Home ಶಿಕ್ಷಣ ಹೊಸಪೇಟೆ : ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ
ಶಿಕ್ಷಣ

ಹೊಸಪೇಟೆ : ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ

Share
ಹೊಸಪೇಟೆ : ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ
Share

ಹೊಸಪೇಟೆ (ವಿಜಯನಗರ) : ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಡಿ.22 ರಿಂದ ಡಿ.28ರಂದು ಬೆಳಿಗ್ಗೆ 6.30 ರಿಂದ 8.30ರ ತನಕ ನಾಗರೀಕ ಬಂದೂಕು ತರಬೇತಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಅರ್ಜಿ ಸಮೀಪದ ಠಾಣೆಯಲ್ಲಿ ಅರ್ಜಿ ಸಲ್ಲಿಸಲು ವಿಜಯನಗರ ಜಿಲ್ಲಾ ಎಸ್ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.

ನಾಗರೀಕ ಬಂದೂರು ತರಬೇತಿ ಪಡೆಯಲು ಇಚ್ಚಿಸುವ ನಾಗರೀಕರು ಅರ್ಜಿಗಳನ್ನು ತಮ್ಮ ಸಮೀಪದ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಬಹುದು. ಡಿ.15 ರಿಂದ ಡಿ.17ರ ವರೆಗೆ ಅರ್ಜಿ ಸ್ವೀಕರಿಸಲಾಗುವುದು.

ನಿಬಂಧನೆಗಳು : ಅರ್ಜಿ ಸಲ್ಲಿಸುವ ನಾಗರೀಕರು 3 ಭಾವಚಿತ್ರ, ಆಧಾರ ಕಾರ್ಡು, ಮತದಾರರ ಗುರುತಿನ ಚೀಟಿ ಪ್ರತಿ ಸಲ್ಲಿಸಬೇಕು. 21 ವರ್ಷ ಮೇಲ್ಪಟ್ಟವರು ಅರ್ಹರು. ತರಬೇತಿಯಲ್ಲಿ ಅಶಿಸ್ತು ಕಂಡುಬಂದಲ್ಲಿ ಅಂತವರನ್ನು ತರಬೇತಿಯಿಂದ ವಜಾ ಮಾಡಲಾಗುವುದು. ತರಬೇತಿ ಅಭ್ಯರ್ಥಿಗಳು ಶಿಸ್ತುಬದ್ಧ ಉಡುಪು ಧರಿಸತಕ್ಕದ್ದು.

ತರಬೇತಿ ಅಭ್ಯರ್ಥಿಗಳು ನಿಗಧಿ ಅರ್ಜಿ ಶುಲ್ಕ ಮತ್ತು ಮದ್ದುಗುಂಡುಗಳ ಶುಲ್ಕ ಭರಿಸತಕ್ಕದ್ದು. ತರಬೇತಿಗೆ ಅರ್ಹತೆ ಪಡೆದ ಅಭ್ಯರ್ಥಿಗಳು ದೃಷ್ಟಿದೋಷ ಹೊಂದಿರಬಾರದು. ಮಾನಸಿಕ ಮತ್ತು ದೈಹಿಕ ಸದೃಢರಾಗಿರಬೇಕು. ತರಬೇತಿ ಅಭ್ಯರ್ಥಿಗಳು ತರಬೇತಿ ವೇಳೆ ಸಣ್ಣನೋಟ್ ಪುಸ್ತಕ ಮತ್ತು ಪೆನ್ನು ತರತಕ್ಕದ್ದು. ತರಬೇತಿ ಕೊನೆಯಲ್ಲಿ ಪರೀಕ್ಷೆ ನಡೆಸಿ ಉತ್ತೀರ್ಣರಾದರಿಗೆ ಪ್ರಮಾಣ ಪತ್ರ ನೀಡಲಾಗುವುದು. ಠಾಣಾಧಿಕಾರಿಗಳು ದೃಢೀಕರಿಸಿದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು. ತರಬೇತಿಗೆ ಹಾಜರಾಗಲು ಬೈಕ್‍ ನಲ್ಲಿ ಬರುವ ಅಭ್ಯರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles
Homeಶಿಕ್ಷಣ

ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ಅರ್ಜಿ ಆಹ್ವಾನ

ವಿಜಯನಗರ(ಹೊಸಪೇಟೆ) : 2026-27 ನೇ ಸಾಲಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ದೂರ ಶಿಕ್ಷಣ ಮಾದರಿ...

Homeಶಿಕ್ಷಣ

ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ :

ದಾವಣಗೆರೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ (ಸಾಮಾನ್ಯ ಪದವಿ ಮಟ್ಟದ ಕೋರ್ಸಿನವಿದ್ಯಾರ್ಥಿಗಳಿಗೆ...

Homeಶಿಕ್ಷಣ

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ :

ದಾವಣಗೆರೆ : ಅಲ್ಪಸಂಖ್ಯಾತರ ಸಮೂದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ) ವಿದ್ಯಾರ್ಥಿಗಳಿಗೆ ...

Homeಶಿಕ್ಷಣ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಕನ್ನಡ ರತ್ನ ಪ್ರಶಸ್ತಿ’ ಪ್ರದಾನ

ಹರಪನಹಳ್ಳಿ :  ತಾವು ಸಂಪಾದಿಸಿದ ಆದಾಯದಲ್ಲಿ ಸ್ವಲ್ಪ ಹಣ ಕನ್ನಡ ಸೇವೆಗಾಗಿ ಮೀಸಲಿಟ್ಟು ಕೆಲಸ ಮಾಡುತ್ತಿರುವ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.