Home ಹರಪನಹಳ್ಳಿ ವೀರಭಧ್ರೇಶ್ವರ ಅಗ್ನಿ : ಭಕ್ತರ ಪರಾಕಾಷ್ಠೆ
Homeಸುದ್ದಿಗಳು

ಹರಪನಹಳ್ಳಿ ವೀರಭಧ್ರೇಶ್ವರ ಅಗ್ನಿ : ಭಕ್ತರ ಪರಾಕಾಷ್ಠೆ

Share
HARAPANAHALLI VEERABADRESHWARA
Share

ಹರಪನಹಳ್ಳಿ (ವಿಜಯನಗರ ಜಿಲ್ಲೆ): ನಗರದ ಇತಿಹಾಸ ಪ್ರಸಿದ್ಧ ಸಾರಿಬಯಲು ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಗ್ನಿಕುಂಡ (ಕೆಂಡ) ಹಾಯುವ ಕಾರ್ಯಕ್ರಮ ಅತ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ನೆರವೇರಿತು.

ಹಿರೇಕೆರೆಯಿಂದ ವೈಭವದ ಮೆರವಣಿಗೆ: ಬೆಳಗಿನ ಜಾವ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ದೇವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ, ಮೆರವಣಿಗೆಯ ಮೂಲಕ ಹಿರೇಕೆರೆಗೆ ಕರೆದೊಯ್ಯಲಾಯಿತು. ಅಲ್ಲಿ ಸಕಲ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ, ಪುರವಂತರು, ಅರ್ಚಕರು ಹಾಗೂ ವೀರಗಾಸೆ ಕಲಾವಿದರು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿದರು.

ಸಮ್ಮಾಳ, ನಂದಿಕೋಲು ಸೇರಿದಂತೆ ಸಕಲ ಮಂಗಳವಾದ್ಯಗಳೊಂದಿಗೆ ಹಿರೇಕೆರೆಯಿಂದ ಹೊರಟ ಮೆರವಣಿಗೆಯ ಉದ್ದಕ್ಕೂ ಭಕ್ತರು ‘ಈರಣ್ಣ ದೊರೆಯೇ ನಿನಗಾರು ಸರಿಯೇ’ ಎಂಬ ಜಯಘೋಷ ಮೊಳಗಿಸಿದರು. ಪಲ್ಲಕ್ಕಿ ಆಗಮಿಸುವ ಮುನ್ನವೇ ನೆರೆದಿದ್ದ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗಿನ ಭಕ್ತರು ನಿಗಿನಿಗಿ ಕೆಂಡ ತುಳಿದು ತಮ್ಮ ಹರಕೆ ಹಾಗೂ ಭಕ್ತಿ ಸಮರ್ಪಿಸಿದರು.

  • ಈ ವೇಳೆ ಆಕಸ್ಮಿಕವಾಗಿ ಭಕ್ತರೊಬ್ಬರು ಆಯತಪ್ಪಿ ಕೆಂಡದ ಮೇಲೆ ಬಿದ್ದು ಸಣ್ಣಪುಟ್ಟ ಗಾಯಗೊಂಡ ಘಟನೆಯೂ ನಡೆಯಿತು.

  • ಬಳಿಕ ಸ್ವಾಮಿ ಪ್ರತಿಷ್ಠಾಪಿಸಿದ್ದ ಅಲಂಕೃತ ಪಲ್ಲಕ್ಕಿ ಹೊತ್ತ ಭಕ್ತರು, ಪುರವಂತರು, ಅರ್ಚಕರು, ಸಮ್ಮಾಳ ಹಾಗೂ ನಂದಿಕೋಲು ಕಲಾವಿದರು ಕೆಂಡ ಹಾಯ್ದರು. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಅಗ್ನಿಕುಂಡ ಹಾಯ್ದು ಭಕ್ತಿ ಪರಾಕಾಷ್ಠೆ ಮೆರೆದರು. ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಊರಿನ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

11 ಕಾಡು ಮೊಲಗಳ ಬೇಟೆ: ಮೂವರ ಬಂಧನ

ಬಳ್ಳಾರಿ : ಮಿಂಚೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 11 ಕಾಡು ಮೊಲಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ...

Homeಸುದ್ದಿಗಳು

ಆಸ್ತಿ ವಿವಾದ: ಸಹೋದರನ ಹತ್ಯೆಗೈದ ಇಬ್ಬರಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ: ಆಸ್ತಿ ಪಾಲು ವಿಭಾಗದ ವಿಚಾರವಾಗಿ ಉಂಟಾದ ಮನಸ್ತಾಪದಿಂದ ಸಹೋದರನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ...

bagalikanakadasa-jayanti-celebrated-at-bagali-government-school-harapanahalli
Homeಸುದ್ದಿಗಳು

ಬಾಗಳಿ ಸರ್ಕಾರಿ ಶಾಲೆಯಲ್ಲಿ ಸಡಗರದ ಕನಕದಾಸ ಜಯಂತಿ

ಹರಪನಹಳ್ಳಿ (ಬಾಗಳಿ) : ತಾಲ್ಲೂಕಿನ ಬಾಗಳಿ ಗ್ರಾಮದ ನಂದಿಬೇವೂರು ಗುರುಬಸಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ...

Homeಸುದ್ದಿಗಳು

ಸರ್ಕಾರಿ ಶಾಲೆಗಳ ಖಾಸಗೀಕರಣ, ವಿಲೀನ ವಿರೋಧಿಸಿ ಪ್ರತಿಭಟನೆ

ಹರಪನಹಳ್ಳಿ : ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬ ಘೋಷವಾಕ್ಯದೊಂದಿಗೆ, ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳೊಂದಿಗೆ ಜೋಡಿಸುವ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.