Home ಸುದ್ದಿಗಳು ನವಜ್ಯೋತಿ ಸಂಸ್ಥೆಯಿಂದ 25 ಸಾಧಕರಿಗೆ ಪ್ರಶಸ್ತಿ
ಸುದ್ದಿಗಳು

ನವಜ್ಯೋತಿ ಸಂಸ್ಥೆಯಿಂದ 25 ಸಾಧಕರಿಗೆ ಪ್ರಶಸ್ತಿ

Share
NAVAJYOTI-KANNADA-SAMSTE-HARAPANAHALLI
Share

ಹರಪನಹಳ್ಳಿ  : ವಿದ್ಯಾರ್ಥಿಗಳಿಗೆ ಕನ್ನಡ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಗಮನಹರಿಸುವ ಅಗತ್ಯವಿದೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ ತಿಳಿಸಿದರು.
ಬಸಮ್ಮ ಕಲಾಮಂದಿರದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ   ನಾಡು–ನುಡಿ ಗೀತಗಾಯನ ಸ್ಪರ್ಧೆ, ವಿಶೇಷ ಉಪನ್ಯಾಸ, ಪ್ರಶಸ್ತಿ ಪ್ರಧಾನ‌ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವ್ಯವಹಾರಕ್ಕೆ ಬೇರೆ ಭಾಷೆ ಅಗತ್ಯವಿದೆ. ಆದರೆ ಮಾತೃಭಾಷೆ ಕನ್ನಡ‌ ಮರೆಯಬಾರದು ಎಂದರು. ಉಪನ್ಯಾಸ ನೀಡಿದ ಶಿಕ್ಷಕ ಕೂಡ್ಲಿಗಿ ಬಿ.ಬಿ. ಶಿವಾನಂದ ಮಾತನಾಡಿ, ಹನ್ನೆರಡನೆ ಶತಮಾನದ ವಚನ ಸಾಹಿತ್ಯ ಅತ್ಯಂತ ಶ್ರೇಷ್ಠವಾಗಿದ್ದು, ಕನ್ನಡದ ಹಿರಿಮೆ ಹೆಚ್ಚಿಸಿದೆ ಎಂದರು. ಶಿಕ್ಷಕ ಟಿ.ಹೆಚ್.ಎಂ. ಶೇಖರಯ್ಯ ಗೆದ್ದಲಗಟ್ಟೆಮಾತನಾಡಿ, ‘ಜನಪದ ಸಾಹಿತ್ಯವೇ ಕನ್ನಡ ಸಾಹಿತ್ಯದ ಮೂಲಬೇರು ಎಂದು ಹೇಳಿದರು.ಕನ್ನಡ ಉಪನ್ಯಾಸಕ‌ ಎಚ್‌.ಮಲ್ಲಿಕಾರ್ಜುನ, ಅಧ್ಯಕ್ಷತೆ ವಹಿಸಿದ್ದ ಸಪ್ನ‌‌ ಮಲ್ಲಿಕಾರ್ಜುನ ಮಾತನಾಡಿದರು.  ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಕೆ.ಎಂ.ದಿಶಾ, ಅಮೃತ, ಐಸಿರಿ ಅವರಿಗೆ ಬಹುಮಾನ ವಿತರಿಸಿದರು. ಕೆ.ಈಶ್ವರಪ್ಪ, ಎ‌.ಅಬ್ದಲ್ ಸಲಾಂ, ಶರಣಮ್ಮ, ಎಸ್.ಎಂ‌.ಮಲ್ಲಯ್ಯ, ಚೇತನ್ ರಾಜ್  ಇದ್ದರು.
ನಾಡುನುಡಿ ಗೀತಗಾಯನ ಸ್ಪರ್ಧೆ

ಪ್ರೌಢಶಾಲಾ ವಿದ್ಯಾರ್ಥಿಗಳ ನಾಡು–ನುಡಿ ಗೀತಗಾಯನ ಸ್ಪರ್ಧೆ ಅತ್ಯಂತ ಚೈತನ್ಯದಿಂದ ನಡೆಯಿತು. ತೀರ್ಪುಗಾರರಾಗಿ ಅರ್ಜುನ್ ಪರಸಪ್ಪ, ಕೆ. ಈಶ್ವರಪ್ಪ ಮತ್ತು ಎ. ಅಬ್ದುಲ್ ಸಲಾಂ ಶಿಕ್ಷಕರು ಸೇವೆ ಸಲ್ಲಿಸಿದರು.

ಸ್ಪರ್ಧಾ ಫಲಿತಾಂಶ

ಪ್ರಥಮ ದಿಶಾ ಕೆ.ಎಂ – ಪರ್ಲ್ ಪಬ್ಲಿಕ್ ಸ್ಕೂಲ್, ಅಮೃತ ಸೊಂಡೂರು – ವಿದ್ಯಾನಿಧಿ ಶಾಲೆ ದ್ವಿತೀಯ, ಐಸಿರಿ – ಪರ್ಲ್ ಪಬ್ಲಿಕ್ ಸ್ಕೂಲ್, ತೃತೀಯ ಬಹುಮಾನ ಪಡೆದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು.

ಪ್ರಶಸ್ತಿ ಪುರಸ್ಕೃತರು

ಕನ್ನಡ ಸೇವೆ, ಸಾಹಿತ್ಯ–ಸಂಸ್ಕೃತಿ ಹಾಗೂ ಸಾಮಾಜಿಕ ಪ್ರಗತಿಗೆ ಶ್ರಮಿಸಿದ ಕೂಡ್ಲಿಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಧ್ಯಕ್ಷ ಅಂಗಡಿ ವೀರೇಶ್, ಹಿರಿಯ ಸಾಹಿತಿ ಎನ್.ಎಂ.ರವಿಕುಮಾರ್, ಎಂ.ಬಿ. ಅಯ್ಯನಹಳ್ಳಿ ಯರಿಬಸಪ್ಪ, ಕೂಡ್ಲಿಗಿ ಬಿ.ಎಂ. ಗಿರೀಶ, ಅರವಿಂದ ಬಸಾಪುರ, ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಗಿರಜ್ಜಿ ನಾಗರಾಜ,  ಕರ್ನಾಟಕ ಚು.ಸಾ.ಪ. ಅಧ್ಯಕ್ಷ ಬಣಕಾರ ರಾಜಶೇಖರ್, ಉಪನ್ಯಾಸಕ  ಮಾಳ್ಗಿ ಮಂಜುನಾಥ    ಮುಖ್ಯ ಶಿಕ್ಷಕ ಅರ್ಜುನ್ ಪರಸಪ್ಪ, ಶಿಕ್ಷಕಿ ಶರಣಮ್ಮ ,  ಎಲ್.ಎಂ. ಮಂಜಾನಾಯ್ಕ, ಪ್ರಗತಿಪರ ಮುಖಂಡ ಗುಡಿಹಳ್ಳಿ ಹಾಲೇಶ್,    ನಾಗರಾಜ ಪಾಟೀಲ,ಟಿ.ನಂದೀಶ್ ಆಚಾರ್, ವಿನಾಯಕ ಭಜಂತ್ರಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಸುಭಾಷ್ ಅವರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Share

Leave a comment

Leave a Reply

Your email address will not be published. Required fields are marked *

Related Articles
Homeಸುದ್ದಿಗಳು

ರೋಗನಿರೋಧಕ ಶಕ್ತಿ ಹೆಚ್ಚಿಸಲು ತಾಯಿಯ ಎದೆಹಾಲು ಅತ್ಯಗತ್ಯ: ಡಿಹೆಚ್‌ಒ ಡಾ.ಟಿ.ಲಿಂಗರಾಜು

ವಿಜಯನಗರ (ಹೊಸಪೇಟೆ) : ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಬಹುಮುಖ್ಯವಾಗಿದೆ....

Homeಸುದ್ದಿಗಳು

ಸಂಪುಟ ವಿಸ್ತರಣೆ ಕೌತುಕಕ್ಕೆ ಇಂದು ತೆರೆ: ಸಂಜೆ ರಾಜಭವನದಲ್ಲಿ 20 ನೂತನ ಸಚಿವರ ಪದಗ್ರಹಣ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ...

Homeಸುದ್ದಿಗಳು

ನರೇಗಾ ಮಾದರಿ ಕಾಮಗಾರಿ ಮರುಸ್ಥಾಪನೆಗೆ ಆಗ್ರಹ

ಹರಪನಹಳ್ಳಿ : ಹೊಸದಾಗಿ ಜಾರಿಗೆ ತಂದಿರುವ ವಿಬಿಜಿ ರಾಮ್‍ಜಿ ಕಾಯ್ದೆಯಡಿ ಹಳೆಯ ನರೇಗಾ ಮಾದರಿ ಕಾಮಗಾರಿಗಳನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ...

Homeಸುದ್ದಿಗಳು

ಮಾನವನ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ

ದಾವಣಗೆರೆ : ಕರ್ನಾಟಕವನ್ನು ಮಾನವ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸಲು ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಹಾಗೂ ಸಾಗಾಣಿಕೆಗೆ...

Sirisuddi@gmail.com

'ಸಿರಿಸುದ್ದಿ.com' ಕರುನಾಡಿನ, ಅದರಲ್ಲೂ ವಿಶೇಷವಾಗಿ ಹರಪನಹಳ್ಳಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂಬಿಕಾರ್ಹ ಆನ್‌ಲೈನ್ ಸುದ್ದಿ ಪೋರ್ಟಲ್. ರಾಜಕೀಯ, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸ್ಥಳೀಯ ವಿದ್ಯಮಾನಗಳ ನಿಖರವಾದ ಸುದ್ದಿಗಳನ್ನು ಯಾವುದೇ ರಾಜಿ ಇಲ್ಲದೆ, ಅತ್ಯಂತ ವೇಗವಾಗಿ ಓದುಗರಿಗೆ ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಾಮಾಣಿಕ ಪತ್ರಿಕೋದ್ಯಮ ನಮ್ಮ ಹೆಗ್ಗುರುತು.