Home ಕನ್ನಡವೆಂದರೆ ಸಮಾನತೆ ಜಾತ್ಯಾತೀತತೆ
Homeಸುದ್ದಿಗಳು

ಕನ್ನಡವೆಂದರೆ ಸಮಾನತೆ ಜಾತ್ಯಾತೀತತೆ

Share
Share

ವಿಜಯನಗರ (ಹೊಸಪೇಟೆ): ಕನ್ನಡ ಕೇವಲ ಒಂದು ಭಾಷೆಯಲ್ಲ. ಎಲ್ಲಾ ಜಾತಿ, ಧರ್ಮಗಳ ಸಾಹಿತಿಗಳು ಭಾಷೆಯನ್ನು ಸದೃಢವಾಗಿ ಕಟ್ಟಿ ಬೆಳೆಸಿದ್ದಾರೆ. ಕನ್ನಡವೆಂದರೆ ಸೌಹಾರ್ದತೆ, ಸಮಾನತೆ ಮತ್ತು ಜಾತ್ಯಾತೀತೆ ಪ್ರತೀಕವಾಗಿ ಎಲ್ಲಾ ಜಾತಿ ಧರ್ಮಗಳನ್ನು ಮೀರಿದ ಭಾಷೆಯಾಗಿದೆ ಎಂದು ಹಿರಿಯ ವಿದ್ವಾಂಸರು ಹಾಗೂ ಸಂಸ್ಕೃತಿ ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ವಿಶ್ವವಿದ್ಯಾಲಯ ನುಡಿಹಬ್ಬ-34 ರ ಪ್ರಯುಕ್ತ ಪ್ರಸಾರಾಂಗ ವಿಭಾಗದಿಂದ ಮಂಗಳವಾರ ಮಂಟಪ ಸಭಾಂಗಣದಲ್ಲಿ 42 ಪುಸ್ತಕಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡವನ್ನು ಕೇಂದ್ರವನ್ನಾಗಿಟ್ಟುಕೊಂಡಿರುವ ಮತ್ತು ಸಂಶೋಧನೆಯನ್ನೇ ಜೀವಾಳವಾಗಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಸಮರ್ಪಕವಾಗಿ ಅನುದಾನ ಲಭ್ಯವಾಗುತ್ತಿಲ್ಲ. ಅನುದಾನ ಒದಗಿಸುವ ಮೂಲಕ ಹೆಚ್ಚು ಬೆಂಬಲ ಒದಗಿಸಬೇಕಿದೆ ಎಂದ ಅವರು. ಬಂದೇ ನವಾಜ್‌ರವರಿಗೆ ಸಿದ್ದಯ್ಯ ಸ್ವಾಮಿ, ಗೋವಿಂದ ಭಟ್ಟರಿಗೆ ಶಿಶುನಾಳ ಶರೀಫರು ಶಿಶ್ಯರಾಗಿರುವ ಮುಖೇನ ಜಾತ್ಯತೀತವಾಗಿ ಉಳಿದಿತ್ತು. ಆದರೆ ಇಂದು ಜಾತಿ, ಧರ್ಮದ ಕಾರಣಕ್ಕಾಗಿ ದ್ವೇಷದ ದೀಪಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಜನ ಸಾಮಾನ್ಯರಿಗೆ ಕನ್ನಡ ಕಟ್ಟುವಿಕೆಯಲ್ಲಿಯೇ ಜಾತ್ಯಾತೀತತೆ, ಸೌಹಾರ್ದತೆ ಎಂಬುದನ್ನು ತಿಳಿಸಿಬೇಕಿದೆ ಎಂದರು.
ಶೇ.5ರಷ್ಟು ಮಾನವಿಕ ಜ್ಞಾನ ಶಿಸ್ತು ಅಧ್ಯಯನ:
ಬ್ಯುಸಿನೆಸ್ ಇವೆಂಟ್ ಬಗ್ಗೆ ಶೇ.60 ರಷ್ಟು, ವಾಸ್ತುಶಿಲ್ಪ ಬಗ್ಗೆ ಶೇ.15, ಫ್ಯಾಷನ್ ಡಿಸೈನ್ ಕುರಿತು ಶೇ.10 ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್ ಶೇ.10 ರಷ್ಟು ಅಧ್ಯಯನ ಮಾಡಲಾಗುತ್ತಿದೆ. ಆದರೆ ಮಾನವಿಕ (ರಾಜಕೀಯ, ಸಾಮಾಜಿಕ, ಸಾಹಿತ್ಯ, ಅರ್ಥಶಾಸ್ತç ಮುಂತಾದವು) ಜ್ಞಾನಶಿಸ್ತು ಅಧ್ಯಯನದ ಕುರಿತು ಕೇವಲ ಶೇ.5 ರಷ್ಟು ಮಾತ್ರ ಅಧ್ಯಯನ, ಸಂಶೋಧನೆಗಳು ನಡೆಸಲಾಗುತ್ತಿದೆ. ಇವುಗಳನ್ನು ಉಳಿಸಿ, ಬೆಳೆಸುವುದು ಬಹುದೊಟ್ಟ ಸವಲಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇತಿಹಾಸ, ರಾಜ್ಯಶಾಸ್ತç, ಅರ್ಥಶಾಸ್ತç ಅಧ್ಯಯನ ಮಾಡಿದರೆಲ್ಲರಿಗೂ ಆಯಾ ವಿಷಯದ ಬಗ್ಗೆ ಒಂದಷ್ಟು ಪರಿಣಿತಿ ಹೊಂದಿರುತ್ತಾರೆ. ಆದರೆ ಸಾಹಿತಿಯಾದವರಿಗೆ ಈ ಎಲ್ಲಾ ವಸ್ತುಸ್ಥಿತಿ, ಜ್ಞಾನದ ಸಂವೇದನಾಶೀಲತೆ ಬಗ್ಗೆ ಅರಿವಿರಬೇಕು. ಆಗ ಮಾತ್ರ ಉತ್ತಮ ಸಾಹಿತಿಯಾಗಲು ಸಾಧ್ಯ ಎಂದರು.
ಬದುಕನ್ನು ಅರ್ಥೈಸಿಕೊಳ್ಳಲು ಮಾನವಿಕ ಜ್ಞಾನ ಅಗತ್ಯ:
ಪ್ರಸ್ತುತ ಆಧುನಿಕ ತಂತ್ರಜ್ಞಾನದ ಹಾವಳಿ ಹೆಚ್ಚಾಗಿದೆ. ಈ ತಂತ್ರಜ್ಞಾನ ಜ್ಞಾನವಾಗಿ ಉಳಿಯದೇ, ಒಂದು ಉದ್ಯಮವಾಗಿ ಉಳಿದುಕೊಂಡಿದೆ. ನವ ನವೀನ ತಂತ್ರಜ್ಞಾನಗಳ ಆವಿಷ್ಕಾರದಿಂದಾಗಿ ಆಧುನಿಕ ತಂತ್ರಜ್ಞಾನ ಮೇಲುಗೈ ಸಾಧಿಸಿ, ವಿಜ್ಞಾನ ಕೂಡ ಹಿನ್ನೆಲೆಗೆ ಸರಿದಿರುವುದು ದುರಂತವೇ ಸರಿ. ಹಾಗಂತ ತಂತ್ರಜ್ಞಾನವನ್ನು ನಿರಾಕರಿಸಬೇಕಿಲ್ಲ. ಆದರೆ ಅವುಗಳ ಬಳಕೆ ಕುರಿತು ವಿವೇಚನೆ ಮತ್ತು ಔಚಿತ್ಯ ಬೆಳೆಸಿಕೊಳ್ಳಬೇಕು. ಈ ತಂತ್ರಜ್ಞಾನಕ್ಕೂ ಜ್ಞಾನ ತುಂಬಿದ್ದು ಮನುಷ್ಯ. ಅಂತಹ ಮಾನವಿಕ ಜ್ಞಾನವುಳ್ಳ ಮನುಷ್ಯನಿಗೆ ಹಾಗೂ ಮಾನವಿಕ ಜ್ಞಾನಶಿಸ್ತಿಗೆ ಮೊದಲ ಆದ್ಯತೆ ನೀಡಬೇಕು. ಇತ್ತೀಚೆಗೆ ಕೃತಕಬುದ್ದಿ ಮತ್ತೆ (ಆರ್ಟಿಫಿಸಿಯಲ್ ಇಂಟಲಿಜೆನ್ಸ್) ಅತೀ ಹೆಚ್ಚು ಪ್ರಚಲಿತದಲ್ಲಿದ್ದು, ಜಗತ್ತಿನಲ್ಲಿ ಇವುಗಳಿಗೆ ಸಿಕ್ಕಷ್ಟು ಪ್ರಚಾರ, ಈ ದೇಶದ ಸಮಾನತೆ, ಸೌಹಾರ್ದತೆ ಪ್ರತಿನಿಧಿಸುವ ಬೃಹತ್ ಕೃತಿಗೆ ಸಿಗುತ್ತಿಲ್ಲ ಎಂದರು.
ಪುಸ್ತಕಗಳ ಓದಿನ ಪ್ರವೇಶ ಪೂರ್ವಗ್ರಹಗಳಿಂದ ಮುಕ್ತವಾಗಿರಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬೇಕು, ಆದರೆ ದ್ವೇಷಗಳಿರಬಾರದು. ಬೌದ್ಧಿಕ ವಿಭಜಕ ಪ್ರವೃತ್ತಿಗಳಿರಬಾರದು. ಲೇಖಕರಾದ ಪ್ರತಿಯೊಬ್ಬರೂ ಜನರಿಗೆ ಸತ್ಯವನ್ನು ಹೇಳುವ ಮರ್ಯಾದಸ್ಥ ಮನುಷ್ಯರಾಗೋಣ ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಪ್ರಸಾರಾಂಗವು 42 ಪುಸ್ತಕಗಳು ಸೇರಿ ಇದುವರೆಗೂ ಒಟ್ಟು 1,753 ಪುಸ್ತಕ ಪ್ರಕಟಿಸಿದೆ. ಮನುಷ್ಯನ ಬೌದ್ಧಿಕ ಜ್ಞಾನದ ಚಟುವಟಿಕೆಯ ಸಂಕೇತವಾಗಿವೆ. ಇತಿಹಾಸ, ಶಾಸನ, ಜಾನಪದ, ಸಂಸ್ಕೃತಿ ವಿಷಯಗಳ ಪುಸ್ತಕಗಳಿಂದ ಹಿಡಿದು ಎ.ಐ. ತಂತ್ರಜ್ಞಾನದವರೆಗೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಪ್ರಕಟಿಸಿರುವುದು ಹೆಗ್ಗಳಿಕೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರ ಅವರಿಗೆ ಸನ್ಮಾನಿಸಲಾಯಿತು.
ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಸಾರಾಂಗದ ನಿರ್ದೇಶಕ ಡಾ.ಪಿ.ಮಹಾದೇವಯ್ಯ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles
kannada
Homeಕ್ರೀಡೆ

ಹರಪನಹಳ್ಳಿಯಲ್ಲಿ ಗಮನ ಸೆಳೆದ ಬೀಳ್ಕೊಡುಗೆ

ಹರಪನಹಳ್ಳಿ : ಕ್ರೀಡೆ ಮತ್ತು ಇತರ ದೈಹಿಕ ಚಟುವಟಿಕೆಗಳು ಪಠ್ಯೇತರ ಚಟುವಟಿಕೆಗಳ ಪ್ರಮುಖ ಭಾಗವಾಗಿದ್ದು ವಿದ್ಯಾರ್ಥಿಗಳು...

nivrutta
Homeಕಲೆಕ್ರೀಡೆಶಿಕ್ಷಣ

ನೌಕರರ ಹಿತರಕ್ಷಣೆಗೆ ಸಂಘ ಸದಾ ಬದ್ಧ: ಎನ್.ಜಿ. ಮನೋಹರ ಭರವಸೆ

ಹರಪನಹಳ್ಳಿ: "ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ನೌಕರರ ಸಂಘ ಹಾಗೂ ತಾಲೂಕು ಘಟಕವು ಸದಾ ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದೆ" ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಎನ್.ಜಿ. ಮನೋಹರ ಅವರು ಭರವಸೆ ನೀಡಿದರು. ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ನಿವೃತ್ತ ನೌಕರರು, ನಿವೃತ್ತ ಶಿಕ್ಷಕರು ಹಾಗೂ ಬಡ್ತಿ ಹೊಂದಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಶಿಕ್ಷಕರು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆಯೇ ವಿನಃ ಅವರ ಅನುಭವದಿಂದಲ್ಲ. ನಿವೃತ್ತಿಯ ನಂತರವೂ ನಾವು ಮತ್ತು ನಿವೃತ್ತ ನೌಕರರ ಸಂಘ ಸದಾ ನಿಮ್ಮ ಜೊತೆಗಿರುತ್ತೇವೆ. ನಿವೃತ್ತ ಜೀವನದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ವ್ಯಾಯಾಮ, ಪುಸ್ತಕ ಓದುವುದು, ತೋಟಗಾರಿಕೆ, ಸಂಗೀತ, ಕಲೆ, ಯೋಗ ಅಥವಾ ವಾಕಿಂಗ್ ಮಾಡುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು" ಎಂದು ಮನೋಹರ ಅವರು ಕಿವಿಮಾತು ಹೇಳಿದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿ.ಎಚ್.ಎಂ ಮಾತನಾಡಿ, "ಮಹಿಳಾ ನೌಕರರಿಗೆ ಋತುಚಕ್ರದ ರಜೆ ಘೋಷಿಸುವಂತೆ ಸರ್ಕಾರಕ್ಕೆ ನಮ್ಮ ಸಂಘಟನೆಯು ಮೊದಲೇ ಧ್ವನಿಗೂಡಿಸಿ ಒತ್ತಾಯಿಸಿತ್ತು. ಹರಪನಹಳ್ಳಿ ತಾಲೂಕಿನಲ್ಲಿ ಈ ಹಿಂದೆ ನೌಕರರ ಪರವಾಗಿ ಇಂತಹ ಸಕ್ರಿಯ ಕಾರ್ಯಕ್ರಮಗಳು ನಡೆದಿರಲಿಲ್ಲ. ಆದರೆ ಪ್ರಸ್ತುತ ಅಧ್ಯಕ್ಷರಾದ ಮನೋಹರ್ ಅವರು ಹತ್ತಾರು ಜನಪರ ಕಾರ್ಯಕ್ರಮಗಳ ಮೂಲಕ ತಾಲೂಕು ಸಂಘಟನೆಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿಸಿದ್ದಾರೆ. ಸಂಘಟನೆಗಳು ವೃತ್ತಿಯ ಜೊತೆಗೆ ಪ್ರವೃತ್ತಿಯಾಗಬೇಕೇ ಹೊರತು, ಸಂಘಟನೆಯೇ ವೃತ್ತಿಯಾಗಬಾರದು. ನಾವೆಲ್ಲರೂ ಸೇರಿ ತಾಲೂಕಿನ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸೋಣ" ಎಂದರು. ಮಂಜುನಾಥ ಪೂಜಾರ್ ಅವರು ಮಾತನಾಡಿ, "ಶಾಲೆಗಳಲ್ಲಿ ೩೦ ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಶಿಕ್ಷಕರ ಸಮಯಪಾಲನೆ, ಕರ್ತವ್ಯ ನಿಷ್ಠೆ ಮತ್ತು ಮಕ್ಕಳೊಂದಿಗಿನ ಮಧುರ ಬಾಂಧವ್ಯ ನಿಜಕ್ಕೂ ಶ್ಲಾಘನೀಯ. ಇವರ ನಿವೃತ್ತ ಜೀವನ ಸುಖಕರವಾಗಿರಲಿ" ಎಂದು ಹಾರೈಸಿದರು. ಬಿಇಒ ಕಚೇರಿಯ ಇಸಿಒ ವೀರೇಶ್ ಮಾತನಾಡಿ, ನಿವೃತ್ತ ಹಾಗೂ ಬಡ್ತಿ ಪಡೆದ ಮುಖ್ಯ ಶಿಕ್ಷಕರನ್ನು ಕರೆಸಿ ಗೌರವಿಸುತ್ತಿರುವ ನೌಕರರ ಸಂಘದ ಕಾರ್ಯ ಸ್ತುತ್ಯರ್ಹ ಎಂದರು. ಶಿಕ್ಷಕ ಬಿ. ಆಂಜನೇಯ ಅವರೂ ಸಹ ವೇದಿಕೆಯಲ್ಲಿ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ ನಿವೃತ್ತ ಶಿಕ್ಷಕ ಸಲಾಂ ಅವರು "ಪ್ರೀತಿಯ ಗಾಳಿ ಬೀಸುತ್ತಿದೆ..." ಎಂಬ ಗೀತೆಯನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.  ಸರ್ಕಾರಿ ನೌಕರರ ಸಂಘದ ರಾಜ್ಯ...

darmastala yojane
Homeರಾಜಕೀಯವಿಶೇಷ ವರದಿಗಳು

ದೇವರ ತಿಮ್ಲಾಪುರದಲ್ಲಿ ನಡೆದ ಮದ್ಯವರ್ಜನ ಶಿಬಿರದ ಮಾಹಿತಿ ಇಲ್ಲಿದೆ

ಹರಪನಹಳ್ಳಿ :  "ಇದು ಕೇವಲ ಶಿಬಿರವಲ್ಲ, ಕುಟುಂಬಗಳನ್ನು ಕಟ್ಟುವ ಹಾಗೂ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ಪವಿತ್ರ ಕಾರ್ಯ. ಅಂಧಕಾರದಲ್ಲಿದ್ದ ಬಾಳಿಗೆ ಬೆಳಕು ನೀಡುವ ಈ ಕಾರ್ಯ ಸಮಾಜಕ್ಕೆ ಮಾದರಿ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ ಸ್ವಾಮೀಜಿ ತಿಳಿಸಿದರು. ನಗರದ ಹೊರವಲಯದ ದೇವರ ತಿಮ್ಮಾಲಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ '2060ನೇ ಮದ್ಯವರ್ಜನ ಶಿಬಿರ' ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.ಸಂಸಾರದಲ್ಲಿ ಸರಸ, ವಿರಸಗಳು ಬಂದು...

ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವಿರೋಧ ಆಯ್ಕೆ!
Homeರಾಜಕೀಯ

ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವಿರೋಧ ಆಯ್ಕೆ!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಶನಿವಾರ ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸದಾ ಕುತೂಹಲ ಮೂಡಿಸುತ್ತಿದ್ದ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.