ಹೊಸಪೇಟೆ (ವಿಜಯನಗರ) : ಪಾಶ್ಚಿಮಾತ್ಯ ದೇಶಗಳಲ್ಲಿನ ಯುದ್ಧದ ಸನ್ನಿವೇಶವನ್ನು ಮುಂದಿಟ್ಟುಕೊಂಡು ಗೃಹ ಬಳಕೆ ಅನಿಲ (LPG) ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂಬ ಸುಳ್ಳು ವದಂತಿಗಳು ವ್ಯಾಪಕವಾಗಿ ಹಬ್ಬಿವೆ. ಆದರೆ, ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಿಲ ಕೊರತೆಯಿಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಡುಗೆ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುದ್ಧದ ನೆಪವೊಡ್ಡಿ ಗ್ಯಾಸ್ ಸಿಲಿಂಡರ್ ಕೊರತೆಯಾಗಲಿದೆ ಎಂಬ ವದಂತಿಗಳನ್ನು ಸಾರ್ವಜನಿಕರು ನಂಬಬಾರದು. ಜಿಲ್ಲೆಯಲ್ಲಿ ಯಾವುದೇ ಅನಿಲ ಕೊರತೆ ಉಂಟಾಗಿಲ್ಲ.
ಸರ್ಕಾರದ ನಿಯಮಾನುಸಾರ ಗ್ಯಾಸ್ ಏಜೆನ್ಸಿಗಳ (ಅನಿಲ ವಿತರಕ ಸಂಸ್ಥೆ) ಮೂಲಕ ಪೂರೈಕೆ ಸುಗಮವಾಗಿ ನಡೆಯಲಿದೆ. ಜಿಲ್ಲೆಯಲ್ಲಿ ಯಾರಾದರೂ ಅಕ್ರಮವಾಗಿ ಸಿಲಿಂಡರ್‌ಗಳನ್ನು ಸಂಗ್ರಹಿಸಿರುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಗ್ಯಾಸ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಗ್ರಾಹಕರು ನೇರವಾಗಿ ತಮ್ಮ ಅನಿಲ ವಿತರಕ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗಬಾರದು. ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅನಿಲ ಪೂರೈಕೆ ಉದ್ಯಮದ ಮುಖ್ಯಸ್ಥರು ಉಪಸ್ಥಿತರಿದ್ದರು.
- DC Kavitha Mannikeri
- Gas shortage rumors
- Harapanahalli local news
- Hosapete news
- Kannada news updates
- LPG gas cylinder shortage
- Vijayanagara district news
- ಅಡುಗೆ ಅನಿಲ ಕೊರತೆ
- ಎಲ್ಪಿಜಿ ಪೂರೈಕೆ
- ಕನ್ನಡ ಸುದ್ದಿ
- ಗ್ಯಾಸ್ ಸಿಲಿಂಡರ್ ವದಂತಿ
- ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ
- ಪ್ರಜಾವಾಣಿ ವರದಿ
- ವಿಜಯನಗರ ಜಿಲ್ಲೆ ಸುದ್ದಿ
- ಹರಪನಹಳ್ಳಿ ಅಪ್ಡೇಟ್ಸ್
- ಹೊಸಪೇಟೆ ವಾರ್ತೆ
Leave a comment