Home ಗೃಹರಕ್ಷಕ ದಳ ಸಿಬ್ಬಂದಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
Homeಸುದ್ದಿಗಳು

ಗೃಹರಕ್ಷಕ ದಳ ಸಿಬ್ಬಂದಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Share
Share

ಹರಪನಹಳ್ಳಿ : ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಯಾವುದೇ ದುರಾಸೆಗಳಿಲ್ಲದೇ ಗೌರವಧನ ಪಡೆದು ಸಲ್ಲಿಸುವ ಅವರ ಸೇವೆ ಅತ್ಯಂತ ಮಾದರಿಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಕೋಡಿಹಳ್ಳಿ ಭೀಮಪ್ಪ ಅಭಿಪ್ರಾಯಪಟ್ಟರು ಗೃಹ ರಕ್ಷಕದಳದ ಘಟಕದಿಂದ ಏರ್ಪಡಿಸಿದ್ದ ನಿವೃತ್ತರಾದ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಸಮಾಜವನ್ನ ನಾನು ಮತ್ತು ನನ್ನ ಸಂಸಾರ ಅದರ ಜೊತೆಗೆ ಸಮಾಜದ ಕೆಲಸ ಮಾಡೋದು ಅಂದರೆ ಗೃಹರಕ್ಷಕ ದಳದಲ್ಲಿ ಮಾತ್ರ . ಇದರಲ್ಲಿ ನಾನು ಏನಾದ್ರೂ ಸಾಧನೆ ಮಾಡಬೇಕೆಂದು ಏನೆಲ್ಲಾ ಮಾಡಿದೆ ಆದರೆ ಅದು ಆಗಲಿಲ್ಲ ನನಗೆ ಇದ್ದದ್ದು ಒಂದೇ ಸಾಮಾಜಿಕ ಹೋರಾಟ,ಸಮಾಜ ಸೇವೆ,ಸಂಘಟನೆ ಇದರಲ್ಲೇ ಉಳಿದು ಬಿಟ್ಟೆ ಎರೆಡು ಜೊತೆ ಬಟ್ಟೆ ಎರಡೇ ಪುಸ್ತಕ ಇದೇ ನನ್ನ ದೊಡ್ಡ ಆಸ್ತಿಯಾಗಿತ್ತು. ಶ್ರೀಮಂತಿಕೆ ಮತ್ತು ಬಡತನ ಯಾವುದು ಶಾಶ್ವತ ಅಲ್ಲ ಹುಟ್ಟು ಮತ್ತು ಸಾವಿನ ಮಧ್ಯೆ ಇರುವುದರಲ್ಲಿ ಏನಾದರೂ ಸಾಧನೆ ಮಾಡೋದೇ ಆದರೆ ಅದು ಗೃಹರಕ್ಷಕ ದಳದಲ್ಲಿ ಮಾತ್ರ ಎಂಬ ಮಾತುಗಳನ್ನ ವ್ಯಕ್ತಪಡಿಸಿದರು.

ಗೃಹ ರಕ್ಷಕ ದಳ ಅಧಿಕಾರಿ ಎಸ್.ಎಂ. ಮಲ್ಲಿಕಾರ್ಜುನಯ್ಯ, ಗೃಹರಕ್ಷಕ ದಳ ಇಲಾಖೆಗೆ ಸೇರ್ಪಡೆಯಾಗಿ ಶ್ರದ್ಧೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇವೆ ಹಾಗೆ ಹಂತ ಹಂತವಾಗಿ ಮಳೆ ಬಿಸಿಲು ಎನ್ನದೇ ಯಾವುದೇ ಕರೆಗಳು ಬಂದರೆ ನಾವು ಅಲ್ಲಿ ಇರುತ್ತೇವೆ ನಮಗೆ ಯಾವುದೇ ಸಂಬಳ ಇರುವುದಿಲ್ಲ ನಮಗೆ ಸರ್ಕಾರವು ನೀಡುವಂತಹ ಗೌರವ ಧನ ಸಿಗುತ್ತದೆ ಸರ್ಕಾರವು ಇದರ ಬಗ್ಗೆ ಗಮನ ಹರಿಸಬೇಕು ಎಂದು ರವರು ತಮ್ಮ ಮಾತುಗಳನ್ನ ವ್ಯಕ್ತಪಡಿಸಿದರು.

ಪಿಎಸ್ಐ ಶಂಭುಲಿಗ ಹಿರೆಮಠ್ ಮಾತನಾಡಿ ವಿಶೇಷ ಎಂದರೆ ಕೆಲವೊಂದಿಷ್ಟು ಇಲಾಖೆಯಲ್ಲಿ ರಕ್ಷಣೆಗೆ ಕೆಲವು ಸಿಬ್ಬಂದಿಗಳು ಅವಶ್ಯಕತೆ ಇರುತ್ತದೆ ಆದರೆ ಅಗ್ನಿ ಶಾಮಕ ಶಾಮಕ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಸಿಬ್ಬಂದಿಗಳ ಕೊರತೆ ಇದ್ದರೆ ಗೃಹ ರಕ್ಷಕ ದಳವನ್ನು ಆಯ್ಕೆ ಮಾಡಲಾಗುತ್ತದೆ. ಇಲಾಖೆಯಲ್ಲಿ ಶಿಸ್ತಿನಿಂದ ಅಚ್ಚುಕಟ್ಟಾಗಿ ಕೆಲಸ ಮಾಡುವ ಇಲಾಖೆ ಎಂದರೆ ಅದು ಗೃಹರಕ್ಷಕ ದಳ ಎಂದು ಹೇಳುತ್ತಾ ತಮ್ಮ ನಿವೃತ್ತರಿಗೆ ಮುಂದಿನ ನಿವೃತ್ತ ಜೀವನ ಸುಖ-ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಹಿರಿಯ ಅಧಿಕಾರಿ ಪೂಜಾರ ವಾಗೀಶ್, ಎಂ.ಮಾಲತೇಶ್ ಅವರನ್ನು ಸನ್ಮಾನಿಸಿ ಹೃದಯಸ್ಪರ್ಶಿ ಬೀಳ್ಕೊಡಲಾಯಿತು. ಪಿಎಸ್ಐ ಶಂಭುಲಿಂಗ, ನಿವೃತ್ತ ಎಎಸ್ಐ ರುದ್ರಪ್ಪ, ಕೆ.ಸುಭಾಶ್, ಕೆ.ಉಮರ್, ಕೋಟೆಪ್ಪ, ಅಲ್ತಾಫ್, ಪತ್ರಕರ್ತರ ಸಮಿತಿ ಅಧ್ಯಕ್ಷ ಎ.ನಾಗೇಂದ್ರಪ್ಪ, ಪ್ರಕಾಶ್ ನಾಯ್ಕ ಇತರರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ಉಪ್ಪಾರ ನೌಕರರಿಂದ ಪ್ರತಿಭಾ ಪುರಸ್ಕಾರ

ಹರಪನಹಳ್ಳಿ: ಹಬ್ಬ ಹರಿದಿನಗಳ ಆಚರಣೆಯಲ್ಲಿ ಮೇಲ್ವರ್ಗದ ಸಮುದಾಯಗಳಿಗಿಂತ ಶೋಷಿತ ವರ್ಗದವರೇ ಹೆಚ್ಚು ದುಂದುವೆಚ್ಚ ಮಾಡುತ್ತಿರುವುದು ಕಳವಳಕಾರಿ...

Homeಸುದ್ದಿಗಳು

ಹರಪನಹಳ್ಳಿ : ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನ 

ಪ್ರಜಾಸೇವ ಆಂದೋಲನ ಜನರ ಹೃದಯಕ್ಕೆ ಮುಟ್ಟುವಂತಿರಲಿ ಹರಪನಹಳ್ಳಿ :  ಹಿಂದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಭರವಸೆಯಿಲ್ಲದೆ...

Homeಸುದ್ದಿಗಳು

ಬಾಲಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ 

ಹೊಸಪೇಟೆ (ವಿಜಯನಗರ ಜಿಲ್ಲೆ ) : ಏಳು ವರ್ಷದ ಬಾಲಕನನ್ನು ಅಪಹರಿಸಿ ಕಾಲುವೆಗೆ ಎಸೆದು ಕೊಲೆ...

Homeಸುದ್ದಿಗಳು

ಜೆಡಿಎಸ್ ಅಧ್ಯಕ್ಷರಾಗಿ ವಿ. ಮಲ್ಕಪ್ಪ ಆಯ್ಕೆ

ಹರಪನಹಳ್ಳಿ : ತಾಲ್ಲೂಕು ಜಾತ್ಯಾತೀತ ಜನತಾದಳದ (ಜೆಡಿಎಸ್) ನೂತನ ಅಧ್ಯಕ್ಷರಾಗಿ ತಾವರೆಗೊಂದಿ ಗ್ರಾಮದ ವಿ. ಮಲ್ಕಪ್ಪ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.