ಹೊಸಪೇಟೆ : ಇಲ್ಲಿನ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಭೇದಿಸಿರುವ ಹರಪನಹಳ್ಳಿ ಪೊಲೀಸರು, ಇಬ್ಬರು ಅಂತರರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಖಾರಿ ಜಾಹ್ನವಿ ಎಸ್ ತಿಳಿಸಿದರು.
ಹೊಸಪೇಟೆ ನಗರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಅವರು ಮಾಹಿತಿ ನೀಡಿದರು. ಛತ್ತೀಸಘಡ ಮೂಲದ ವಾಖರ್ ಅಹಮ್ಮದ್ ಶೇಖ್ ಮತ್ತು ದಾವಣಗೆರೆಯ ಟಿಪ್ಪುನಗರದ ಭಾಷ ಆಲಿಯಾಸ್ ಮುಜಾವರ್ ಜಾಫರ್ ಬಂಧಿತರು. ಆರೋಪಿಗಳಿಂದ ₹3.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿ ವಾಖರ್ ಅಹಮ್ಮದ್ ಶೇಖ್ ಹಲವು ಪ್ರಕರಣದಲ್ಲಿ ಆರೋಪ ಸಾಭೀತಾಗಿದ್ದು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯಕ್ಕೆ ಹಾಜರಾಗದೇ ತಲರೆಮಸಿಕೊಂಡಿದ್ದ. ಕರ್ನಾಟಕದ ಬೆಳಗಾವಿ, ದಾವಣಗೆರೆಯಲ್ಲೂ ಈತನ ಮೇಲೆ ಪ್ರಕರಣಗಳಿವೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಇಟ್ಟಿಗಿ ಗ್ರಾಮದ ಪ್ರಭುರಾಜ ಎಂಬುವವರ ಕುಟುಂಬದವರು ಮದುವೆ ಸಮಾರಂಭಕ್ಕಾಗಿ ವಿಜಯನಗರ ಜಿಲ್ಲೆ ಹರಪನಹಳ್ಳಿ ನಗರದ ತರಳಬಾಳು ಕಲ್ಯಾಣ ಮಂಟಪಕ್ಕೆ ಬಂದಿದ್ದರು.
ಫೆಬ್ರವರಿ 7ರಂದು ರಾತ್ರಿ ವಧು ಉಳಿದುಕೊಳ್ಳುವ ಕೋಣೆಯ ಟ್ರಂಕ್ನಲ್ಲಿಟ್ಟಿದ್ದ ₹6,15,000 ಮೌಲ್ಯದ 6 ತೊಲೆ ಚಿನ್ನಾಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದರು. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿತ್ತು.
ಕಳ್ಳರ ಸೆರೆ ಹಿಡಿಯಲು ರಚಿಸಿದ್ದ ತಂಡದಲ್ಲಿ ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್, ಪಿಎಸ್ಐ ಶಂಭುಲಿಂಗ ಹಿರೇಮಠ, ಬಿ.ಮೀನಾಕ್ಷಿ, ಸಿಬ್ಬಂದಿ ಕೆ.ಗುರುರಾಜ, ಯು.ನಾಗರಾಜ, ಬಿ.ನಾರನಗೌಡ, ವಸಂತಕುಮಾರ, ಸಿದ್ದಿ ಮುಬಾರಕ್, ಆನಂದ, ವಾಸುದೇವ ನಾಯ್ಕ, ಸಿಡಿಆರ್ ವಿಭಾಗದ ಕುಮಾರನಾಯ್ಕ, ಚಾಲಕ ನಾಗರಾಜ್ ನಾಯ್ಕ, ಇಮಾಮ್ ಸಾಹೇಬ್ ಒಳಗೊಂಡ ತಂಡವೂ ಜುಲೈ 1 ರಂದು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಬಳಿಯಿದ್ದ ಆಭರಣಗಳನ್ನು ಜಫ್ತಿ ಮಾಡಲಾಗಿದೆ ಎಂದು ಎಸ್ಪಿ ಜಾಹ್ನವಿ ಅವರು ವಿವರಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಜಿ ಇದ್ದರು.
Leave a comment