ಹರಪನಹಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ರೈತರು ಈಗಾಗಲೇ ಸಾಲಬಾದೆ ಮತ್ತು ಪ್ರಕೃತಿ ವಿಕೋಪದಿಂದ ಕಂಗಾಲಾಗಿದ್ದಾರೆ. ಅಧಿಕಾರಿಗಳು ಕೇವಲ ಮನವಿ ಸ್ವೀಕರಿಸಿ ಸುಮ್ಮನಾಗದೆ, ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಒಂದು ವೇಳೆ ರೈತರ ಈ ನ್ಯಾಯಸಮ್ಮತ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ರೈತರಿಗೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು ಮತ್ತು ಯಾವುದೇ ಕಾರಣಕ್ಕೂ ರೈತರಿಗೆ ಕಿರುಕುಳ ನೀಡಬಾರದು.ಬೆಳೆಯುವ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ಸಿಗುವಂತಾಗಬೇಕು ಮತ್ತು ಸಕಾಲದಲ್ಲಿ ಸರ್ಕಾರಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಅರಸೀಕೆರೆಯ ಹೋಬಳಿಯ ರೈತ ಸಂಘದ ಅಧ್ಯಕ್ಷ ಹೇಮಂತ್ ಒತ್ತಾಯಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಜಿ.ರತ್ನಮ್ಮ, ಉಪಾಧ್ಯಕ್ಷೆ ಕೆ ರೂಪ, ಕಾರ್ಯದರ್ಶಿ ನಿಂಗಮ್ಮ, ಅರಸೀಕೆರಿ ಹೋಬಳಿಯ ಅಧ್ಯಕ್ಷ ಹೇಮಂತ, ನಾಗರತ್ನ ಮಾಡಲಗೇರಿ, ಆರ್, ಹನುಮಂತ, ಉಪಾಧ್ಯಕ್ಷ ಟಿ.ದುರುಗಪ್ಪ ಹುಲಿಕಟ್ಟೆ ಗ್ರಾಮ ಘಟಕ ಮಹಿಳಾ ಅಧ್ಯಕ್ಷೆ ನಾಗಮ್ಮ, ಭೋವಿ ನಾಗಮ್ಮ, ಶಿರೀನ,ನದಿನಿ ಇದ್ದರು.
Leave a comment