Home ಹರಪನಹಳ್ಳಿ: ಕಿಮ್ಸ್‌ನಲ್ಲಿ ಎಂ.ಬಿ.ಬಿ.ಎಸ್. ಸೀಟು ಪಡೆದ ಗ್ರಾಮೀಣ ಪ್ರತಿಭೆ ಪ್ರಜ್ವಲ್ ಹಾಗೂ ನಿತಿನ್‌ಗೆ ಅಭಿನಂದನ
Homeಸುದ್ದಿಗಳು

ಹರಪನಹಳ್ಳಿ: ಕಿಮ್ಸ್‌ನಲ್ಲಿ ಎಂ.ಬಿ.ಬಿ.ಎಸ್. ಸೀಟು ಪಡೆದ ಗ್ರಾಮೀಣ ಪ್ರತಿಭೆ ಪ್ರಜ್ವಲ್ ಹಾಗೂ ನಿತಿನ್‌ಗೆ ಅಭಿನಂದನ

Share
Share

ಹರಪನಹಳ್ಳಿ : ತಾಲೂಕಿನ ನಂದಿಬೇವೂರು ಗ್ರಾಮದ ಕೆಳ ವರ್ಗದ ಬಡತನ ಹಾಗೂ ಸೀಮಿತ ಸೌಲಭ್ಯಗಳ ನಡುವೆಯೂ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ನೀಟ್ ಪರೀಕ್ಷೆಯಲ್ಲಿ 99,395ನೇ ರ‍್ಯಾಂಕ್ ಗಳಿಸಿ, ಹುಬ್ಬಳ್ಳಿಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್ )ನಲ್ಲಿ ಎಂ. ಬಿ .ಬಿ .ಎಸ್ ಸರ್ಕಾರಿ ಸೀಟು ಪಡೆದ ನಂದಿಬೇವೂರಿನ ಗ್ರಾಮೀಣ ಪ್ರತಿಭೆ ದೊಡ್ಡಮನಿ ಪ್ರಜ್ವಲ್ ಹಾಗೂ ಹರಪನಹಳ್ಳಿ ಬಾಪೂಜಿ ನಗರದ ಒ.ಎಂ. ನಿತಿನ್ ಕುಮಾರ್ ಅವರನ್ನು ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ಹರಪನಹಳ್ಳಿ ತಾಲ್ಲೂಕು ಘಟಕದ ವತಿಯಿಂದ ಇವರ ಸಾಧನೆಯನ್ನು ಗೌರವಿಸಿ ಸನ್ಮಾನಿಸಿದರು.

ಈ ವೇಳೆ ಬಿ.ಜೆ.ಪಿ ಹಿರಿಯ ಮುಖಂಡರು ಹಾಗೂ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಕಣವಿಹಳ್ಳಿ ಮಂಜುನಾಥ್ ಅವರು ಮಾತನಾಡಿ ಎಸ್ಸಿ ಪಟ್ಟಿಯಲ್ಲಿ ಬರುವ ಶೋಷಿತ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸುವ ಸಲುವಾಗಿ ಎಸ್ಸಿ ಪಟ್ಟಿಯಲ್ಲಿ ಬರುವ ಎಲ್ಲಾ ವರ್ಗಗಳಿಗೆ ಸಮಾನತೆಯ ನ್ಯಾಯ ದೊರಕಲಿ ಎಂದು 2012ರಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಮಧ್ಯ ಕರ್ನಾಟಕದ ಹರಪನಹಳ್ಳಿಯಿಂದ ದಾವಣಗೆರೆವರೆಗೆ ಕರ್ನಾಟಕದಲ್ಲಿ ಪ್ರಥಮವಾಗಿ ಕಾಲ್ನಡಿಗೆ ಜಾತಾ ಮಾಡುವ ಮೂಲಕ ರಾಜ್ಯದಲಿ ಒಳ ಮೀಸಲಾತಿಯ ಗಮನ ಸೆಳೆದಿತ್ತು

ಅಂದಿನಿಂದ ಪ್ರಾರಂಭವಾದ ಹೋರಾಟ ರಾಜ್ಯದ ಉದ್ದಕ್ಕೂ ಹರಡಿ ಆಂದ್ರದ ಮಂದಕೃಷ್ಣ ಮಾದಿಗ ಅವರ ಬೃಹತ್ ಹೋರಾಟಕ್ಕೆ ಸ್ಪಂದಿಸಿ ಪ್ರಧಾನಿ ನರೇದ್ರ ಮೋದಿಜಿಯವರು ಆಂದ್ರದ ಮೀಸಲಾತಿ ಹೋರಾಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದಿಗ ಸಮಾಜಕ್ಕೆ ನ್ಯಾಯ ಕೊಡಿಸಲು ಒಪ್ಪಿದ ಮರುದಿನವೇ ಕರ್ನಾಟಕದ ಮಾದರ ಚನ್ನಯ್ಯ ಪೀಠಕ್ಕೆ ಆರ್.ಎಸ್.ಎಸ್ ನ ಮೋಹನ್ ಬಾಗವತ್, ಅಮೀತ್ ಷಾಜೀ ಎರಡು ದಿನಗಳ ಕಾಲ ಮಠದಲ್ಲಿ ತಂಗಿ ಈ ಸಮಾಜದ ಸಂಪೂರ್ಣ ಮಾಹಿತಿ ಪಡೆದು ಸಂಸತ್ತಿನಲ್ಲಿ ಚರ್ಚಿಸಿ ಸುಪ್ರೀಮ್ ಕೋರ್ಟಿನ 7ಸದಸ್ಯ ಪೀಠವನ್ನು ರಚಿಸಿ, ಪೀಠವು ಎಸ್ಸಿ ಮೀಸಲಾತಿಯನ್ನು ಆಯಾ ರಾಜ್ಯಗಳೇ ವರ್ಗಿಕರಿಸಲು ಅವಕಾಶ ಮಾಡಿಕೊಟ್ಟಿತು.

ಅದರ ಪರಿಣಾಮವಾಗಿ ರಾಜ್ಯದಲ್ಲಿ ಸಮಾಜದ ಮಠಾದೀಶರಾದ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿಯವರು, ಆದಿಜಾಂಬವ ಸ್ವಾಮೀಜಿಯವರು ನೇತೃತ್ವದಲ್ಲಿ ಸಮಾಜದ ರಾಜಕರಾಣಿಗಳಾದ ಗೋವಿಂದ ಕಾರಜೋಳ, ಹೆಚ್.ಆಂಜನೇಯ, ಕೆ.ಹೆಚ್.ಮುನಿಯಪ್ಪ, ಎ.ನಾರಾಯಣ ಸ್ವಾಮಿ ಸೇರಿದಂತೆ ಅನೇಕ ಮಾದಿಗ ಸಮಾಜದ ನಾಯಕ ಮುಖಂಡರ ಅವಿರತ ಹೋರಾಟದಿಂದ ಜಾರಿಯಾದ ಒಳ ಮೀಸಲಾತಿಯ ಫಲವಾಗಿ ಕರ್ನಾಟಕದಲ್ಲಿ ಎಂ.ಬಿ.ಬಿ.ಎಸ್ ನಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ತೇರ್ಗಡೆಯಾಗಿ ಆಯ್ಕೆಯಾಗಿರುವುದು ಹೋರಾಟದ ಸರ್ಥಕತೆಯಾಗಿದೆ ಆದರೆ ನಮ್ಮ ಹೋರಾಟವು ಎಸ್ಸಿ ಪಟ್ಟಿಯ ಎಲ್ಲಾ ವರ್ಗದವರ ಸಮಾನತೆಯ ನ್ಯಾಯಕ್ಕಾಗಿ ಡಾ.ಬಿ.ಆರ್ ಅಂಬೇಡ್ಕರ್ ಆಶಯದಂತೆ ಸಮಾನತೆಯ ಹೊಂದುವ ಗುರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಮಾದರ ಚನ್ನಯ್ಯ ಸೇವಾ ಸಮಿತಿ ಹರಪನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ನಂದಿಬೇವೂರು ಚಾರ್ಯಪ್ಪ ಮಾತನಾಡಿದರು, ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ದೊಡ್ಡಮನಿ ಬಸವರಾಜ್, ಅಶೋಕ್, ಗಿರೀಶ್, ದೊಡ್ಡಮನಿ ಮಂಜುನಾಥ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.