ಹರಪನಹಳ್ಳಿ : ಕೋರ್ಟ್ ಗೆ ಅಲೆದು ಸಾಕಾಗಿರುವ ಗ್ರಾಹಕರಿಗೆ ಈಗ ಕಾನೂನು ಸೇವೆಗಳ ಪ್ರಾಧಿಕಾರ ಮದ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಿಕೊಳ್ಳಲು ರಾಷ್ಟ್ರಕ್ಕಾಗಿ ಮದ್ಯಸ್ಥಿಕೆ ವಿಶೇಷ ಅಭಿಯಾನ ಚಾಲ್ತಿಗೊಂಡಿದೆ.
ಜ.2 ರಿಂದ ಆರಂಭವಾಗಿರುವ ರಾಜೀ ಸಂಧಾನವೂ 90 ದಿನ ನಿರಂತರ ನಡೆಯುತ್ತಿದೆ. ರಾಷ್ಟ್ರೀಯ ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತ ಹರಪನಹಳ್ಳಿ ಉಭಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣ ಮದ್ಯಸ್ಥಿಕೆ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಕಚೇರಿ ಸಂಪರ್ಕಿಸಿ, ಈ ಸುವರ್ಣ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಹಿರಿಯ ಸಿವಿಲ್ ನ್ಯಾಯಧೀಶೆ ಉಷಾರಾಣಿ ಆರ್., ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment