Home ಹರಪನಹಳ್ಳಿ : ದಾಸೋಹ ದಿನ ಆಚರಣೆ
Home

ಹರಪನಹಳ್ಳಿ : ದಾಸೋಹ ದಿನ ಆಚರಣೆ

Share
ಹರಪನಹಳ್ಳಿ : ದಾಸೋಹ ದಿನ ಆಚರಣೆ
Share

ಹರಪನಹಳ್ಳಿ : ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಶ್ರೀ ಸಿದ್ದಗಂಗಾ ಮಠ ಗೆಳೆಯರ ಬಳಗದ ವತಿಯಿಂದ ದಾಸೋಹಿ ದಿನ ವನ್ನು ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ  ಬುಧವಾರ ಜರುಗಿತು.

ದಾಸೋಹಿ ಶಿವಕುಮಾರ ಸ್ವಾಮಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ,   ಶ್ರೀಗಳು ಮಾಡಿದ ಅಕ್ಷರ, ಅನ್ನದಾಸೋಹ ಜಗತ್ತಿಗೆ ಮಾದರಿಯಾಗಿದೆ. ಶ್ರೀಮಠವು ಎಲ್ಲ ಸಮಾಜದ ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ನೀಡುತ್ತಿರುವುದು ಕರುನಾಡಿನ ಹೆಮ್ಮೆ. ಅಂತಹ ಮಹನೀಯರ ಶ್ರೀಗಳ  ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರು ತೋರಿದ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.

ನಗರಸಭೆ ಮಾಜಿ ಅದ್ಯಕ್ಷ ಹೆಚ್.ಎಂ.ಅಶೋಕ ಹರಾಳ್ ಮಾತನಾಡಿ, ದಾಸೋಹದ ಮೂಲಕ ಲಕ್ಷಾಂತರ ಜನರ ಬದುಕಿಗೆ ಶ್ರೀಗಳು ಆಸರೆಯಾಗಿದ್ದರು. ಮಠದಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ದೊಡ್ಡ ಹುದ್ದೆ ಅಲಂಕರಿಸುವ ಮೂಲಕ ಬದುಕು ರೂಪಿಸಿ ಕೊಂಡಿದ್ದಾರೆ ಎಂದು ಸ್ಮರಿಸಿದರು.

ಮುಖಂಡ ಎಸ್.ಎಂ.ವೀರಭದ್ರಯ್ಯ ಮಾತನಾಡಿ, ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು ನಾಡಿನಲ್ಲಿ ವಿದ್ಯಾದಾನ, ಅನ್ನದಾನಕ್ಕೆ ಮಹತ್ವ ನೀಡಿದವರು. ಮಹಾನ್ ಗುರುಗಳ ಆದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ನಡೆದ ದಾರಿಯಲ್ಲಿ ಸಾಗಬೇಕು ಎಂದು ತಿಳಿಸಿದರು.  ದಾಸೋಹ ದಿನಕ್ಕೆ ಆಗಮಿಸಿದ ಭಕ್ತರಿಗೆ ಗೋದಿ ಉಗ್ಗಿ, ಕಾಳು ಫಲ್ಯೆ, ರೊಟ್ಟಿ, ಅನ್ನ ಸಾಂಬಾರನ್ನು ಸಾರ್ವಜನಿಕರು ಮತ್ತು ಭಕ್ತರಿಗೆ ಅನ್ನದಾಸೋಹ ಸೇವಿಸಿದರು.

ಮುಖಂಡರಾದ ಕಿರಣ್ ಕುಮಾರ್, ರವಿ ಅಧಿಕಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿ ತಾಲೂಕು ಅದ್ಯಕ್ಷ ಎ.ನಾಗೇಂದ್ರಪ್ಪ, ಶ್ರೀಸಿದ್ದಗಂಗಾ ಮಠ ಗೆಳೆಯರ ಬಳಗದ ಅದ್ಯಕ್ಷ ಕೆ.ಸುಭಾಷ, ಮಾಲತೇಶ ಗೌಡ ಶಿವಕುಮಾರ್, ವೀರೇಶ್.ಕೆ, ಬಸವನಗೌಡ, ವೀರೇಶ್, ಮನೋಜ್ ಕುಮಾರ್.ಎಂ, ಧನಂಜಯ್ ಕುಮಾರ್.ಎಂ, ಮಲ್ಲಿಕಾರ್ಜುನ್ ಗೌಡ.ಕೆ.ಜಿ, ಜಗದೀಶ್ ಕುಮಾರ್, ಕೆ.ಜಿ.ಗೌಡ, ಅಭಿಷೇಕ್ ಕುಮಾರ, ಘವೇಂದ್ರ, ವೀರೇಶ್ ಆಚರ್, ಸನ್ನಿಧಿ, ಜಿ.ಕೆ.ಸರ್ಪಭೂಷಣ್, ಜಿ.ಕೆ.ಗುರುರಾಜ್, ಪ್ರಜ್ವೀತ್ ಕುಮಾರ್, ವೀರೇಶ್ ಬಡಿಗೇರ್, ಅನಸ್ ಹೋಂ ಗಾರ್ಡ್, ವಾಸಿಮ್ ಅಕ್ರಂ, ಕೆ.ಜಿ ಸಿದ್ದನಗೌಡ  ಇದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Homeಸುದ್ದಿಗಳು

ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಎಲ್ಲರದ್ದು: ಪ್ರಾಂಶುಪಾಲ ಡಾ. ಎಂ. ಸುರೇಶ್

ಹರಪನಹಳ್ಳಿ : 'ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು'...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.