ವಿಜಯನಗರ (ಹೊಸಪೇಟೆ) : ಜಿಲ್ಲೆಯ ಹೊಸಪೇಟೆ ತಾಲೂಕಿನ ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆಯಡಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು, ರಥ ಉತ್ಪಾದಕ ಸಂಸ್ಥೆ ಹಾಗೂ ತೋಟಗಾರಿಕಾ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿರುವ ಎನ್.ಜಿ.ಒ ಸಂಸ್ಥೆಯವರು ಪ್ರತ್ಯೇಕ ಹಣ್ಣು ಸಂಸ್ಕರಣಾ ಘಟಕ, ಬಹು ಹಣ್ಣು ಸಂಸ್ಕರಣಾ ಘಟಕ, ಹಣ್ಣು ಅಥವಾ ತರಕಾರಿ ನಿರ್ಜಲೀಕರಣ ಘಟಕ, ಮಾವಿನ ತಿರುಳು ಸಂಸ್ಕರಣಾ ಘಟಕ ಹಾಗೂ ತೆಂಗಿನಕಾಯಿ ಸಂಬಂದಿತ ಕೊಯ್ಲು ನಂತರದ ಮತ್ತು ಸಂಸ್ಕರಣಾ ಸರಪಳಿ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹೊಸಪೇಟೆ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ.ಸಂ: 9164297220, ಮರಿಯಮ್ಮನಹಳ್ಳಿ: 7204888978, ಕಮಲಾಪುರ: 8123465548, ಹೊಸಪೇಟೆ ಸಹಾಯಕ ತೋಟಗಾರಿಕೆ ನಿರ್ದೇಶಕ ಮೊ.ಸಂ: 9901555690 ಹಾಗೂ ಜಿ.ಪಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮೊ.ಸಂ: 83100291867 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Leave a comment