Home ಹರಪನಹಳ್ಳಿಯಲ್ಲಿ ಛಾಯಗ್ರಾಹಕರ ದಿನಾಚರಣೆ
Homeಸುದ್ದಿಗಳು

ಹರಪನಹಳ್ಳಿಯಲ್ಲಿ ಛಾಯಗ್ರಾಹಕರ ದಿನಾಚರಣೆ

Share
Share

ಹರಪನಹಳ್ಳಿ : ಪಟ್ಟಣದ ನಟರಾಜ ಕಲಾ ಭವನದಲ್ಲಿ  187 ನೇ ವಿಶ್ವ ಛಾಯಾಗ್ರಾಹಕ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಛಾಯಾಗ್ರಾಹಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಸಮಾಜದ ಪ್ರತಿಯೊಂದು ನೆನಪುಗಳನ್ನು, ಇತಿಹಾಸದ ಕ್ಷಣಗಳನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದು ಜೀವಂತವಾಗಿಡುವ ಛಾಯಾಗ್ರಾಹಕರ ಶ್ರಮ ಅನನ್ಯವಾದುದು.

ಕ್ಷಣಗಳನ್ನ ಕೇವಲ ಸೆರೆಹಿಡಿಯುವುದಲ್ಲ ಅವುಗಳಿಗೆ ಜೀವ ತುಂಬಿಸುವ ಕಲಾವಿದನೇ ಛಾಯಾಗ್ರಾಹಕ ಎಂದು  ತೆಗ್ಗಿನ ಮಠದ ಶ್ರೀ ವರಸಧ್ಯೋಜಾತ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು . ಜನರೋಂದಿಗೆ ಛಾಯಗ್ರಾಹಕರೊಂದಿಗೆ ನಾವು ಕೂಡ ಅನೇಕ ಚಿಂತನೆಗಳನ್ನ ರೂಪಿಸಿಕೊಳ್ಳಬೇಕಿದೆ, ನಮ್ಮ ನಮ್ಮ ನೆರೆಹೊರೆಯವರಿಗೆ ನಾವು ಸಹಾಯ ಮಾಡೋಕೆ ಹಿಂದು ಮುಂದು ಮಾಡುತೇವೆ ಆದರೆ ಛಾಯಗ್ರಾಹಕ ಸಂಘದವರು ಸಾಕಷ್ಟು ಸಹಾಯ ಮಾಡುತ್ತ ಬಂದಿದ್ದಾರೆ.

ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಛಾಯಾಗ್ರಾಹಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ತಂತ್ರಜ್ಞಾನ ಎಷ್ಟೇ ಬೆಳೆದರೂ ಒಬ್ಬ ನೈಪುಣ್ಯತೆಯ ಛಾಯಾಗ್ರಾಹಕನ ಸೃಜನಶೀಲತೆಗೆ ಪರ್ಯಾಯವಿಲ್ಲ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯಪಡಲಾಯಿತು. ಕೇವಲ ಚಿತ್ರಗಳನ್ನು ತೆಗೆಯುವುದು ಮಾತ್ರವಲ್ಲದೆ, ಇತಿಹಾಸವನ್ನು ಭವಿಷ್ಯದ ಪೀಳಿಗೆಗೆ ದಾಖಲಿಸಿಡುವಲ್ಲಿ ಛಾಯಾಗ್ರಾಹಕರು ಪ್ರಮುಖ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗಣ್ಯರು ಅವರ ಸೇವೆಯನ್ನು ಶ್ಲಾಘಿಸಿದರು.

ಡಾ. ಹೆಚ್. ಬಿ. ಮಂಜುನಾಥ ಮಾತನಾಡಿ ಭವಿಷ್ಯದಲ್ಲಿ ಮಕ್ಕಳಿಗೆ ದಾಖಲೆಗಳು ಫೋಟೋಗ್ರಫಿಯೇ ಪ್ರಾಮಾಣಿಕ ಸಾಕ್ಷಿಯಾಗುತ್ತದೆ ಎ ಐ ಭಾರತಕ್ಕೆ ಬಂದರು ಕೂಡ ಫೋಟೋಗ್ರಾಫಿ ಇರಲೇಬೇಕಿರುತ್ತದೆ ಮದುವೆ ಸಮಾರಂಭದಲ್ಲಿ ಮದುವೆ ಮನೆಯವರಿಗಿಂತ ಮೊದಲು ಫೋಟೋಗ್ರಾಫಿ ಮಾಡುವವರೇ  ಹೋಗಿರುತ್ತಾರೆ. 1839 ರಲ್ಲಿ ಫ್ರೆಂಚ್ ವಿಜ್ಞಾನಿ ಜೋಸೆಫ್ ನಿಸೆಫೋರ್ ನೀಪ್ಸ್ ಮತ್ತು ಲೂಯಿಸ್ ಡಾಗುರೆ ಅವರು ಮೊದಲ ಪ್ರಾಯೋಗಿಕ ಛಾಯಾಗ್ರಹಣ ಪ್ರಕ್ರಿಯೆ ‘ಡಾಗುರೊಟೈಪ್’ ಅನ್ನು ಅಭಿವೃದ್ಧಿಪಡಿಸಿದರು. 1839 ರಂದು ಫ್ರೆಂಚ್ ಸರ್ಕಾರವು ಈ ತಂತ್ರಜ್ಞಾನದ ಪೇಟೆಂಟ್ ಅನ್ನು ಖರೀದಿಸಿ, ಜಗತ್ತಿಗೆ ಉಚಿತ ಕೊಡುಗೆಯಾಗಿ ಘೋಷಿಸಿತು.

ಪ್ರಪಂಚ ಬೆರಗಾಗುವಂತೆ ಸಾಧನೆ ಮಾಡಿರುವ ಚಂದ್ರಯಾನ ಯಶಸ್ವಿಯಿಂದೆ ಕ್ಯಾಮರಾದ ಕೆಲಸ ಬಹುಮುಖ್ಯವಾದುದ್ದು ಸ್ಪೇಸ್ ಅಲ್ಲಿ ಸೆನ್ಸಾರ್ ಮೂಲಕ ಚಂದ್ರಯಾನವನ್ನು ಲ್ಯಾಂಡಿಂಗ್ ಮಾಡಲು ಕ್ಯಾಮರಾಗಳು ಮುಖ್ಯ ಕಾರಣವಾಗಿವೆ ಅಮೇರಿಕಾದ ನಾಸ ಕೂಡ ಬೆರಗಾಗಿವೆ ಅಂತಹ ಸಾಧನೆ ಮಾಡಿರುತ್ತದೆ ಅಂತಹ ಕೆಲಸವನ್ನನಮ್ಮ  ಹೆಮ್ಮೆಯ ಛಾಯಗ್ರಾಹಕ ಕ್ಯಾಮರಗಳು ಕೂಡ ಅದರ ಜೊತೆಗೆ ಸಾಧನೆಯನ್ನ ಮಾದಿರುತ್ತವೆ ಎಂದು ಅಭಿಪ್ರಾಯ ತಿಳಿಸಿದರು.

ಲಿಯೋಗಾರ್ಡ್ , ಡಾವಿಂಜಿ ಪಾಶ್ಚಿಮಾತ್ಯ ಚಿತ್ರ ಬರೆಯೋದಕ್ಕೆ ಉಪಯೋಗಿಸುತ್ತಿದ್ದ ಕಲಾವಿದರಿಂದ ಪ್ರಾರಂಭವಾಯಿತು. ಮೊದ ಮೊದಲು  ಅದು ಉಲ್ಟಾ ಕಾಣುತ್ತಿತ್ತು ನಂತರ ಅದಕ್ಕೆ ಕನ್ನಡಿಯನ್ನ ಅಳವಡಿಸಿದರು ನಂತರ ಅವುಗಳಿಗೆ ಎರೆಡು ಬಗೆಯ ಗಾಜನ್ನ ಅಳವಡಿಸಿದರು ಕಾಲ ಬದಲಾದಂತೆ ಟೆಕ್ನಾಲಜಿ ಕ್ಯಾಮರಾ  ಬಂದವು ಹಾಗೆ ತಂತ್ರಜ್ಞಾನವನ್ನ ಉಪಯೋಗಿಸಿ  ಡಿಜಿಟಲ್‌  ಕ್ಯಾಮರಾಗಳು ತಂದುಕೊಂಡರು.

ಈ ಕಾರ್ಯಕ್ರಮದಲ್ಲಿ ಬಿ.ಮಂಜುನಾಥ್ ತಾಲ್ಲೂಕು ಅಧ್ಯಕ್ಷರು , ರೇಷ್ಮಾ ಹಂಸರಾಜ್ ಹಂಸ ಡಿಜೆ ಪ್ರೆಸ್ , ಬಿ. ಎಂ. ಕರಿಬಸಯ್ಯ ಜಿಲ್ಲಾಧ್ಯಕ್ಷರು , ವಿಜಯ್ ಕುಮಾರ್ ಜಾದವ್ , ಕೊಟ್ರೇಶ್ ಕೆ ವಿ ,  ಮಲ್ಲಿಕಾರ್ಜುನ ಗೌಡ ಎ.ಎಂ ಹೊಸಪೇಟೆ , ಕೆ ವೀರೇಶ್ , ನವೀನ್ ಗಡಿಗೆ , ಎ.ಎಂ. ಸೋಮಶೇಖರಯ್ಯ , ಸಂತೋಷ್ ಪೂಜಾರ್ ,  ಕೆ. ನಿಂಗಪ್ಪ , ಸಿರುಸಾಚಾರಿ ಟಿ , ರಾಘವೇಂದ್ರ ಎ.ಆರ್ , ಎಂ . ಮಹೇಶ್ವರ , ಬಡಿಗೇರ ಗಣೇಶ , ಮುಜುಮುಲ್ ರೆಹಮಾನ್ , ಬಸವರಾಜ್ ಹೆಚ್ ಎಸ್ , ದೇವರಾಜ್ , ಸೇರಿದಂತೆ ಅನೇಕ ತಾಲ್ಲೂಕು ಛಾಯಾಗ್ರಾಹಕರಿದ್ದರು.

 

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಕಲಬುರಗಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ

ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್...

Homeಸುದ್ದಿಗಳು

ಕ್ರೀಡಾಕೂಟಗಳು ಸ್ಪರ್ಧೆಯಾಗದೆ,ಹಬ್ಬದ ಸಂಭ್ರಮವಾಗಲಿ:ಶಾಸಕ ಬಿ.ದೇವೇಂದ್ರಪ್ಪ ಅಭಿಮತ.

ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ...

Homeಸುದ್ದಿಗಳು

ಸೆ.19ರಂದು ಹರಪನಹಳ್ಳಿಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವಾ ಕಾರ್ಯಕ್ರಮ

ವಿಜಯನಗರ : ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ...

Homeಸುದ್ದಿಗಳು

ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ : ಕಾಲಮಿತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ

ವಿಜಯನಗರ : ಸಾರ್ವಜನಿಕರು ತಮ್ಮ ದಿನನಿತ್ಯದ ಸಮಸ್ಯೆಗಳು, ಬೇಡಿಕೆಗಳು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳಿಗಾಗಿ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.