರತಿ ಹಾಗೂ 20 ಇತರೆ ಪ್ರಕರಣಗಳು ಸೇರಿವೆ.
ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 4833 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 37 ಸಂಗ್ರಹವಾಗದ, 2398 ಶಾಶ್ವತ ವಲಸೆ, 1913 ಮರಣ, 477 ದ್ವಿಪ್ರತಿ ಹಾಗೂ 08 ಇತರೆ ಪ್ರಕರಣಗಳು ಒಳಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ
ಚುನಾವಣಾಧಿಕಾರಿ ಜಿ ಎಂ ಗಂಗಾಧರಸ್ವಾಮಿ ಅವರು ತಿಳಿಸಿದ್ದಾರೆ.
- BLO Survey
- Channagiri
- Constituency Wise Data
- davanagere
- Davanagere North
- Davanagere South
- DC GM Gangadharaswamy
- Deceased Voters
- Duplicate Voters
- Harihar
- Honnali
- Jagalur
- MAYAKONDA
- Voter List Statistics 2026
- ಕ್ಷೇತ್ರವಾರು ವಿವರ
- ಚನ್ನಗಿರಿ
- ಜಗಳೂರು
- ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ
- ಡೂಪ್ಲಿಕೇಟ್ ಮತದಾರರು
- ದಾವಣಗೆರೆ
- ದಾವಣಗೆರೆ ಉತ್ತರ
- ದಾವಣಗೆರೆ ದಕ್ಷಿಣ
- ಮತದಾರರ ಪಟ್ಟಿ ಪರಿಷ್ಕರಣೆ
- ಮನೆ ಮನೆ ಭೇಟಿ
- ಮರಣ ಪ್ರಕರಣಗಳು
- ಮಾಯಕೊಂಡ
- ಹರಿಹರ
- ಹೊನ್ನಾಳಿ
Leave a comment