Home ಸುದ್ದಿಗಳು ಪಿಯುಸಿ ರಾಜ್ಯ ಟಾಪರ್ ; ಡಿ.ಎಂ.ಅರ್ಚನಾಗೆ ಸನ್ಮಾನ
ಸುದ್ದಿಗಳು

ಪಿಯುಸಿ ರಾಜ್ಯ ಟಾಪರ್ ; ಡಿ.ಎಂ.ಅರ್ಚನಾಗೆ ಸನ್ಮಾನ

Share
baliganuru
Share

ಹರಪನಹಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಾಲ್ಲೂಕಿನ ಬಳಿಗನೂರು ಗ್ರಾಮದ ಪ್ರತಿಭೆ ಡಿ.ಎಂ.ಅರ್ಚನಾ ಅವರಿಗೆ ಶನಿವಾರ ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು.

ಡಿ.ಹನುಮಂತಪ್ಪ ಮತ್ತು ರೇಣುಕಮ್ಮ ದಂಪತಿಯ ಪುತ್ರಿಯಾದ ಅರ್ಚನಾ, ಕುಗ್ರಾಮ ಬಳಿಗನೂರಿನಿಂದ ನಿತ್ಯ ಕೊಟ್ಟೂರಿನ ಇಂದು ಪಿಯು ಕಾಲೇಜಿಗೆ ಪ್ರಯಾಣಿಸಿ ಸಾಧನೆ ಮಾಡಿದ್ದಾರೆ. ಇವರ ಈ ಅಸಾಧಾರಣ ಸಾಧನೆಯನ್ನು ಮೆಚ್ಚಿ ಗಣ್ಯರು ಗ್ರಾಮಕ್ಕೆ ಭೇಟಿ ನೀಡಿ ಅಭಿನಂದಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಬಿಜೆಪಿ ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚೆನ್ನಬಸವನಗೌಡ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಬಲ್ಲಹುಣ್ಸಿ ರಾಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಳಿಗಿ ವೀರೇಂದ್ರ, ಮುಖಂಡರಾದ ಪಿ.ಎಚ್.ಕೊಟ್ರೇಶ್, ಪಂಪಾಪತಿ, ಉದಯಕುಮಾರ, ಮಂಜುನಾಥ ಗೌಡ, ಕಣಿವಿಹಳ್ಳಿ ಮಂಜುನಾಥ, ಮೈದೂರು ಮಲ್ಲಿಕಾರ್ಜುನ್  ಹಾಗೂ ಇತರರು ಉಪಸ್ಥಿತರಿದ್ದರು.‌

Share

Leave a comment

Leave a Reply

Your email address will not be published. Required fields are marked *

Related Articles
kannada gkr
ಸುದ್ದಿಗಳು

ಬಳಿಗನೂರಿಗೆ ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಬೇಟಿ

ಹರಪನಹಳ್ಳಿ : ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ  ಪಡೆದ ತಾಲ್ಲೂಕಿನ ಮೈದೂರು ಗ್ರಾಮ...

dss harapanahalli
ಸುದ್ದಿಗಳು

ಕುಗ್ರಾಮದ ಸಾಧಕಿ ಅರ್ಚನಾ ಹಾಗೂ ಪೋಷಕರಿಗೆ ದಲಿತ ಪರ ಸಂಘಟನೆಗಳಿಂದ ಅದ್ಧೂರಿ ಸನ್ಮಾನ

ಹರಪನಹಳ್ಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಾಲ್ಲೂಕಿನ ಬಳಿಗನೂರು ಗ್ರಾಮದ ಹೆಮ್ಮೆಯ...

ಸುದ್ದಿಗಳು

ಶಿಕ್ಷಕರ ಚುನಾವಣೆ : 23 ನಾಮಪತ್ರ ಸಲ್ಲಿಕೆ

ಹರಪನಹಳ್ಳಿ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31ನೇ ಅವಧಿಗೆ ಆಡಳಿತ ಮಂಡಳಿ ಚುನಾವಣೆ...

ragi harapanahalli
ಕೃಷಿಸುದ್ದಿಗಳು

ಹರಪನಹಳ್ಳಿ : ರಾಗಿ ಖರೀದಿ ಕೇಂದ್ರದಲ್ಲಿ ಗಲಾಟೆಗೆ ಕಾರಣವೇನು?

ಹರಪನಹಳ್ಳಿ : ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿದ್ದ ಸರ್ಕಾರದ ಬೆಂಬಲ ಬೆಲೆ ರಾಗಿ ಖರೀದಿ ಕೇಂದ್ರದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.